ಮಿತವ್ಯಯದ ದರದಲ್ಲಿ ಫ್ಲಾಗ್ ಶಿಪ್ ಸ್ಮಾರ್ಟ್ ಫೋನ್ ಗಳನ್ನು ನಿರ್ಮಾಣ ಮಾಡುವುದರಲ್ಲಿ ಹೆಸರಾದ ಒನ್ ಪ್ಲಸ್ ಕಂಪೆನಿ ಇದೀಗ ಭಾರತದಲ್ಲಿ ಒಮ್ಮೆಗೇ ಆರು ಉತ್ಪನ್ನಗಳನ್ನು ಭರ್ಜರಿಯಾಗಿ ಬಿಡುಗಡೆ ಮಾಡಿದೆ.
ಒನ್ ಪ್ಲಸ್ 11, ಒನ್ ಪ್ಲಸ್ 11 ಆರ್ ಸ್ಮಾರ್ಟ್ ಫೋನ್ ಗಳು, ಒನ್ ಪ್ಲಸ್ ಪ್ಯಾಡ್, ಒನ್ ಪ್ಲಸ್ ಬಡ್ಸ್ ಪ್ರೊ 2, ಒನ್ ಪ್ಲಸ್ ಟಿವಿ ಕ್ಯೂ2 ಪ್ರೊ ಹಾಗೂ ಒನ್ ಪ್ಲಸ್ 81 ಮೆಕ್ಯಾನಿಕಲ್ ಕೀ ಬೋರ್ಡ್ ಅನ್ನು ಹೊರತಂದಿದೆ.
ಒನ್ ಪ್ಲಸ್ 11 5ಜಿ: ಇವುಗಳಲ್ಲಿ ಬಹು ಪ್ರಮುಖವಾದುದು ಒನ್ ಪ್ಲಸ್ 11 5ಜಿ ಸ್ಮಾರ್ಟ್ ಫೋನ್. ಒನ್ ಪ್ಲಸ್ 10 ಸರಣಿಯ ನಂತರ 11 ಸರಣಿಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದರು. ಒನ್ ಪ್ಲಸ್ 11 ಫೋನು Snapdragon 8 Gen 2 ಹೊಚ್ಚ ಪ್ರೊಸೆಸರ್ ಹೊಂದಿದೆ. ಇದು 3 ನೇ ತಲೆಮಾರಿನ ಹ್ಯಾಸೆಲ್‌ಬ್ಲಾಡ್ ಕ್ಯಾಮೆರಾ ಮತ್ತು 100W ವೇಗದ ಸೂಪರ್ ವೂಕ್ ಚಾರ್ಜಿಂಗ್ ಒಳಗೊಂಡಿದೆ. ಇದು 5000 ಎಂಎಎಚ್ ನ ಎರಡು ಸೆಲ್ ಗಳ ಬ್ಯಾಟರಿ ಹೊಂದಿದ್ದು, 25 ನಿಮಿಷದಲ್ಲಿ ಶೇ. 1 ರಿಂದ ಶೇ. 100ರಷ್ಟು ಚಾರ್ಜ್ ಆಗುತ್ತದೆಂದು ಕಂಪೆನಿ ತಿಳಿಸಿದೆ. ಈ ಫೋನ್ 16GB ವರೆಗೂ RAM ಸಾಮರ್ಥ್ಯ ಹೊಂದಿದೆ. ಇದರಿಂದ ಒಮ್ಮೆಲೆ 44 ಆಪ್ ಗಳನ್ನು ಕಾರ್ಯಾಚರಿಸಬಹುದು ಎಂದು ಕಂಪೆನಿ ತಿಳಿಸಿದೆ. ನಾಲ್ಕು ಪ್ರಮುಖ Android OS ಅಪ್ಡೇಟ್ ಮತ್ತು ಐದು ವರ್ಷಗಳ ಸೆಕ್ಯುರಿಟಿ ಅಪ್ ಡೇಟ್ ನೀಡುತ್ತಿದೆ.
