ಯಾಕೆ ಹೇಳಿದ್ದು ಎಂದರೆ ವ್ಯಕ್ತಿತ್ವದಲ್ಲಿ ಇರುವ ಕವಲುಗಳು, ದ್ವಿಮುಖಗಳು ಹೇಗೆ? ಏನು? ಎತ್ತ? ಎಂಬುದನ್ನು ವ್ಯಕ್ತಪಡಿಸಲು. ಈ ದ್ವಿಮುಖ ವ್ಯಕ್ತಿತ್ವ ಬಹಳ ಅಪಾಯಕಾರಿ.
Advertisement
ಜನ್ಮ ಕುಂಡಲಿಯಲ್ಲಿ ಪ್ರತಿವ್ಯಕ್ತಿಯ ಲಗ್ನಭಾವದ ಮನೆಯೇ ಮೊದಲ ಮನೆಯಾಗಿದ್ದು, ಇದು ಆತ್ಮಭಾವವನ್ನು ಪ್ರತಿನಿಧಿಸುತ್ತದೆ. ಇವರನ್ನು ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ. ಇವರು ಹೇಳುವುದು ಒಂದು. ಮಾಡುವುದೇ ಇನ್ನೊಂದು. ತಮ್ಮ ಮೂಗಿನ ನೇರಕ್ಕೆ ಯೋಚಿಸುತ್ತಾರೆಯೇ ವಿನಾ, ಇನ್ನೊಬ್ಬರು ಯೋಚನೆ ಮಾಡುವ ಧಾಟಿಯನ್ನು ಗಮನಿಸಿ ಇನ್ನೊಬ್ಬರ ನೋವು ಚಡಪಡಿಕೆಗಳೇನು ಎಂಬುದನ್ನು ತಿಳಿಯಲು ಹೋಗಲಾರರು ಅಂತ. ಇನ್ನು ಕೆಲವರು- ಹೀಗೆ ಹೇಳಿದರೆ ಇನ್ನೊಂದು ಅರ್ಥವಾದೀತು ಎಂದು ಗೊಂದಲಕ್ಕೆ ಒಳಗಾಗಿ ಏನೂ ಹೇಳದೆ ತೆಪ್ಪಗಿದ್ದು ಬಿಡುತ್ತಾರೆ. ಮತ್ತಲವರು ತಾವು ಮಾಡಬೇಕಾದ ಕೆಲಸವನ್ನು ಮುಂದುಮುಂದಕ್ಕೆ ತಳ್ಳುತ್ತಾರೆ. ಇವರಿಗೆ ಪುರುಸೊತ್ತೇ ಸಿಗಲಾರದು. ತೀರಾ ಒತ್ತಡ ಬಿದ್ದಾಗ ಖನ್ನತೆಗೊಳಪಡುತ್ತಾರೆ. ಅಲ್ಲಿಯ ತನಕ ಭ್ರಮಾಧೀನರಾಗಿರುತ್ತಾರೆ.
ಈ ಹುಡುಗಿ ಮೂಲಭೂತವಾಗಿ ಕಂಪ್ಯೂಟರ್ ಎಂಜಿನಿಯರ್. ವೃಶ್ಚಿಕ ಲಗ್ನದವಳು. ಇಲ್ಲಿ ಮಂಗಳನ ಉಪಸ್ಥಿತಿ ಇರುವುದು ಮರಣಸ್ಥಾನವಾದ ಮಿಥುನದಲ್ಲಿ ಮೇಲ್ನೋಟಕ್ಕೆ ಕುಜದೋಷ ಇದೆಯಾದರೂ, ಇವಳ ಜನ್ಮನಕ್ಷತ್ರ ಬಲದಿಂದಾಗಿ ಈ ಜಾತಕದ ಹುಡುಗಿಗೆ ಕುಜದೋಷ ಎಂಬ ಲಗ್ನದ ಸಂದರ್ಭದ ವೈವಾಹಿಕ ಅಂಶಗಳ ಕುರಿತಾದ ಕುಜದೋಷ ಇಲ್ಲ. ಆದರೆ ಮರಣಸ್ಥಾನದಲ್ಲಿರುವ ವ್ಯಕ್ತಿತ್ವದಲ್ಲಿ ಕೆಲವು ನಿಗೂಢ ಸಂಗತಿಗಳನ್ನು ಭಯವನ್ನು ಭ್ರಮೆಯನ್ನು ಸರ್ರನೆ ಒಂದು ನಿರ್ಣಯಕ್ಕೆ ಬಂದ ಅಷ್ಟೇ ತೀವ್ರವಾಗಿ ನಿರ್ಣಯದಿಂದ ಜಾರಿಕೊಳ್ಳುವ ಅಸಂಗತ ವ್ಯಕ್ತಿತ್ವವನ್ನು ಗಂಟುಹಾಕುತ್ತಾನೆ. ಮರಣಾಧಿಪತಿ ಬುಧನು ವಿಪರೀತ ರಾಜಯೋಗ ಒದಗಿಸಿದರೂ ರಾಹುನ ಉಪಸ್ಥಿತಿಯಿಂದಾಗಿ ರಾಜಯೋಗ ಮಣ್ಣಾಗುತ್ತಲೇ ಇರುತ್ತದೆ. ಸುಖಕ್ಕಾಗಿ ಬಯಸಿ ಪ್ರಾಮಾಣಿಕವಾಗಿ ಮುಂದುವರೆದರೂ ಒಂದು ಲೆಕ್ಕದಿಂದ ಬಿಕ್ಕಟ್ಟುಗಳನ್ನು ಎದುರಿಸಿ ಅನುಕಂಪ ಗಿಟ್ಟಿಸಲಿಕ್ಕೆ ಪ್ರಯತ್ನ ನಡೆಸುವ ವ್ಯಕ್ತಿತ್ವ ಪ್ರಧಾನವಾಗುತ್ತದೆ. ಒಳ್ಳೆಯ ಹುಡುಗಿ ಎಂಬುದಕ್ಕೆ ಬೇರೆ ಮಾತಿಲ್ಲ. ಆದರೆ ಯಾರನ್ನೂ ನಂಬಲು ಅಥವಾ ನಂಬದಿರಲು ಎಲ್ಲಿ ಹೇಗೆ ಎಷ್ಟು ಅಳತೆ ಎಂಬುದನ್ನು ಅರಿಯದ ಬೆಪ್ಪುತನ ಬರುತ್ತಿರುತ್ತದೆ. ಆಕರ್ಷಕವಾದ ಮಾತು ಇದೆ. ಜಾಣ್ಮೆ ಇದೆ. ಆದರೂ ನಿರ್ಣಯದ ಬಗೆಗೆ ನಿರಂತರ ಹೊಯ್ದಾಟ. ಸುಖದ ಅಧಿಪತಿ ಗಟ್ಟಿಯಾಗಿದ್ದರೂ ಬಾಳಸಂಗಾತಿಯ ವಿಚಾರದಲ್ಲಿ ಕೇತುವಿನ ಬಾಧೆ ಅನುಭವಿಸುತ್ತಿರುವ ಚಂದ್ರ ಉತ್ತಮವಾದ ಭಾಗ್ಯ ಒದಗಿಸಲು ನಿರಾಕರಿಸುತ್ತಾನೆ. ಶನೈಶ್ಚರನ ಕಾಟದ ಸಮಯ ಬಂದಾಗ ಸುಖಕ್ಕೂ ಸಮತೋಲನ ತಪ್ಪಿ ಮದುವೆಯಾಗುತ್ತೇನೆ ಎಂದು, ತಾನು ಮಾತುಕೊಟ್ಟಿದ್ದ ಹುಡುಗನಿಗೆ ತಾನು ಕೊಟ್ಟಿದ್ದು ಆಖೈರಿನ ಒಪ್ಪಿಗೆ ಅಲ್ಲ ಎಂದು ವಾದಿಸಿ, ಅವನಿಗೆ ಸಿಟ್ಟು ಬರುವಂತೆ ಮಾಡುತ್ತಾಳೆ. ನಿರಂತರವಾದ ದ್ವಂದ್ವವನ್ನು ಸಮಯ ಸಂದರ್ಭಗಳು ಈ ಹುಡುಗಿಯ ವಿಚಾರದಲ್ಲಿ ಸಮಸ್ಯೆಗಳನ್ನು ಹುಟ್ಟುಹಾಕುತ್ತಿರುತ್ತವೆ.
Related Articles
Advertisement
ಬದಲಾಗುತ್ತ ಹೋದಳು ಹುಡುಗಿಆದರೆ ಹುಡುಗಿಯೂ ತನ್ನನ್ನು ಒಂದೇ ನಿಶ್ಚಿತ ದಿಕ್ಕಿನಲ್ಲಿ ಸಾಗಲಾಗದ ದಾರಿಯಲ್ಲಿ ಸಿಲುಕಿ ಹಾಕಿಕೊಂಡ ಕುತೂಹಲಕಾರಿ ಅಂಶವನ್ನು ನಾವಿಲ್ಲಿ ಗಮನಿಸಬೇಕು. ತಾನು ಕೆಲಸ ಮಾಡುವ ಆಫೀಸಿಗೆ ಫೋನ್ ಮಾಡಿ ಒಪ್ಪಿಗೆಯೇ ಎಂದು ಹುಡುಗನ ಮಾವ ಕೇಳಿದಾಗ, ಸರಿ. ಆದರೆ ನೀವು ನಮ್ಮ ತಂದೆತಾಯಿಯನ್ನು ಕೇಳಿ ಎಂದು ಹೇಳಿದ ಹುಡುಗಿ ನಂತರ ಹುಡುಗನ ಬಳಿ ನಾನು ಆಖೈರಿನ ಒಪ್ಪಿಗೆ ಕೊಟ್ಟಿರಲಿಲ್ಲ. ಪೂರ್ತಿ ನಿಶ್ಚಯ ಮಾಡಿಲ್ಲ ಎಂದು ಹೇಳಿದಾಗ ಹುಡುಗ ಕೆರಳುತ್ತಾನೆ. ಏನು ನಮಗೆ ಬೇರೆ ಕೆಲಸಗಳಿಲ್ಲ ಎಂಬುದಕ್ಕೆ ನಿಮ್ಮ ಮನೆಗೆ ಬಂದು ವಧು ಪರೀಕ್ಷೆ ನಡೆಸಿ, ತಿಂಡಿ, ಕಾಫಿ ಕುಡಿದು ಹೊಟ್ಟೆ ತುಂಬಿಸಿಕೊಂಡು ಹೋಗಲು ಬಂದದ್ದಾ ಎಂದು ಕೇಳಿ ಬಿಟ್ಟಿದ್ದಾನೆ. ಈ ಒರಟು ಮಾತು ಹುಡುಗಿಗೆ ಛೇ ಇವನು ಇಷ್ಟೆಯೇ ಎನಿಸಿಬಿಟ್ಟಿದೆ. ಮಾರನೆಯ ದಿನವಾದರೂ ಏನೋ ಒರಟು ಮಾತಾಡಿದೆ. ತಪ್ಪು ತಿಳಿ¿ಬೇಡ ಎಂದು ಹುಡುಗ ತಪ್ಪು ಒಪ್ಪಿಕೊಳ್ಳಬಹುದು ಎಂದರೆ ಆತ ಹಾಗೆ ಮಾಡಲಿಲ್ಲ. ನಯವಾಗಿಯೇ ಆತ ಮದುವೆಗೆ ಒಪ್ಪು ಎಂದು ಭಿನ್ನವಿಸುತ್ತಲೇ ಇದ್ದಾನೆ. ಹುಡುಗಿಯ ತಂದೆತಾಯಿಗೂ ಕಿರಿಕಿರಿ ಯಾಗುತ್ತಿದೆ. ಮಗಳು ಒಪ್ಪಿಗೆ ನೀಡಿ ಹಿಂದೆ ಸರಿಯುತ್ತಿದ್ದಾಳೆ ಎಂದು ಆಕ್ಷೇಪವಿದೆ. ಆಫೀಸಿನಲ್ಲಿ ಕೆಲಸದ ನಡುವೆ ಇರುವಾಗ ಫೋನ್ ಮಾಡಿ ಒಪ್ಪಿಗೆಯೇ ಎಂದು ಕೇಳಿದ ಹುಡುಗನ ತಂದೆ, ನನ್ನದೇನು? ತಂದೆತಾಯಿಯನ್ನು ಕೇಳಿ ಎಂದು ಹೇಳಿದ ಮಾತನ್ನೇ ಒಪ್ಪಿಗೆ ಎಂದು ತಿಳಿದು ಕೂಡಲೇ ತಂದೆತಾಯಿ ಬಳಿ ಫೋನ್ ಮಾಡಿ ಇನ್ನೇನೋ ಹೇಳಿದ್ದಾರೆ. ಈ ಸತ್ಯವನ್ನು ಮಾರನೇ ದಿನ ಹುಡುಗ ಹೇಳಲು ಹೋದರೆ ಅವಳಿಗೆ ಕ್ಲಿಷ್ಟ ಎನಿಸುತ್ತಿದೆ. ಹುಡುಗ ತನ್ನ ಗೆಳೆಯರ ಬಳಿ ಬಹುಶಃ ಹೇಳಿಕೊಂಡು ಬಿಟ್ಟಿದ್ದಾನೆ; ಹುಡುಗಿ ನಿಶ್ಚಯ ಆದಳು ಎಂದು. ಅದಕ್ಕೆ ಅವರು ಮತ್ತೆ ಹುಡುಗಿ ವಿಚಾರ ಕೇಳಿದರೆ, ಅವನು ನನ್ನ ಆಖೈರಿನ ನಿರ್ಣಯ ಮಾಡಿಲ್ಲ ಎಂದು ಹೇಳಿ ಕೆರಳಿ ಮಾತನಾಡಿದ್ದಾನೆ. ಹುಡುಗಿಗೆ ಈ ಕಟುಮಾತು ಹಿಡಿಸಿಲ್ಲ. ಆದರೆ ಹುಡುಗ ಹಿಡಿಸಿದ್ದಾನೆ. ರೂಪ, ವಿದ್ಯೆ, ಕೆಲಸ ಇತ್ಯಾದಿ ಎಲ್ಲ ಸಿದ್ದಿಸಿರಬಹುದಾದರೂ ಒರಟು ಮಾತುಗಳನ್ನು ಜೀವನದಲ್ಲಿ ಕೇಳಿಸಿಕೊಳ್ಳುವುದಾದರೆ ಇಡೀ ಜೀವನದಲ್ಲಿ ಇದನ್ನು ಸಹಿಸಲಾಗದು ಎಂಬ ನಿಲುವು ಬಲವಾಗಿದೆ. ವ್ಯಕ್ತಿತ್ವದಲ್ಲಿನ ಸೀಳು ಒಂದೆಡೆ ಭಯ ಹುಟ್ಟಿಸಿದೆ. ಅನಂತಶಾಸ್ತ್ರೀ