Advertisement
ಇದರ ದರ 8+128 ಜಿಬಿ ಮಾದರಿಗೆ 24,999 ರೂ ಹಾಗೂ 8+256 ಜಿಬಿ ಮಾದರಿಗೆ 26,999 ರೂ. ಇದೆ. ಅಮೆಜಾನ್ ನಲ್ಲಿ ಈಗ ಐಸಿಐಸಿಐ ಮತ್ತು ಎಚ್ಡಿಎಫ್ಸಿ ಕ್ರೆಡಿಟ್ ಕಾರ್ಡ್ ಗಳಿಗೆ 1500 ರೂ. ರಿಯಾಯಿತಿ ಇದೆ.
Related Articles
Advertisement
ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54-ರೇಟ್ ಹೊಂದಿದೆ. ಮತ್ತು ಇದು ನೀರಿನ ಸಿಂಪಡಿಕೆ ತಡೆದುಕೊಳ್ಳಬಲ್ಲುದು. ಇದಕ್ಕಾಗಿ AquaTouch ತಂತ್ರಜ್ಞಾನವನ್ನು ಪರದೆಗೆ ಅಳವಡಿಸಲಾಗಿದ್ದು, ಒದ್ದೆ ಬೆರಳುಗಳಲ್ಲಿ ಮುಟ್ಟಿದರೂ ಕೆಲಸ ನಿರ್ವಹಿಸುತ್ತದೆ.
6.7 ಇಂಚಿನ 120 ಹರ್ಟ್ಜ್ ಅಮೋಲೆಡ್ ಪರದೆ ಹೊಂದಿರುವುದು ವಿಶೇಷ. ಪರದೆಯಲ್ಲೇ ಬೆರಳಚ್ಚು ರೀಡರ್ ಇದೆ. ಅಮೋಲೆಡ್ ಪರದೆಯ ಕಾರಣ ಚಿತ್ರಗಳು, ವಿಡಿಯೋಗಳು ಕಣ್ಣಿಗೆ ತ್ರಾಸ ಕೊಡದೇ ರಿಚ್ ಆಗಿ ಕಾಣುತ್ತವೆ. HDR10 Netflix ನಂತಹ ಸ್ಟ್ರೀಮಿಂಗ್ ಅಪ್ಲಿಕೇಶನ್ಗಳಿಗೆ ಉಪಯುಕ್ತವಾಗಿದೆ. ಪರದೆ ಹೊರಾಂಗಣದಲ್ಲಿ ಬಿಸಿಲಿನಲ್ಲೂ ಪ್ರಕಾಶಮಾನವಾಗಿ ಕಾಣುತ್ತದೆ.
ಪ್ರೊಸೆಸರ್ ಮತ್ತು ಕಾರ್ಯಾಚರಣೆ:
OnePlus Nord CE 4 ಹೊಸ Qualcomm Snapdragon 7 Gen 3 SoC ಹೊಂದಿದೆ. ಪ್ರೊಸೆಸರ್ ಶಕ್ತ ದಕ್ಷವಾಗಿದ್ದು, ಮತ್ತು ಮಧ್ಯಮ ಶ್ರೇಣಿಯ ಕಾರ್ಯಕ್ಷಮತೆ ಹೊಂದಿದೆ. ಇದರಲ್ಲಿ 2 ನ್ಯಾನೋ ಸಿಮ್ ಕಾರ್ಡ್ ಅಥವಾ ಸಿಮ್ ಕಾರ್ಡ್ ಮತ್ತು 1 ಟಿಬಿ ವರೆಗೆ ಮೈಕ್ರೊ ಎಸ್ಡಿ ಕಾರ್ಡ್ ಇರುವ ಹೈಬ್ರಿಡ್ ಸಿಮ್ ಸೌಲಭ್ಯ ಹೊಂದಿದೆ.
ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ 5.4, ಯುಎಸ್ಬಿ ಟೈಪ್-ಸಿ ಪೋರ್ಟ್ (ಯುಎಸ್ಬಿ 2.0), ಹಲವಾರು 5 ಜಿ ಬ್ಯಾಂಡ್ ಗಳನ್ನು ಬೆಂಬಲಿಸುತ್ತದೆ. 8 ಜಿಬಿ ರ್ಯಾಮ್ ಇದ್ದು, ಫೋನಿನ ಮೆಮೊರಿ ಬಳಸಿಕೊಂಡು 8 ಜಿಬಿ ಹೆಚ್ಚುವರಿ ವರ್ಚುವಲ್ ರ್ಯಾಮ್ ಮಾರ್ಪಡಿಸಿಕೊಳ್ಳಬಹುದಾಗಿದೆ.
Android 14 ಅನ್ನು ಆಧರಿಸಿದ OxygenOS 14 ಕಾರ್ಯಾಚರಣೆ ವ್ಯವಸ್ಥೆಯಿದೆ. ಇದಕ್ಕೆ 2 ವರ್ಷಗಳ ಸಾಫ್ಟ್ವೇರ್ ಅಪ್ಡೇಟ್ ಮತ್ತು 3 ವರ್ಷಗಳ ಭದ್ರತಾ ಅಪ್ಡೇಟ್ ನೀಡುತ್ತದೆ.
ಫೋನ್ ನೊಂದಿಗೆ ನಮಗೆ ಅಗತ್ಯವಿಲ್ಲದ ಬ್ಲೋಟ್ ವೇರ್ ಆಪ್ಗಳನ್ನು ನೀಡಿಲ್ಲದೇ ಇರುವುದು ಸಮಾಧಾನದ ಸಂಗತಿ.
