Advertisement

“ಒನ್‌ ಪ್ಲಸ್10ಪ್ರೊ” 125W ವೇಗದ ಚಾರ್ಜಿಂಗ್ ಸಾಮರ್ಥ್ಯ..!

04:50 PM Nov 15, 2021 | Team Udayavani |

ನವದೆಹಲಿ: OnePlus 10 ಸರಣಿಯ ವೈಶಿಷ್ಟ್ಯಗಳು ಅದರ ಲಾಂಚ್‌ಗೆ ಮುಂಚೆಯೇ ಸೋರಿಕೆಯಾಗಿದೆ ಮತ್ತು ಈ ಸ್ಮಾರ್ಟ್‌ಫೋನ್ ಹೊಸ ವಿನ್ಯಾಸದೊಂದಿಗೆ ಬರಲಿದೆ. (ಒನ್‌ ಪ್ಲಸ್‌ 10 ಪ್ರೋ) OnePlus 10 Pro 125W ಕ್ಷಿಪ್ರ ಚಾರ್ಜಿಂಗ್ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ.

Advertisement

OnePlus 10 Pro ಜೊತೆಗೆ Oppo ಮತ್ತು Realme ಯ ಇತರ ಸ್ಮಾರ್ಟ್‌ಫೋನ್‌ಗಳು 125W ವೇಗದ ಚಾರ್ಜಿಂಗ್ ಒಳಗೊಂಡ ಮೊಬೈಲ್‌ ಫೋನ್‌ ಗಳನ್ನು ಬಿಡುಗಡೆಗೊಳಿಸುವ ಬಗ್ಗೆ ಮೂಲಗಳು ತಿಳಿಸಿವೆ . OnePlus 10 Pro, Realme GT 2 Pro, Oppo Find X4, Oppo N ಫೋನ್ ಮತ್ತು Oppo Reno 8 Pro 125W ವೇಗದ ಚಾರ್ಜಿಂಗ್ ಒಳಗೊಂಡಿವೆ.

Twitter ಹ್ಯಾಂಡಲ್ @stufflistings ಅನ್ನು ಬಳಸುವ ಟಿಪ್‌ಸ್ಟರ್ ಮುಕುಲ್ ಶರ್ಮಾ ಅವರ ಹಕ್ಕುಗಳ ಪ್ರಕಾರ, BBK ಎಲೆಕ್ಟ್ರಾನಿಕ್ಸ್‌ನ ಬ್ರಾಂಡ್‌ಗಳ ಈ ಐದು ಸ್ಮಾರ್ಟ್‌ಫೋನ್‌ಗಳು 125W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿವೆ.

OnePlus 10 Pro ನ 125W ವೇಗದ ಚಾರ್ಜಿಂಗ್ ಬಗ್ಗೆ ಪ್ರಸ್ತುತ ಯಾವುದೇ ಹೆಚ್ಚಿನ ಮಾಹಿತಿಗಳಿಲ್ಲ, ಆದರೂ ಇದು ಕಳೆದ ವರ್ಷದಿಂದ OnePlus 9 Pro ನ 65W ವೇಗದ ಚಾರ್ಜಿಂಗ್‌ಗಿಂತ ಅಪ್‌ಗ್ರೇಡ್ ಆಗಿರುತ್ತದೆ ಎಂಬ ಮಾಹಿತಿಗಳಿವೆ. 

ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಹ್ಯಾಂಡ್‌ಸೆಟ್‌ನಲ್ಲಿ ವೇಗವಾಗಿ ಚಾರ್ಜಿಂಗ್ ಸಾಮರ್ಥ್ಯ ಒದಗಿಸುತ್ತಿರುವುದು Xiaomi ಆಗಿದೆ. ಇದು ಪ್ರಸ್ತುತ 120W ವೇಗದ ಚಾರ್ಜಿಂಗ್ ಸಾಮರ್ಥ್ಯ ಹೊಂದಿದೆ.

Advertisement

OnePlus 10 Pro ವಿಭಿನ್ನ ಆಕಾರದ ಕ್ಯಾಮೆರಾ ಮಾಡ್ಯೂಲ್‌ಗಳಾದ ಟ್ರಿಪಲ್ ಕ್ಯಾಮೆರಾ ಮಾಡ್ಯೂಲ್ ಅನ್ನು ಒಳಗೊಂಡಿರುವ ಹೊಸ ವಿನ್ಯಾಸವನ್ನು ಹೊಂದಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next