Advertisement

ಶಿವಮೊಗ್ಗ: ಕೋವಿಡ್ ಗೆ ಒಂದು ವರ್ಷದ ಮಗು ಬಲಿ

01:07 PM May 30, 2021 | Team Udayavani |

ಶಿವಮೊಗ್ಗ : ಕೋವಿಡ್ ಸೋಂಕಿಗೆ 13 ತಿಂಗಳ ಮಗುವೊಂದು ಬಲಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

Advertisement

ಮೃತ ಮಗುವನ್ನು ಉದಮ್ (1) ಎಂದು ಗುರುತಿಸಲಾಗಿದೆ. ಗಾಂಧಿ ಬಜಾರ್ ನಿವಾಸಿಗಳಾದ ಉದಯ್ ಕುಮಾರ್, ಚೈತ್ರ ಎರಡನೇ ಮಗು ಉದಮ್ ಸೋಂಕಿಗೆ ಬಲಿಯಾಗಿದೆ.

ಇದನ್ನೂ ಓದಿ : ಪಡಿತರಕ್ಕಾಗಿ ಪ್ರತಿಭಟನೆ : ಕಳ್ಳಿಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಸಿಟಿ ರವಿ

ಮಗುವಿಗೆ ಬಿಳಿ ರಕ್ತಕಣ ಕಡಿಮೆಯಾಗಿದೆ ಎಂದು ಹೆತ್ತವರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. 8 ದಿನದಿಂದ‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವಿಗೆ ಉಸಿರಾಟದ ಸಮಸ್ಯೆ ಎದುರಾಗಿದೆ. ಬಳಿಕ ಮಗುವನ್ನು ಚಿಕಿತ್ಸೆಗೆಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next