Advertisement

Santosh Lad: ಒನ್‌ ನೇಶನ್‌ ಒನ್‌ ಎಲೆಕ್ಷನ್‌, ನೆಹರೂ ಕಾಲದಲ್ಲೇ ವಿಫ‌ಲ

01:14 AM Dec 14, 2024 | Team Udayavani |

ಬೆಳಗಾವಿ: ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ “ಒಂದು ದೇಶ ಒಂದು ಚುನಾವಣೆ’ ಪರಿಕಲ್ಪನೆಗೆ ರಾಜ್ಯ ಸರಕಾರದ ಹಲವು ಸಚಿವರು ವಿರೋಧ ವ್ಯಕ್ತಪಡಿಸಿದ್ದು, ನೆಹರೂ ಕಾಲದಲ್ಲಿ ಈ ಕಲ್ಪನೆ ವಿಫಲವಾಗಿತ್ತು ಎಂದಿದ್ದಾರೆ.

Advertisement

ಬೆಳಗಾವಿ ಸುವರ್ಣಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ಒನ್‌ ನೇಶನ್‌, ಒನ್‌ ಎಲೆಕ್ಷನ್‌’ ಪರಿಕಲ್ಪನೆಯನ್ನು ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್‌ ನೆಹರು ಪ್ರಯೋ ಗ ಮಾಡಿ ವಿಫಲರಾಗಿದ್ದರು. ಕೇಂದ್ರ ಮತ್ತೆ ಅದನ್ನು ಜಾರಿಗೆ ತರಲು ಮುಂದಾಗಿದೆ. ಇದಕ್ಕೆ ಯಾವ ರೀತಿಯ ಮಾನದಂಡ, ಕಾನೂನು ತರುತ್ತಾರೋ ಗೊತ್ತಿಲ್ಲ ಎಂದರು.

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಪ್ರತಿಕ್ರಿಯಿಸಿ, ಪ್ರಧಾನಿ ವೈಫ‌ಲ್ಯ ಮುಚ್ಚಿ ಹಾಕಲು ಈ ವ್ಯವಸ್ಥೆ ತರುತ್ತಿದ್ದಾರೆ ಎಂದು ಪ್ರಿಯಾಂಕ್‌ ಟೀಕಿಸಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾತನಾಡಿ, ಬಿಜೆಪಿಯವರು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದನ್ನೇ ತರುತ್ತಾರೆ. ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡಬೇಕಿತ್ತು. ಏಕಾಏಕಿ ಇಂತಹ ಕ್ರಮ ಜಾರಿಗೊಳಿಸುವುದು ಸರಿಯಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next