Advertisement

ರಿಷಭ್ ಪಂತ್ ಮಾತ್ರವಲ್ಲದೆ ಟೀಂ ಇಂಡಿಯಾ ಸಹಾಯಕ ಸಿಬ್ಬಂದಿಗೂ ಕೋವಿಡ್ ಪಾಸಿಟಿವ್

05:16 PM Jul 15, 2021 | Team Udayavani |

ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಕೋವಿಡ್ ಕಂಟಕ ಎದುರಾಗಿದೆ. ತಂಡದ ವಿಕೆಟ್ ಕೀಪರ್ ಬ್ಯಾಟ್ಸಮನ್ ರಿಷಭ್ ಪಂತ್ ಗೆ ಕೋವಿಡ್ ಸೋಂಕು ದೃಢವಾದ ಬೆನ್ನಲ್ಲೇ ಸಹಾಯಕ ಸಿಬ್ಬಂದಿಯೊಬ್ಬರಿಗೆ ಸೋಂಕು ತಾಗಿರುವ ಬಗ್ಗೆ ವರದಿಯಾಗಿದೆ.

Advertisement

ಮೂವರು ತರುಬೇತು ಸಿಬ್ಬಂದಿಯನ್ನು ಐಸೋಲೇಶನ್ ಗೆ ಒಳಪಡಿಸಲಾಗಿದೆ. ಇವರುಗಳು ಡರ್ಹಮ್ ನಲ್ಲಿ ನಡೆಯಲಿರುವ ಅಭ್ಯಾಸ ಪಂದ್ಯಕ್ಕಾಗಿ ತಂಡವನ್ನು ಸೇರುವುದಿಲ್ಲ ಎಂದು ವರದಿ ಮಾಡಿದೆ.

ಇದನ್ನೂಓದಿ:

ಜೂನ್ ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗಾಗಿ ಇಂಗ್ಲೆಂಡ್ ಗೆ ಆಗಮಿಸಿದ್ದ ಭಾರತ ತಂಡ ನಂತರ ಟೆಸ್ಟ್ ಸರಣಿಗಾಗಿ ಅಲ್ಲಿಯೇ ಉಳಿದಿದೆ. ಫೈನಲ್ ಪಂದ್ಯದ ಬಳಿಕ ತಂಡದ ಸದಸ್ಯರು ಬಯೋಬಬಲ್ ನಿಂದ ಹೊರಬಂದಿದ್ದರು. ಇದೀಗ ಮತ್ತೆ ತಂಡ ಒಟ್ಟಿಗೆ ಸೇರಿದ್ದು, ಕೋವಿಡ್ ಪಾಸಿಟಿವ್ ಬಂದಿರುವ ಆಟಗಾರರು ತಂಡದಿಂದ ಪ್ರತ್ಯೇಕವಾಗಿದ್ದಾರೆ.

ಭಾರತ ತಂಡ ಜು.20ರಂದು ಕೌಂಟಿ ಚಾಂಪಿಯನ್ ಶಿಪ್ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯವಾಡಲಿದೆ. ಭಾರತ- ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಆಗಸ್ಟ್ 4ರಂದು ಟ್ರೆಂಟ್ ಬ್ರಿಡ್ಜ್ ನಲ್ಲಿ ಆರಂಭವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next