6.7-ಇಂಚಿನ 2K 120Hz ಸೂಪರ್ ಫ್ಲೂಯಿಡ್ AMOLED ಎಲ್ ಟಿ ಪಿ ಓ 3.0 ಡಿಸ್‌ಪ್ಲೇ ಹೊಂದಿದೆ. OnePlus 11 5G ಡಾಲ್ಬಿ ವಿಷನ್ ಹೊಂದಿದೆ ಮೊದಲ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಇದು ಹ್ಯಾಸೆಲ್ ಬ್ಲಾಡ್ ಟ್ರಿಪಲ್-ಕ್ಯಾಮೆರಾ ಹೊಂದಿದ್ದು, IMX890 50MP ಮುಖ್ಯ ಲೆನ್ಸ್, IMX709 32MP ಪೋಟ್ರೇಟ್ ಲೆನ್ಸ್ ಮತ್ತು IMX581 48MP ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದೆ. ಸೆಲ್ಫೀಗಾಗಿ 16 ಮೆ.ಪಿ. ಕ್ಯಾಮರಾ ಹೊಂದಿದೆ.
OnePlus 11 5G OnePlus.in, OnePlus ಸ್ಟೋರ್ ಅಪ್ಲಿಕೇಶನ್, OnePlus ಸ್ಟೋರ್ಸ್ ಮತ್ತು Amazon.in ನಲ್ಲಿ ಲಭ್ಯವಿದೆ. ದರ: 8+128GB ಆವೃತ್ತಿಗೆ 56,999 ರೂ. ಮತ್ತು 16+256GB ರೂಪಾಂತರಕ್ಕೆ 61,999 ಕ್ಕೆ ರೂ. ಇದು ಕಳೆದ ವರ್ಷದ OnePlus 10 Pro ನ ಆರಂಭಿಕ ಬೆಲೆಗೆ ಹೋಲಿಸಿದರೆ ಕಡಿಮೆಯಾಗಿದೆ.
ಒನ್ ಪ್ಲಸ್ 11 ಆರ್ 5ಜಿ: ಇದನ್ನು ಕೈಗೆಟುಕುವ ದರದ ಫ್ಲ್ಯಾಗ್ ಶಿಪ್ ಫೋನ್ ಎಂದು ಕಂಪೆನಿ ಬಣ್ಣಿಸಿದೆ. ಇದು ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್ ಅನ್ನು ಹೊಂದಿದೆ. 6.74 ಇಂಚಿನ 120 ಹರ್ಟ್ಜ್ ಅಮೋಲೆಡ್ ಪರದೆ, ಹ್ಯಾಸೆಲ್‌ಬ್ಲಾಡ್ ರಹಿತ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಸಹ ಹೊಂದಿದೆ. 100ವ್ಯಾಟ್ಸ್ ಸೂಪರ್ ವೂಕ್ ಚಾರ್ಜರ್, 5000 ಎಂಎಎಚ್ ಬ್ಯಾಟರಿ ಹೊಂದಿದೆ. 50+8+2 ಮೆ.ಪಿ.ಗಳ ಮೂರು ಹಿಂಬದಿ ಕ್ಯಾಮರಾ, 16 ಮೆ.ಪಿ. ಮುಂಬದಿ ಕ್ಯಾಮರಾ ಹೊಂದಿದೆ.
ದರ ಮತ್ತು ಲಭ್ಯತೆ: ಇದರ ದರ 8+128 ಜಿಬಿಗೆ 39,999 ರೂ. 16 ಜಿಬಿ+256 ಜಿಬಿಗೆ 44,999 ರೂ. ಇದು ಫೆ. 21 ರಿಂದ ಒನ್ ಪ್ಲಸ್ ಆನ್ಲೈನ್, ಆಫ್ ಲೈನ್ ಸ್ಟೋರ್ಸ್, ಅಮೆಜಾನ್.ಇನ್ ನಲ್ಲಿ ಮುಂಗಡ ಆರ್ಡರ್ ನಲ್ಲಿ ಲಭ್ಯವಾಗಲಿದೆ.
ಒನ್ ಪ್ಲಸ್ ಬಡ್ಸ್ ಪ್ರೊ 2:
ಮೆಲೋಡಿ ಬೂಸ್ಟ್ ಡುಯಲ್ ಡ್ರೈವರ್ಸ್, ವೈಯಕ್ತೀಕರಣಗೊಳಿಸಿದ ಆಡಿಯೋ ಅನುಭವ, ಹೈರೆಸ್ ಆಡಿಯೋ, ಗೂಗಲ್ ಫಾಸ್ಟ್ ಪೇರ್, 54 ಮಿಲಿ ಸೆಕೆಂಡ್ ಲೋ ಲೇಟೆನ್ಸಿ, 39 ಗಂಟೆಗಳ ಪ್ಲೇ ಬ್ಯಾಕ್ ಹೊಂದಿದೆ.
11mm+6mm ಡ್ಯುಯಲ್ ಡ್ರೈವರ್ ತಂತ್ರಜ್ಞಾನವು ಡೀಪ್ ಡೈನಾಮಿಕ್ ಬಾಸ್‌ಗೆ OnePlus ಬಡ್ಸ್ ಪ್ರೊ 2 ಉದ್ಯಮ-ಪ್ರಮುಖ TUV-ಪ್ರಮಾಣೀಕೃತ ಸ್ಮಾರ್ಟ್ ಅಡಾಪ್ಟಿವ್ ನಾಯ್ಸ್ ಕ್ಯಾನ್ಸಲೇಷನ್ (ANC) ಕಾರ್ಯವನ್ನು ಹೊಂದಿದೆ. LHDC 4.0, ಬ್ಲೂಟೂತ್ 5.3 LE ಆಡಿಯೋ ಮತ್ತು ಡ್ಯುಯಲ್ ಸಂಪರ್ಕವನ್ನು ಹೊಂದಿವೆ.
ಬೆಲೆ: ಭಾರತದಲ್ಲಿ, OnePlus Buds Pro 2 , 10,999 ಕ್ಕೆ ಲಭ್ಯವಾಗಲಿದ್ದು, OnePlus Buds Pro 2R 9,999 ರೂ.ಗೆ ದೊರಕುತ್ತದೆ.
ಒನ್ ಪ್ಲಸ್ ಪ್ಯಾಡ್: ಇದು ಕಂಪನಿಯ ಮೊದಲ ಟ್ಯಾಬ್ಲೆಟ್ ಆಗಿದೆ.
ಇದು ಸೂಪರ್ ಸ್ಲಿಮ್ 6.54mm ಬೆಜೆಲ್ ಮತ್ತು ಕ್ಯಾಂಬರ್ಡ್ ಫ್ರೇಮ್ ಹೊಂದಿದ್ದು, 88% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ ಅಲ್ಯುಮಿನಿಯಂ ಬಾಡಿ ಹೊಂದಿರುವ ಇದು ಡೈಮೆನ್ಸಿಟಿ 9000 ಚಿಪ್‌ಸೆಟ್ ಹೊಂದಿದ್ದು, 8 ಮತ್ತು 12GB RAM ಇದ್ದು, 128 ಮತ್ತು 256 ಜಿಬಿ ಆಂತರಿಕ ಸಂಗ್ರಹ ಹೊಂದಿದೆ. 9510mAh ಬ್ಯಾಟರಿ 80 ನಿಮಿಷಗಳ ಪೂರ್ಣ ಚಾರ್ಜ್ ಆಗುತ್ತದೆ. 11.61 ಇಂಚಿನ ಪರದೆ, 13 ಮೆ.ಪಿ. ಹಿಂಬದಿ ಕ್ಯಾಮರಾ, 8 ಮೆ.ಪಿ. ಮುಂಬದಿ ಕ್ಯಾಮರಾ ಹೊಂದಿದೆ. ಇದು ಶೀಘ್ರ ಮಾರಾಟಕ್ಕೆ ಲಭ್ಯವಾಗಲಿದೆ. ಇದರ ದರವನ್ನು ಕಂಪೆನಿ ಇನ್ನೂ ಪ್ರಕಟಿಸಿಲ್ಲ.
