Advertisement
ಬೇಕಾಗುವ ಪದಾರ್ಥಗಳುಹಸುವಿನ ಸಗಣಿ- 10 ಕೆ.ಜಿ., ಗೋ ಮೂತ್ರ- 10 ಲೀಟರ್, ಬೆಲ್ಲ- 2 ಕೆ.ಜಿ, ಅರಿಶಿನ ಪುಡಿ- 100 ಗ್ರಾಂ. ನೀರು- 10 ಲೀಟರ್, 250 ಲೀಟರ್ ಸಾಮರ್ಥ್ಯದ ಡ್ರಮ್- 1, ಮೂವತ್ತು ಲೀಟರ್ ಸಾಮರ್ಥ್ಯದ ಡ್ರಮ…- 1
30 ಲೀಟರ್ ಸಾಮರ್ಥ್ಯದ ಪ್ಲಾಸ್ಟಿಕ್ ಡ್ರಮ್‌ನಲ್ಲಿ 10 ಲೀಟರ್ ಹಸುವಿನ ಮೂತ್ರ, 10 ಕೆಜಿ ಹಸುವಿನ ಸಗಣಿ, 100 ಗ್ರಾಂ ಅರಿಶಿನ ಪುಡಿ, 2 ಕೆ.ಜಿ. ಬೆಲ್ಲ ಹಾಕಿ, ಅದಕ್ಕೆ 10 ಲೀಟರ್ ನೀರು ಬೆರೆಸಿ ಚೆನ್ನಾಗಿ ಕಲಕಬೇಕು. ನಂತರ ಡ್ರಮ್‌ನ ಬಾಯಿಯನ್ನು ಗೋಣಿ ಬಟ್ಟೆಯಿಂದ ಮುಚ್ಚಬೇಕು. ಡ್ರಮ್‌ಅನ್ನು ಸೂರ್ಯನ ಬೆಳಕು ನೇರವಾಗಿ ಬೀಳದಂಥ ಸ್ಥಳದಲ್ಲಿ ಇರಿಸಿ. ನಾಲ್ಕು ದಿನಗಳವರೆಗೆ ದಿನಕ್ಕೆ ಎರಡು ಸಲದಂತೆ ಈ ದ್ರಾವಣವನ್ನು ಕಲಕುತ್ತಾ ಇರಬೇಕು. ಐದನೇ ದಿನ ವಿಶೇಷ ಟಾನಿಕ್ ಸಿದ್ಧವಾಗುತ್ತದೆ. ಬಳಕೆ ಹೇಗೆ?
ಈ ದ್ರಾವಣವನ್ನು 250 ಲೀಟರ್ ಡ್ರಮ್‌ನಲ್ಲಿ ಸೋಸಿ ಹಾಕಿ ನಂತರ ಅದಕ್ಕೆ 200 ಲೀಟರ್ ನೀರು ಬೆರೆಸಬೇಕು. ಹೀಗೆ ತಯಾರಾಗುವ ದ್ರವವನ್ನು ಸಸ್ಯಗಳ ಎಲ್ಲಾ ಭಾಗಗಳಿಗೂ ತಗುಲುವಂತೆ ಸಿಂಪಡಿಸಬೇಕು. ಬಿಸಿಲಿರುವಾಗ ಸಿಂಪಡಣೆ ಬೇಡ, ಬೆಳಗಿನ ಜಾವ ಅಥವಾ ಸಂಜೆ ಸಿಂಪಡಣೆ ಕೈಗೊಳ್ಳಿ. ಹಾಗೆಯೇ, ಮಾಮೂಲಿ ಜೀವಾಮೃತವನ್ನು ಹೇಗೆ ಪ್ರತಿ 20 ದಿನಗಳಿಗೊಮ್ಮೆ ಸ್ಪ್ರೆ ಮಾಡುತ್ತೇವೆಯೋ… ಇದನ್ನೂ ಹಾಗೆಯೇ 20 ದಿನಗಳಿಗೊಮ್ಮೆ ಸಿಂಪಡಿಸಬೇಕು. ಈ ಬಹುಪಯೋಗಿ ದ್ರಾವಣವನ್ನು ತಯಾರಿಸಿ ಸಂಗ್ರಹಿಸಿಡಲು ಸಾಧ್ಯವಿಲ್ಲ. ಸೂಕ್ಷ್ಮಾಣುಜೀವಿಗಳನ್ನು ಹೊಂದಿರುವ ಯಾವುದೇ ದ್ರವವನ್ನು ಸಂಗ್ರಹಿಸಿ ಇಡಬಾರದು. ತಯಾರಿಸಿದ ಮೇಲೆ ತಡಮಾಡದೇ ಬಳಸಿಬಿಡಬೇಕು. ಪ್ರತಿ 15 ದಿನಕ್ಕೊಮ್ಮೆ ತಯಾರಿ ಆರಂಭಿಸಿ ಪ್ರತಿ 20 ದಿನಗಳಿಗೊಮ್ಮೆ ಸಿಂಪಡಿಸಬೇಕು.
Related Articles
Advertisement
ಪ್ರಯೋಜನಗಳು– ಮಣ್ಣು ಫಲವತ್ತಾಗುತ್ತದೆ
– ಬೆಳೆಯಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
– ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ.
– ಬೇರುಗಳು ಆಳವಾಗಿ ಮತ್ತು ಬಲವಾಗಿ ಬೆಳೆಯುತ್ತವೆ
– ಇಳುವರಿ ಅಧಿಕಗೊಳ್ಳುತ್ತದೆ.
– ರಸ ಹೀರುವ ಕೀಟಗಳ ಕಾಟ ಕಡಿಮೆಯಾಗುತ್ತದೆ
– ಹೂವು ಉದುರುವುದು ಕಡಿಮೆಯಾಗಿ ಹೆಚ್ಚು ಕಾಯಿ ಕಚ್ಚುತ್ತದೆ. -ಎಸ್. ಕೆ. ಪಾಟೀಲ್