Advertisement
ಆಸನ ಮಾಡುವುದು ಹೇಗೆ?:
Related Articles
Advertisement
∙ಎರಡೂ ತೋಳುಗಳು ದೇಹದ ಎರಡೂ ಬದಿಯಲ್ಲಿ ಅಂಗೈ ಕೆಳಕ್ಕೆ ಮುಖ ಮಾಡುವಂತೆ ಇರಿಸಬೇಕು.
∙ದೀರ್ಘವಾಗಿ ಉಸಿರಾಡಿ, ನಿಧಾನವಾಗಿ ಬೆನ್ನನ್ನು ಎತ್ತಿ
∙ನಿಮ್ಮ ಗದ್ದವು ನಿಮ್ಮ ಎದೆಭಾಗಕ್ಕೆ ತಾಕುವ ತನಕ ಮೇಲೆತ್ತಬೇಕು.
∙ನಿಮ್ಮ ಎರಡೂ ತೊಡೆಗಳು ಸಮಾನಾಂತರವಾಗಿರಬೇಕು.
∙ಎರಡೂ ಅಂಗೈಗಳನ್ನು ನೆಲಕ್ಕೆ ಒತ್ತಿ, ನಿಮ್ಮ ಬೆನ್ನು ಹಾಗೂ ಹಿಂಬದಿಯನ್ನು ಮೇಲೆತ್ತಿ.
ಪ್ರಯೋಜನಗಳು:
ಸ್ನಾಯುಗಳಿಗೆ ಶಕ್ತಿ ಕೊಡುತ್ತದೆ, ಕಾಲುಗಳನ್ನು ಶಕ್ತಿಯುತವನ್ನಾಗಿ ಮಾಡುತ್ತದೆ, ಬೆನ್ನು ಹಾಗು ಕುತ್ತಿಗೆಯನ್ನು ಸದೃಢಗೊಳಿಸುತ್ತದೆ, ಪಚನ ಶಕ್ತಿಯನ್ನು ಹೆಚ್ಚಿಸುತ್ತದೆ, ಥೈರಾಯ್ಡ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಯಾರು ಮಾಡಬಾರದು?:
ಸೇತು ಬಂಧಾಸನ ಅಭ್ಯಾಸ ಮಾಡುವಾಗ ಸಾಕಷ್ಟು ಎಚ್ಚರವಹಿಸಬೇಕು. ಕುತ್ತಿಗೆ ಅಥವಾ ಭುಜದಲ್ಲಿ ಗಾಯವಾದವರು, ಬೆನ್ನೆಲುಬಿನ ಸಮಸ್ಯೆ ಇರುವವರು ಈ ಆಸನವನ್ನು ಮಾಡಬಾರದು. ಉಳಿದವರು ಯೋಗ ಗುರುಗಳ ಮಾರ್ಗದರ್ಶನದಲ್ಲೇ ಈ ಆಸನ ಮಾಡತಕ್ಕದ್ದು.