ಒನ್ ಪ್ಲಸ್ 65ಕ್ಯೂ2 ಪ್ರೊ ಟಿ.ವಿ: ತನ್ನ 55 ಇಂಚಿನ ಕ್ಯೂಎಲ್ ಇಡಿ ಟಿವಿ ಪ್ರಸಿದ್ಧವಾದ ಬಳಿಕ ಈಗ ಒನ್ ಪ್ಲಸ್ 65 ಇಂಚಿನ ಕ್ಯೂ ಎಲ್ ಇಡಿ ಟಿವಿ ಕ್ಯೂ 2 ಪ್ರೊ ಹೊರತರಲು ಸಜ್ಜಾಗಿದೆ. ಗೂಗಲ್ ಟಿವಿಯಾಗಿದ್ದು, ಆಂಡ್ರಾಯ್ಡ್ 11 ಓಎಸ್ ಹೊಂದಿದೆ. 4ಕೆ ಕ್ಯೂಎಲ್ ಇಡಿ ಪರದೆ ಹೊಂದಿದ್ದು,1200 ನಿಟ್ಸ್ ಬ್ರೈಟ್ ನೆಸ್, 120 ಹರ್ಟ್ಜ್ ಡಿಸ್ ಪ್ಲೇ ಹೊಂದಿದೆ. ಇದರ ದರ 99,999 ರೂ. ಇದೆ.
ಒನ್ ಪ್ಲಸ್ ಕೀ ಬೋರ್ಡ್ 81: ಮಾಮೂಲಿ ಗ್ಯಾಜೆಟ್ ಗಳ ಜೊತೆಗೆ ಒನ್ ಪ್ಲಸ್ ಅಚ್ಚರಿಯೆಂಬಂತೆ ಮೆಕ್ಯಾನಿಕಲ್ ಕೀಬೋರ್ಡ್ ಅನ್ನು ಹೊರತರುತ್ತಿರುವುದು ವಿಶೇಷವಾಗಿದೆ. ಪರಿಣಿತ ಬೆರಳಚ್ಚುಗಾರರಿಗೆ ಮೆಕಾನಿಕಲ್ ಕೀಬೋರ್ಡ್ ಗಳು ಟೈಪಿಂಗ್ ಅನ್ನು ಅತ್ಯಂತ ಸುಗಮವಾಗಿಸುತ್ತವೆ. ಈ ಕೀ ಬೋರ್ಡ್ ಎರಡು ವರ್ಷನ್ ಗಳನ್ನು ಒಳಗೊಂಡಿದೆ. ವಿಂಟರ್ ಬೋನ್ಫೈರ್ ಡಾರ್ಕ್ ಗ್ರೇ ಕಲರ್ ಹೊಂದಿದ್ದು, ಇದು ಪಿಬಿಟಿ ಕೀ ಕ್ಯಾಪ್ ಹೊಂದಿದ್ದು, ಟ್ಯಾಕ್ಟೈಲ್ ಸ್ವಿಚ್ ಗಳನ್ನು ಹೊಂದಿದೆ. ಸಮ್ಮರ್ ಬ್ರೀಜ್ ವರ್ಷನ್ ಲೈಟ್ ಗ್ರೇ ಕಲರ್ ಹೊಂದಿದೆ. ಇದು ಮಾರ್ಬಲ್ ಮ್ಯಾಲೋ ಕೀ ಕ್ಯಾಪ್ ಹೊಂದಿದ್ದು, ಲೀನಿಯರ್ ಸ್ವಿಚ್ ಗಳನ್ನು ಹೊಂದಿದೆ.
MacOS, Windows ಮತ್ತು Linux ಸೇರಿದಂತೆ ಅನೇಕ ಆಪರೇಟಿಂಗ್ ಸಿಸ್ಟಂಗಳೊಂದಿಗೆ ಕೆಲಸ ಮಾಡುತ್ತದೆ. ಇದು ಅಲ್ಯುಮಿನಿಯಂ ಬಾಡಿ ಹೊಂದಿದೆ. ಇದರ ಬೆಲೆ ಮತ್ತು ಲಭ್ಯತೆ ಪ್ರಕಟಿಸಿಲ್ಲ.