ಸ್ಮಾರ್ಟ್ ಟಚ್ (ಸ್ಕ್ರೀನ್ಶಾಟ್ನಿಂದ ಪಠ್ಯವನ್ನು ಬೇರ್ಪಡಿಸಲು) ನಂತಹ ಹಗುರವಾದ AI- ಸಕ್ರಿಯಗೊಳಿಸಿದ ವೈಶಿಷ್ಟ್ಯಗಳು ಸಹ ಇವೆ. ಫೈಲ್ ಡಾಕ್ ಮೂಲಕ ಬೆಂಬಲಿತ ಅಪ್ಲಿಕೇಶನ್ಗಳಿಗೆ ಸ್ಮಾರ್ಟ್ ಸೈಡ್ಬಾರ್ನಿಂದ ಫೈಲ್ಗಳು ಅಥವಾ ಚಿತ್ರಗಳನ್ನು ಡ್ರಾಗ್ಮಾಡಬಹುದು. ಫೋನು, ಸಾಫ್ಟ್ವೇರ್ ದೃಷ್ಟಿಯಿಂದ ಯಾವುದೇ ವಿಳಂಬವಿಲ್ಲದೆ, ಮೃದುವಾಗಿ ಕಾರ್ಯಾಚರಿಸುತ್ತದೆ.
ಬ್ಯಾಟರಿ:
ಈ ಫೋನ್ 5,500mAh ಬ್ಯಾಟರಿ ಹೊಂದಿದೆ. ಬಾಕ್ಸ್ನಲ್ಲಿ 100W ಚಾರ್ಜರ್ ಇರುವುದು ಬೋನಸ್. ಬ್ಯಾಟರಿ ಬಾಳಿಕೆ ಚೆನ್ನಾಗಿದೆ. ಕ್ಯಾಶುಯಲ್ ಬಳಕೆಯೊಂದಿಗೆ ಸುಮಾರು ಒಂದೂವರೆ ದಿನದ ಬ್ಯಾಟರಿ ಬರುತ್ತದೆ. ನಿರಂತರವಾಗಿ ಬಳಸಿದರೆ ಒಂದು ದಿನ ಪೂರ್ತಿ ಬರುತ್ತದೆ.
ಕೇವಲ 39 ನಿಮಿಷಗಳಲ್ಲಿ ಸೊನ್ನೆಯಿಂದ 100 ಶೇಕಡಾ ಚಾರ್ಜ್ ಆಗುತ್ತದೆ. ಈ ದರದಲ್ಲಿ 100 ವ್ಯಾಟ್ಸ್ ತ್ವರಿತ ವೇಗದ ಚಾರ್ಜರ್ ನೀಡಿರುವುದು ಶ್ಲಾಘನೀಯ.
ಕ್ಯಾಮರಾ:
OnePlus ಹೊಸ 50-ಮೆಗಾಪಿಕ್ಸೆಲ್ LYT600 Sony IMX890 ಪ್ರಾಥಮಿಕ ಲೆನ್ಸ್ , 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ (ಸೋನಿ IMX355) ಮತ್ತು 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಇದರಲ್ಲಿ ಹಿಂದಿನ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಕೈಬಿಡಲಾಗಿದೆ.
ಪ್ರಾಥಮಿಕ ಕ್ಯಾಮರಾ ಸ್ಯಾಚುರೇಟೆಡ್ ಬಣ್ಣಗಳೊಂದಿಗೆ ಉತ್ತಮವಾಗಿ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಬೆಳಕಿನಲ್ಲಿ ಫೋಟೋ ತೆಗೆದಾಗ ವಸ್ತುವಿನ ಡೀಟೇಲ್ ಚೆನ್ನಾಗಿ ಮೂಡಿಬರುತ್ತದೆ. ಉತ್ತಮ ಕ್ಲೋಸ್-ಅಪ್ ಚಿತ್ರಗಳನ್ನು ಪಡೆಯಬಹುದಾಗಿದೆ.
ಇದು ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿಲ್ಲ, ಆದ್ದರಿಂದ ಹಿಂದಿನ Nord CE3 ನಂತೆ ತೀವ್ರ ಕ್ಲೋಸ್-ಅಪ್ಗಳನ್ನು ಚಿತ್ರೀಕರಿಸುವುದು ಸಾಧ್ಯವಿಲ್ಲ. ಆದಾಗ್ಯೂ, ವಸ್ತುಗಳನ್ನು 15-20 ಸೆಂಟಿಮೀಟರ್ ಹತ್ತಿರದಲ್ಲಿ ತೆಗೆಯಬಹುದು.
ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಸೆಲ್ಫಿ ಕ್ಯಾಮರಾ ಮತ್ತು ವಿಡಿಯೋ ಚಿತ್ರೀಕರಣ ಈ ದರಕ್ಕೆ ಸಮಾಧಾನಕರವಾಗಿದೆ.
OnePlus Nord CE 4, ಹಿಂದಿನ Nord CE3 ಗೆ ಹೋಲಿಸಿದರೆ ಉತ್ತಮ ಅಪ್ಗ್ರೇಡ್ ಆಗಿದೆ. ಇದು ಬಳಕೆದಾರರಿಗೆ ಐಪಿ ರೇಟಿಂಗ್, ಹೆಚ್ಚು ಶಕ್ತಿಶಾಲಿ ಪ್ರೊಸೆಸರ್, ಯೋಗ್ಯ ಕ್ಯಾಮೆರಾ ಮತ್ತು ವೇಗದ ಚಾರ್ಜಿಂಗ್ ಉಳ್ಳ ಉತ್ತಮ ಬ್ಯಾಟರಿ ಹೊಂದಿದೆ.
-ಕೆ.ಎಸ್. ಬನಶಂಕರ ಆರಾಧ್ಯ