Advertisement

ವಿಶ್ವಾದ್ಯಂತ “ಒನ್‌ ವರ್ಡ್‌ ಟ್ವೀಟ್‌’ಟ್ರೆಂಡ್‌!

11:02 AM Sep 03, 2022 | Team Udayavani |

ನ್ಯೂಯಾರ್ಕ್‌: “ಡೆಮಾಕ್ರಸಿ’, “ಕ್ರಿಕೆಟ್‌’, “ಫಿಲಂಸ್‌’, “ಯುನಿವರ್ಸ್‌’… ಏನಿದು ಎಂದು ಯೋಚಿಸುತ್ತಿದ್ದೀರಾ? ಅಮೆರಿಕ ಅಧ್ಯಕ್ಷ ಬೈಡೆನ್‌ರಿಂದ ಹಿಡಿದು ಬಾಲಿವುಡ್‌ ತಾರೆಯರು, ಕ್ರಿಕೆಟಿಗರು, ರಾಜಕಾರಣಿಗಳ ಟ್ವಿಟರ್‌ ಖಾತೆ ತೆರೆದು ನೋಡಿದರೆ ನಿಮಗೆ ಈ ರೀತಿ “ಒಂದು ಪದದ ಟ್ವೀಟ್‌’ಗಳು ಕಾಣಸಿಗುತ್ತವೆ. ಹೌದು, ಶುಕ್ರವಾರ ಜಗತ್ತಿನ ಮೂಲೆ ಮೂಲೆಯಲ್ಲೂ ಈ ಒನ್‌ ವರ್ಡ್‌ ಟ್ವೀಟ್‌ ಟ್ರೆಂಡ್‌ ಆಗಿತ್ತು.

Advertisement

ಇದರ ಮೂಲ ಅಮೆರಿಕದ ರೈಲು ಸೇವಾದಾರ ಆ್ಯಮ್‌ಟ್ರ್ಯಾಕ್‌ ಮಾಡಿದ ಟ್ವೀಟ್‌.ಶುಕ್ರವಾರ ಮಧ್ಯಾಹ್ನ ಈ ಸಂಸ್ಥೆ “ಟ್ರೈನ್ಸ್‌’ ಎಂದು ಒಂದು ಪದದಲ್ಲಿ ಟ್ವೀಟ್‌ ಮಾಡಿತ್ತು. ಇದು ಅಪ್‌ಲೋಡ್‌ ಆದದ್ದೇ ತಡ ಜಗತ್ತಿನಾದ್ಯಂತ ಎಲ್ಲರೂ ಒನ್‌ ವರ್ಡ್‌ ಟ್ವೀಟ್‌ ಸರಣಿ ಆರಂಭಿಸಿದರು.

ಬೈಡೆನ್‌ “ಡೆಮಾಕ್ರಸಿ’ ಎಂದು, ನಾಸಾ “ಯುನಿ ವರ್ಸ್‌’ ಎಂದು, ತೆಂಡೂಲ್ಕರ್‌ “ಕ್ರಿಕೆಟ್‌’, ಅಜಯ್‌ ದೇವಗನ್‌ “ಸಿನೆಮಾ’, ಸ್ಟಾರ್‌ಬಕ್ಸ್‌ “ಕಾಫಿ’, ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ ಅವರು “ಪ್ರೋಗ್ರೆಸ್‌’ ಎಂದೂ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next