Advertisement
ಸೋರಿಕೆಯ ಆಧಾರದ ಮೇಲೆ, ಒನ್ ಪ್ಲಸ್ 9 ಪ್ರೊ ಅನ್ನು ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 888 SoC ನಿಂದ ಹೊಂದಿದೆ, ಒನ್ ಪ್ಲಸ್ 9e ಅಥವಾ ಒನ್ ಪ್ಲಸ್ 9 ಲೈಟ್ ಅನ್ನು ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 690 SoC ನಿಂದ ನಿಯಂತ್ರಿಸಬಹುದು. ಕೈಗೆಟುಕುವ ಮಾದರಿಯು 5,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಪ್ಯಾಕ್ ಮಾಡುವ ನಿರೀಕ್ಷೆಯಿದೆ.
Related Articles
Advertisement
ಒನ್ ಪ್ಲಸ್ 9 ಇ ನಲ್ಲಿ ನಿರೀಕ್ಷಿಸಬಹುದಾದ ವಿಶೇಷತೆಗಳೇನು..?
ಒನ್ ಪ್ಲಸ್ ಸೀರೀಸ್ ಕೈಗೆಟುಕುವ ಮಾಡೆಲ್ ಗಳಲ್ಲಿ ಲಭ್ಯವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಒನ್ ಪ್ಲಸ್ 9 ಲೈಟ್ ಅಥವಾ ಒನ್ ಪ್ಲಸ್ 9 ಇ ಮೂಲಕ ಅದು ಸತ್ಯವಾಗಲಿದೆ ಎಂದು ವರದಿಯಾಗಿದೆ. 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಒಳಗೊಂಡಿರುವ ಈ ಫೋನ್ ಸ್ನ್ಯಾಪ್ ಡ್ರಾಗನ್ 690 ಎಸ್ ಒ ಸಿ ಯಿಂದ ಚಾಲಿತವಾಗಿದೆ. ಇದು 6.5-ಇಂಚಿನ ಡಿಸ್ಪ್ಲೇಯನ್ನು 1,800×2,400 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ರೇಟ್ ಹೊಂದಿರುತ್ತದೆ. ಕ್ಯಾಮೆರಾಗಳಿಗೆ ಸಂಬಂಧಿಸಿದಂತೆ, ಒನ್ ಪ್ಲಸ್ 9 ಇ ಅಥವಾ ಒನ್ ಪ್ಲಸ್ 9 ಲೈಟ್ 64 ಮೆಗಾಪಿಕ್ಸೆಲ್ ಮೈನ್ ಸೆನ್ಸಾರ್ ಹೊಂದಿರುವ ಎಫ್/1.7 ಅಪರ್ಚರ್ ಮತ್ತು 8 ಮೆಗಾಫಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು. ಬ್ಯಾಟರಿ 5,000mAh ಸಾಮರ್ಥ್ಯವುಳ್ಳದ್ದಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ.