Advertisement

BBMP: ಒಂದು ಬಾರಿ ತೀರುವಳಿ ಆನ್‌ಲೈನ್‌ ಮೂಲಕ ಪಾವತಿಸಲು ಅವಕಾಶ

11:04 AM Feb 24, 2024 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿಕೊಂಡಿರುವ ಆಸ್ತಿ ಮಾಲೀಕರು ಸರ್ಕಾರದ ಆದೇಶದಂತೆ “ಒನ್‌ ಟೈಮ್‌ ಸೆಟ್ಲ ಮೆಂಟ್‌'(ಒಟಿಎಸ್‌) ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು, ಆನ್‌ಲೈನ್‌ ಮೂಲಕವೂ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

Advertisement

ರಾಜ್ಯ ಸರ್ಕಾರವು ಫೆ.22ರಂದು ಒಟಿಎಸ್‌ ಯೋಜನೆಯ ಕುರಿತು ಅಧಿಸೂಚನೆ ಹೊರಡಿಸಿದೆ. ಅದರಂತೆ ಪಾಲಿಕೆಯ ಆಸ್ತಿ ತೆರಿಗೆಯನ್ನು ಆನ್‌ಲೈನ್‌ ಮೂಲಕ ಪಾವತಿಸುವ ಸಾಫ್ಟ್ವೇರ್‌ನಲ್ಲಿ ಒಟಿಎಸ್‌ಅನ್ನು ಪಾವತಿಸಲು ಅವಕಾಶ ಕಲ್ಪಿಸಿದೆ.

ನಾಗರೀಕರು ಸಂಪೂರ್ಣ ಬಡ್ಡಿ ಮನ್ನಾ, ವಂಚನೆ ಪ್ರಕರಣಗಳಲ್ಲಿ ಶೇ.50ರಷ್ಟು ದಂಡ ಕಡಿತ ಹಾಗೂ ವಸತಿ ಮತ್ತು ಮಿಶ್ರ ಬಳಕೆಗೆ ಪ್ರಕರಣಗಳಲ್ಲಿ ಮಾತ್ರ ಗರಿಷ್ಠ 5 ವರ್ಷಗಳ ಮಿತಿ  ಪ್ರಯೋಜನವನ್ನು ತಕ್ಷಣವೇ ಪಡೆಯಬಹುದಾಗಿದೆ.

ಪಾಲಿಕೆಯ ಅಧಿಕೃತ ವೆಬ್‌ ಸೈಟ್‌ https://bbmptax.karnataka.gov.in  ಗೆ ಭೇಟಿ ನೀಡಿ, ಒಟಿಎಸ್‌ನ ಸಂಪೂರ್ಣ ಪ್ರಯೋಜನ ಆನ್‌ಲೈನ್‌ನಲ್ಲಿ ಪಡೆದು ಪಾವತಿಸಬಹುದಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next