Advertisement

ಒಎನ್‌ಜಿಸಿ ನಿವ್ವಳ ಲಾಭ ಬರೋಬ್ಬರಿ 15,206 ಕೋಟಿ ರೂ.

07:31 PM Aug 13, 2022 | Team Udayavani |

ಜೂನ್‌ ಅಂತ್ಯಕ್ಕೆ ಮುಕ್ತಾಯವಾದ ತ್ತೈಮಾಸಿಕ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ(ಒಎನ್‌ಜಿಸಿ) ಬರೋಬ್ಬರಿ 15,205.85 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದೆ.

Advertisement

ಕಂಪನಿಯ ಲಾಭವು ಶೇ.251ರಷ್ಟು ಜಿಗಿದಿದ್ದು, ಆದಾಯವು ಶೇ.84ರಷ್ಟು ಹೆಚ್ಚಳವಾಗಿದೆ. ಜೂನ್‌ಗೆ ಅಂತ್ಯವಾದ ತ್ತೈಮಾಸಿಕದಲ್ಲಿ ಕಂಪನಿ 42,321 ಕೋಟಿ ರೂ. ಆದಾಯಗಳಿಸಿದೆ.

ತೈಲ ದರ ಮತ್ತು ದೇಶೀಯ ಗ್ಯಾಸ್‌ ದರದಲ್ಲಾದ ಹೆಚ್ಚಳದಿಂದಾಗಿ ಆದಾಯ ಏರಿಕೆಯಾಗಿದೆ ಎಂದು ಕಂಪನಿ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next