Advertisement
ಒನ್ ಪ್ಲಸ್ ಕಂಪೆನಿ ಅತ್ಯುನ್ನತ ದರ್ಜೆಯ (ಫ್ಲಾಗ್‌ಶಿಪ್) ಮೊಬೈಲ್‌ಗಳನ್ನು ತಯಾರಿಸಿ ಗ್ರಾಹಕರಿಗೆ ಮಿತವ್ಯಯದ ದರದಲ್ಲಿ ನೀಡುತ್ತಾ ಬಂದಿದೆ. ಈ ಬ್ರಾಂಡ್‌ಗೆ ತನ್ನದೇ ಆದ ವಿಶಿಷ್ಟ ಹೆಸರಿದೆ.
Related Articles
Advertisement
ಫೋನನ್ನು ಬಾಕ್ಸ್‌ನಿಂದ ಹೊರ ತೆಗೆದಾಗ ಅದರ ಸೌಂದರ್ಯಕ್ಕೆ ಮರಳಾಗುತ್ತೀರಿ! ಅಂಚಿನಲ್ಲಿ ಮಡಚಿರುವ ಪರದೆ, ಗಾಜಿನ ದೇಹ ಉಳ್ಳ ಹಿಂಬದಿ, ಕಡು ನೀಲಿಬಣ್ಣ ಎರಡು ಛಾಯೆಯಲ್ಲಿ ಹರಳುಗಳ ರೀತಿ ಹೊಳೆಯುತ್ತದೆ. ಫೋನಿನ ಸುತ್ತಲಿನ ಫ್ರೆàಂ ಲೋಹದ್ದಾಗಿದೆ. ಎಡಗಡೆ ಧ್ವನಿ ಹೆಚ್ಚಿಸುವ ಇಳಿಸುವ ಗುಂಡಿ, ಬಲಗಡೆ ಆನ್ ಮತ್ತು ಆಫ್ ಗುಂಡಿ (ಬಟನ್) ಇದೆ. ಅದರ ಮೇಲೆ, ಇತರ ಫೋನ್‌ಗಳಲ್ಲಿಲ್ಲದ, ಒನ್‌ಪ್ಲಸ್ ಫೋನ್‌ಗಳಲ್ಲಿ ಮಾತ್ರ ಇರುವ ಇನ್ನೊಂದು ಗುಂಡಿಯಿದೆ. ಅದು ಸೈಲೆಂಟ್, ವೈಬ್ರೇಟ್ ಮತ್ತು ರಿಂಗ್ ಮೋಡ್‌ಗೆ ನಿಲ್ಲಿಸುವ ಗುಂಡಿ.
ಪರದೆ: ಇದರ ಪರದೆ ಕ್ವಾಡ್ ಎಚ್‌ಡಿ ಪ್ಲಸ್ (3120*1440 ಪಿಕ್ಸಲ್‌ಗಳು, 516 ಪಿಪಿಐ) ಡಿಸ್‌ಪ್ಲೇ ಹೊಂದಿದೆ. ಜೊತೆಗೆ ಅಮೋಲೆಡ್ ಡಿಸ್‌ಪ್ಲೇ ಇದೆ.ಮುಂಭಾಗ ಪೂರ್ತಿ ಪರದೆಯೇ ಇದೆ. ಈ ಎಲ್ಲ ಅಂಶಗಳು ಸೇರಿ ಫೋನಿನ ಪರದೆಯ ಪ್ರದರ್ಶನ ಆಕರ್ಷಕವಾಗಿ ಕಾಣಿಸಲು ಸಹಾಯಕವಾಗಿವೆ. ಪರದೆಯಲ್ಲಿ ಮುಂಬದಿಯ ಕ್ಯಾಮರಾ ಸಹ ಸೇರಿಲ್ಲವಾಗಿ, ಯಾವುದೇ ನಾಚ್, ಕ್ಯಾಮರಾ ಕಿಂಡಿ, ಅಂಚು ಪಟ್ಟಿಗಳು ಇಲ್ಲದೇ ಪೂರ್ತಿ ಡಿಸ್‌ಪ್ಲೇ ಇರುವುದು ಫೋನಿನ ಅಂದ ಹೆಚ್ಚಿಸಿದೆ. ಪರದೆಯ ಮೇಲೆಯೇ ಬೆರಳಚ್ಚು ಸ್ಕಾನರ್ ಇದ್ದು, ಅದರ ಚಿಹ್ನೆಯಿರುವ ಜಾಗದಲ್ಲಿ ಬೆರಳಿಟ್ಟರೆ ತಕ್ಷಣ ಫೋನ್ ತೆರೆದುಕೊಳ್ಳುತ್ತದೆ. ಬೆರಳಚ್ಚು ಸೆನ್ಸರ್ ಬಹಳ ವೇಗವಾಗಿ ಕೆಲಸ ಮಾಡುತ್ತದೆ. ಮೊದಲೇ ಹೇಳಿದಂತೆ ಅಮೋಲೆಡ್ ಪರದೆ ಕಣ್ಣಿಗೆ ತಂಪಾಗಿರುತ್ತದೆ. ಆಕರ್ಷಕ ಚಿತ್ರಗಳನ್ನು ಮೂಡಿಸುತ್ತದೆ. ಬಿಸಿಲಿನಲ್ಲೂ ಬಹಳ ಸ್ಪಷ್ಟವಾಗಿ ಫೋನನ್ನು ಆಪರೇಟ್ ಮಾಡಬಹುದು.
ಪೋನಿನ ವೇಗ, ಕಾರ್ಯಾಚರಣೆ: ಇದರಲ್ಲಿರುವುದು ಸದ್ಯದ ಅತ್ಯುನ್ನತ ಪ್ರೊಸೆಸರ್ ಆದ ಸ್ನಾಪ್‌ಡ್ರಾಗನ್ 855. ಜೊತೆಗೆ 12 ಜಿಬಿ ರ್ಯಾಮ್! ಹೀಗಾಗಿ ಫೋನು ಫಟಾಪಟ್ ಎಂದು ಕೆಲಸ ಮಾಡುತ್ತದೆ. ಚಿಟಿಕೆ ಹೊಡೆದಷ್ಟು ವೇಗದಲ್ಲಿ ಎಲ್ಲ ಕಾರ್ಯಾಚರಣೆ ನಡೆಯುತ್ತದೆ. ಆ್ಯಪ್‌ಗ್ಳು ಬಹಳ ವೇಗವಾಗಿ ತೆರೆದುಕೊಳ್ಳುತ್ತವೆ. ದೊಡ್ಡ ದೊಡ್ಡ ಗೇಮ್‌ಗಳು ಅಡೆತಡೆಯಿಲ್ಲದೇ ಚಾಲೂ ಆಗುತ್ತವೆ. ಅದರಲ್ಲಿರುವುದು ಫ್ಲಾಗ್‌ಶಿಪ್ ಪ್ರೊಸೆಸರ್ ಆದ್ದರಿಂದ ಈ ವೇಗ ಇರಲೇಬೇಕಲ್ಲ?
