ಶಿಲ್ಲಾಂಗ್/ಕೊಹಿಮಾ : ನಾಗಾಲ್ಯಾಂಡ್ ವಿಧಾನಸಭೆ ಗೆ ಇಂದು ಮತದಾನ ನಡೆಯುತ್ತಿದ್ದು ಮೋನ್ ಜಿಲ್ಲೆಯ ತಿಜಿತ್ ಪೋಲಿಂಗ್ ಸ್ಟೇಶನ್‌ನಲ್ಲಿ ಇಂದು ಬೆಳಗ್ಗೆ ಬಾಂಬ್ ನ್ಪೋಟ ಸಂಭವಿಸಿ ಓರ್ವ ವ್ಯಕ್ತಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಮೇಘಾಲಯ ಮತ್ತು ನಾಗಾಲ್ಯಾಂಡ್ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ವಿನಂತಿಸಿ ಟ್ವೀಟ್ ಮಾಡಿದ್ದಾರೆ.
ಈಶಾನ್ಯ ರಾಜ್ಯಗಳಾದ ಮೇಘಾಲಯ ಮತ್ತು ನಾಗಾಲ್ಯಾಂಡ್ ಹೊಸ ವಿಧಾನಸಭೆಯನ್ನು ಚುನಾಯಿಸುವ ಸಲುವಾಗಿ ಇಂದು ಮತದಾನ ನಡೆಸುತ್ತಿವೆ.
ಬೆಳಗ್ಗೆ 7 ಗಂಟೆಗೆ ಸಂಜೆ 4 ಗಂಟೆ ವರೆಗೆ ಮತದಾನ ನಡೆಯುತ್ತಿದೆ. ಎರಡೂ ರಾಜ್ಯಗಳ ವಿಧಾನಸಭೆಗಳು ತಲಾ 60 ಸ್ಥಾನಗಳನ್ನು ಹೊಂದಿವೆ. ಆದರೆ ಎರಡರಲ್ಲೂ ಮತದಾನ ನಡೆಯುತ್ತಿರುವುದು ತಲಾ 59 ಸ್ಥಾನಗಳಿಗೆ.
ಕಳೆದ ಫೆ.18ರಂದ ಪೂರ್ವ ಗಾರೋ ಜಿಲ್ಲೆಯಲ್ಲಿ ನಡೆದಿದ್ದ ಐಇಡಿ ಬ್ಲಾಸ್ಟ್ ನಲ್ಲಿ ಎನ್‌ಸಿಪಿ ಅಭ್ಯರ್ಥಿ ಜೊನಾಥನ್ ಎನ್ ಸಂಗ್ಮಾ ಅವರು ಮೃತಪಟ್ಟಿದ್ದರು. ಹಾಗಾಗಿ ಅವರ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿಲ್ಲ.
ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿಪಿ ಮುಖ್ಯಸ್ಥ ನೀಫಿಯು ರಿಯೋ ಅವರು 2ನೇ ಉತ್ತರ ಅಂಗಾಮಿ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು.