Advertisement

ಆನ್ಲೈನ್ ನಲ್ಲಿ ಸೋರಿಕೆಯಾಯ್ತು ಒನ್ ಪ್ಲಸ್ 9 ಫೋನ್ ನ ಚಿತ್ರ..!

10:32 AM Jan 28, 2021 | Team Udayavani |

ನವ ದೆಹಲಿ : ಒನ್‌ ಪ್ಲಸ್ 9 ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಬಿಡುಗಡೆಗೊಳ್ಳಲಿದೆ ಎಂಬ ವದಂತಿಗಳು ಹರಿದಾಡುತ್ತಿರವಾಗಲೇ  ಒನ್‌ ಪ್ಲಸ್ 9 ಫೋನ್ ನ ವಿಶೇಷಗಳು ಮತ್ತು ವಿನ್ಯಾಸವು ಆನ್ಲೈನ್ ನಲ್ಲಿ ಹೊರಬಿದ್ದ ಲೈವ್ ಇಮೇಜ್ ಮೂಲಕ ಸೋರಿಕೆಯಾಗಿದೆ.

Advertisement

ಇನ್ನು,  ಸೋರಿಕೆಯಾದ ಒನ್‌ ಪ್ಲಸ್ 9 ನ ಚಿತ್ರವು ಸಿಲ್ವರ್ ಕಲರ್ ನಲ್ಲಿ ಇದೆ. ಈ ಬರುವ ಮಾರ್ಚ್ ನಲ್ಲಿ ಬಿಡುಗಡೆಗೊಳ್ಳಲಿದೆ ಎನ್ನಲಾಗುತ್ತಿರುವ ಒನ್‌ ಪ್ಲಸ್ 9 ಫೋನ್‌, ಹೋಲ್ ಪಂಚ್ ವಿನ್ಯಾಸ ಮತ್ತು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಜೊತೆಗೆ ಲೇಸರ್ ಆಟೋಫೋಕಸ್ ಮಾಡ್ಯೂಲ್  ನೊಂದಿಗೆ ಬರಲಿದೆ.

ಓದಿ : ಮಾರಕಾಸ್ತ್ರ ಹಿಡಿದು ಯುವಕರಿಗೆ ಥಳಿತ, ದರೋಡೆ: ಆರು ಮಂದಿ ಖದೀಮರ ಸೆರೆ

ಒನ್‌ ಪ್ಲಸ್ 9 ಪ್ರೊ ಜೊತೆಗೆ ಒನ್‌ಪ್ಲಸ್ 9 ಇ ಅಥವಾ ಒನ್‌ಪ್ಲಸ್ 9 ಲೈಟ್ ಎಂದು ಕರೆಯಲ್ಪಡುವ ಹ್ಯಾಂಡ್ ಸೆಟ್ ಗಳು ಕೈಗೆಟುಕುವ ದರದಲ್ಲಿ  ಲಭ್ಯವಾಗಲಿದೆ ಎಂಬುವುದು ವರದಿಯಾಗಿದೆ.

ಫೋನ್, ಹಿಂಭಾಗದಲ್ಲಿ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದ್ದು, ಅದು ಮೂರು ಲಂಬವಾಗಿ ಜೋಡಿಸಲಾದ ಕ್ಯಾಮೆರಾ ಸೆನ್ಸರ್  ಜೊತೆಗೆ ಲೇಸರ್ ಆಟೋ ಫೋಕಸ್ ಹೊಂದಿದೆ.

Advertisement

ಒನ್ ಪ್ಲಸ್ 9 ಫೋನ್ ನಲ್ಲಿ ಏನೇನಿದೆ..?

ಈ ಫೋನ್ ನಲ್ಲಿ 12GB RAM ಮತ್ತು 256 GB ಆನ್ಬೋರ್ಡ್ ಸ್ಟೋರೇಜನ್ನು ಹೊಂದಿದೆ.. ಆನ್ಲೈನ್ ಸೋರಿಕೆಯಲ್ಲಿ ಬಿಡುಗಡೆಯಾದ ಚಿತ್ರ ತೋರಿಸುವ ಪ್ರಕಾರ ಫೋನ್  6.54 ಅಥವಾ 6.34-ಇಂಚಿನ 120Hz ಫ್ಲೂಯಿಡ್ ಅಮೋಲೆಡ್ ಡಿಸ್ ಪ್ಲೇ (Fluid AMOLED Display) ಹೊಂದಿದೆ ಎಂಬಂತೆ ಕಂಡುಬರುತ್ತಿದೆ. ಕ್ಯಾಮೆರಾಗಳ ವಿಷಯದಲ್ಲಿ, ಎರಡು 48 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಒಂದು 8 ಮೆಗಾಪಿಕ್ಸೆಲ್ ಸೆನ್ಸಾರ್ ಇದೆ ಎಂದು ಸೋರಿಕೆಯಾದ ಚಿತ್ರವು ತಿಳಿಸುತ್ತಿದೆ.

ಓದಿ : ಬಾಲಿವುಡ್ ಹಾಟ್ ಬ್ಯೂಟಿ ದಿಶಾ ಪಟಾನಿ ಗ್ಲಾಮರಸ್ ಲುಕ್ಸ್

Advertisement

Udayavani is now on Telegram. Click here to join our channel and stay updated with the latest news.

Next