ಒನ್‌ಪ್ಲಸ್ ತನ್ನ ಫೋನ್‌ಗಳಲ್ಲಿ ಅಂಡ್ರಾಯ್ಡ ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ತನ್ನದೇ ಆದ ಆಕ್ಸಿಜನ್ ಕಾರ್ಯಾಚರಣಾ ವ್ಯವಸ್ಥೆಯನ್ನು ಮಿಳಿತಗೊಳಿಸಿದೆ. ಆ್ಯಪ್ ಡ್ರಾಯರ್ ಒಳಗೊಂಡಿದ್ದು, ಒಮ್ಮೆ ಪರದೆಯನ್ನು ಮೇಲಕ್ಕೆ ಸ್ವೆ„ಪ್ ಮಾಡಿದರೆ ಆ್ಯಪ್ ಡ್ರಾಯರ್ ತೆರೆದುಕೊಳ್ಳುತ್ತದೆ. ಅದರೊಳಗೆ ನೂರಾರು ಆ್ಯಪ್‌ಗ್ಳಿರುತ್ತವೆ. ನಿಮಗೆ ಬೇಕಾದ ಅಪ್ಲಿಕೇಷನ್‌ಗಳನ್ನು ಮೇಲಿರುವ ಸರ್ಚ್‌ನಲ್ಲಿ ಹೆಸರು ನೀಡಿ ತಕ್ಷಣ ಪಡೆಯಬಹುದು.ಕ್ಯಾಮರಾ: ಈ ಫೋನು ಹಿಂಬದಿಯಲ್ಲೇ ಮೂರು ಲೆನ್ಸ್‌ಗಳಿರುವ ಕ್ಯಾಮರಾ ಹೊಂದಿದೆ. 48 ಮೆ.ಪಿ. ಸೋನಿ ಐಎಂಎಕ್ಸ್ 586 ಮುಖ್ಯ ಕ್ಯಾಮರಾ ಲೆನ್ಸ್, 8 ಮೆ.ಪಿ. ಟೆಲಿಫೋಟೋ ಲೆನ್ಸ್ (ಝೂಮ್‌ಗಾಗಿ), 16 ಮೆ.ಪಿ. ಅಲ್ಟ್ರಾ ವೈಡ್ ಲೆನ್ಸ್ (ಹೆಚ್ಚು ಅಂತರವಿಲ್ಲದೇ ಫೋಟೋ ತೆಗೆಯಲು) ಹೊಂದಿದೆ. ತನ್ನ ಕ್ಯಾಮರಾ ಸಾಮರ್ಥ್ಯವನ್ನು ಒನ್‌ಪ್ಲಸ್ ಈ ಫೋನಿನಲ್ಲೂ ಕಾಯ್ದುಕೊಂಡಿದೆ. ವಿಡಿಯೋಗಳ ಗುಣಮಟ್ಟ ಕೂಡ ಚೆನ್ನಾಗಿದ್ದು, ಸ್ಲೋ ಮೋಷನ್ ವಿಡಿಯೋ ಶೂಟಿಂಗ್ ಸಹ ಇದೆ. ಯಾವುದೇ ಮ್ಯಾನುವಲ್ ಮೋಡ್ ಇಲ್ಲದೇ, ಆಟೋಮ್ಯಾಟಿಕ್ ಮೋಡ್‌ನಲ್ಲೇ ಉತ್ತಮ ಫೋಟೋಗಳನ್ನು ತೆಗೆಯಬಹುದಾಗಿದೆ. ಮುಂಬದಿಗೆ 16 ಮೆ.ಪಿ. ಕ್ಯಾಮರಾ ಇದ್ದು, ಸೆಲ್ಫಿಆರಿಸಿಕೊಂಡರೆ, ಫೋನಿನ ದೇಹದೊಳಗಿನಿಂದ ಈ ಕ್ಯಾಮರಾ ಮೇಲೆ ಬರುತ್ತದೆ. (ಪಾಪ್ ಅಪ್ ಕ್ಯಾಮರಾ) ಕೆಲವು ಫೋನ್‌ಗಳಲ್ಲಿ ಸೆಲ್ಫಿà ಕ್ಯಾಮರಾಕ್ಕೆ ಬ್ಯೂಟಿ ಮೋಡ್ ಇದ್ದು, ನೈಜತೆಯನ್ನೇ ಹಾಳು ಮಾಡಿ ಮುಖಕ್ಕೆ ಬಣ್ಣ ಬಳಿದಂತೆ ಮಾಡಿಬಿಡುತ್ತವೆ. ಇದರಲ್ಲಿ ನೈಜ ಉತ್ತಮ ಸೆಲ್ಫಿà ಮೂಡಿ ಬರುತ್ತವೆ. ಬ್ಯಾಟರಿ: ಇದರಲ್ಲಿ 4 ಸಾವಿರ ಎಂಎಎಚ್ ಬ್ಯಾಟರಿಯಿದೆ. ಇದು ವೇಗವಾಗಿ ಜಾರ್ಚ್ ಆಗಲು 30 ವ್ಯಾಟಿನ ವಾರ್ಪ್ ಚಾರ್ಜರ್ ನೀಡಲಾಗಿದೆ. ಮೊದಲ ಬಾರಿ ಸೊನ್ನೆಯಿಂದ ಶೇ. 100ರಷ್ಟು ಚಾರ್ಜ್ ಆಗಲು 1 ಗಂಟೆ, 27 ನಿಮಿಷ (87 ನಿಮಿಷ) ತೆಗೆದುಕೊಂಡಿತು. ಆದರೆ ಶೇ. 50ರವರೆಗೆ ಬಹಳ ವೇಗವಾಗಿ ಚಾರ್ಜ್ ಆಗುತ್ತದೆ. ಆದರೆ.. ! 4000 ಎಂಎಎಚ್ ಇದ್ದರೂ ಒಂದಿಡೀ ದಿನ ಬ್ಯಾಟರಿ ಬರ ಬೇಕೆಂದರೆ ಕಷ್ಟ! ಸಾಮಾನ್ಯ ಬಳಕೆದಾರರರಿಗೆ ಒಂದು ದಿನ (ಬೆಳಿಗ್ಗೆ 7 ರಿಂದ ಸಂಜೆ 8 ರವರೆಗೆ) ಆದರೆ ಫೋನಿನ ಮೇಲೆ ಹೆಚ್ಚು ಅವಲಂಬಿತರಾದವರಿಗೆ ರಾತ್ರಿವರೆಗೂ ಬ್ಯಾಟರಿ ಬರುವುದು ಕಷ್ಟ. ಇನ್ನು, ಕರೆ ಗುಣಮಟ್ಟ ಚೆನ್ನಾಗಿದೆ. ಡಾಟಾ ವೇಗ ಉತ್ತಮವಾಗಿದೆ. ಇದರಲ್ಲಿ ಯುಗಳ ಸ್ಪೀಕರ್ ಇದ್ದು, ಇದಕ್ಕೆ ಡಾಲ್ಬಿ ಆಟ್‌ಮೋಸ್ ಸೌಲಭ್ಯ ಇರುವುದರಿಂದ ಸಂಗೀತ ಚೆನ್ನಾಗಿ, ಜೋರಾಗಿ ಕೇಳುತ್ತದೆ. ಒಟ್ಟಾರೆ ಒನ್‌ಪ್ಲಸ್ 7 ಪ್ರೊ, ಒಂದು ಉತ್ತಮ ಫ್ಲಾಗ್‌ಶಿಪ್ ಫೋನ್. ಇದರ ದರ ಒನ್‌ಪ್ಲಸ್‌ನ ಇತರ ಫೋನ್‌ಗಳಿಗೆ ಹೋಲಿಸಿದರೆ ಜಾಸ್ತಿ ಎನಿಸಿದರೂ, ಸ್ಯಾಮ್‌ಸಂಗ್, ಆ್ಯಪಲ್ ಫ್ಲಾಗ್‌ಶಿಪ್‌ಗ್ಳಿಗೆ ಹೋಲಿಸಿದರೆ ಕಡಿಮೆಯೇ. 6 ಜಿಬಿ ರ್ಯಾಮ್ 128 ಜಿಬಿಯ 7 ಪ್ರೊ.ಕೊಂಡರೆ ಸಾಕೋ ಸಾಕು. ಗ್ರಾಹಕರಿಗೆ 9 ಸಾವಿರ ಕಡಿಮೆ ಬೀಳುತ್ತದೆ. -ಕೆ.ಎಸ್. ಬನಶಂಕರ ಆರಾಧ್ಯ