Advertisement

ಹೊರಬರಲಿದೆ ಒನ್‌ ಪ್ಲಸ್‌ ಕಂಪನಿಯ ಮೊದಲ ಟ್ಯಾಬ್‌.. ಏನಿದರ ವಿಶೇಷತೆ..?

06:30 PM Feb 09, 2023 | Team Udayavani |

ಒನ್‌ ಪ್ಲಸ್‌ ಕಂಪನಿಯ ಮೊದಲ ಟ್ಯಾಬ್‌ ಹೊರಬರಲಿದೆ ಎಂಬ ಗುಸುಗುಸು ಸುದ್ದಿಯ ನಡುವೆಯೇ ತನ್ನ ಟ್ಯಾಬ್‌ ಹೊರತರುತ್ತಿರುವ ಮಾಹಿತಿಯನ್ನು ಕಂಪನಿ ತನ್ನ ಕ್ಲೌಡ್‌ 11 ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಘೋಷಿಸಿದೆ.

Advertisement

ಈ ಮೂಲಕ ಟ್ಯಾಬ್‌ ಕ್ಷೇತ್ರದಲ್ಲೂ ಆಪಲ್‌,ಕ್ಸಿಯೋಮಿ, ಲೆನೊವೊ, ಸ್ಯಾಮ್‌ಸಂಗ್‌ ಮೊದಲಾದ ಕಂಪನಿಗಳಿಗೆ ಸೆಡ್ಡು ಹೊಡೆಯಲು ಒನ್‌ ಪ್ಲಸ್‌ ಸಿದ್ಧವಾದಂತಾಗಿದೆ.

ಒನ್‌ ಪ್ಲಸ್‌ ಟ್ಯಾಬ್‌ ತೀರಾ ಕಡಿಮೆ ಭಾರ ಹೊಂದಿರಲಿದ್ದು ಕೇವಲ 6.5 ಎಂ.ಎಂ ದಪ್ಪವಿರಲಿದೆ. ಇದು ನಾಲ್ಕು ಸ್ಪೀಕರ್‌ಗಳನ್ನು ಕೂಡಾ ಹೊಂದಿರಲಿದ್ದು ನಿಮ್ಮ ಬಳಕೆಗೆ ಅನುಸಾರ ಎಡ ಮತ್ತು ಬಲ ಸ್ಪೀಕರ್‌ಗಳು ಕಾರ್ಯನಿರ್ವಹಿಸಲಿದೆ.

ಇದು ಜಗತ್ತಿನ ಮೊದಲ 7:5 ಡಿಸ್ಪ್ಲೇ ಹೊಂದಿರುವ ಟ್ಯಾಬ್‌ ಎಂಬ ಹಿರಿಮೆಗೆ ಪಾತ್ರವಾಗಲಿದ್ದು, 11.61 ಇಂಚಿನ ಎಲ್‌ಸಿಡಿ ಪ್ಯಾನಲ್‌ ಮತ್ತು 114Hz ರಿಫ್ರೆಷ್‌ ರೇಟ್‌ ಹೊಂದುವ ಮೂಲಕ ಟೆಕ್‌ ಪ್ರಿಯರ ಖುಷಿಯನ್ನು ಇಮ್ಮಡಿಗೊಳಿಸಲಿದೆ.

Advertisement

ಈ ಟ್ಯಾಬ್‌ನಲ್ಲಿ 2800*2000 ಪಿಕ್ಸೆಲ್‌ ರೆಸೊಲ್ಯೂಷನ್‌ ಅಲ್ಲದೆ 128 GB RAM, 256 GB ಸ್ಟೋರೇಜ್‌ ಇರಲಿದೆ.  9,510 mAhನ ಬ್ಯಾಟರಿ ಹೊಂದಿರಲಿದ್ದು 67 W ಫಾಸ್ಟ್‌ ಚಾರ್ಜಿಂಗ್‌ ವ್ಯವಸ್ಥೆ ಇದೆ.

ಅಲ್ಲದೆ 4K ವಿಡಿಯೋ ರೆಕಾರ್ಡಿಂಗ್‌ ಸಪೋರ್ಟ್‌ನ 13 ಮೆಗಾಪಿಕ್ಸೆಲ್‌ ರಿಯರ್‌ ಕ್ಯಾಮರಾವನ್ನೂ ಈ ಮನಮೋಹಕ ಟ್ಯಾಬ್‌ ಹೊಂದಿರಲಿದೆ ಎಂದು ಕಂಪನಿ ತಿಳಿಸಿದೆ.

ಇನ್ನು ಕಂಪನಿ ಟ್ಯಾಬ್‌ ಬೆಲೆವನ್ನು ಖಚಿತವಾಗಿ ಇನ್ನೂ ಹೇಳದೇ ಇದ್ದರೂ ಕಂಪನಿ ತನ್ನ ಮೊದಲ ಟ್ಯಾಬ್‌ಗೆ ಸರಿಸುಮಾರು 40,000 ರೂ. ದರ ನಿಗದಿ ಪಡಿಸಬಹುದು ಎಂದು ಟೆಕ್‌ ಪ್ರಿಯರು ಅಂದಾಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next