Advertisement
ಇಡೀ ದೇಶದಲ್ಲಿ ಒಂದೇ ಬಾರಿಗೆ ಚುನಾವಣೆ ನಡೆಸುವ ಯೋಜನೆ ಇದಾಗಿದ್ದು, ಇದನ್ನು ಜಾರಿಗೆ ತರುವ ಮೂಲಕ ಚುನಾವಣ ವೆಚ್ಚ, ಸಮಯ ಉಳಿತಾಯವಾಗಲಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಈಗಾಗಲೇ “ಒಂದು ದೇಶ, ಒಂದು ಚುನಾವಣೆ’ಯ ಸಾಧಕ, ಬಾಧಕಗಳನ್ನು ಪರ್ಯಾಲೋಚಿಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿಯ ವರದಿಯನ್ನು ಕೇಂದ್ರ ಸಚಿವ ಸಂಪುಟ ಈಗಾಗಲೇ ಅಂಗೀಕರಿಸಿದೆ.
“ಒಂದು ದೇಶ, ಒಂದು ಚುನಾವಣೆ’ ಮಸೂದೆ ಅಂಗೀಕಾರವಾಗಬೇಕಾದರೆ ಸಂವಿಧಾನಕ್ಕೆ ಕನಿಷ್ಠ ಆರು ತಿದ್ದುಪಡಿಗಳನ್ನು ತರಬೇಕಿದೆ. ಇದಕ್ಕಾಗಿ ಸಂಸತ್ತಿನ ಮೂರನೇ ಎರಡರಷ್ಟು ಸಂಸದರ ಒಪ್ಪಿಗೆ ಬೇಕಿದೆ. ಆದರೆ ಇಷ್ಟು ಪ್ರಮಾಣದ ಬಹು ಮತ ಲೋಕಸಭೆ ಮತ್ತು ರಾಜ್ಯಸಭೆ ಯಲ್ಲಿ ಸರಕಾರಕ್ಕಿಲ್ಲ. ರಾಜ್ಯಸಭೆಯಲ್ಲಿ 164 ಮತಗಳ ಆವಶ್ಯಕತೆ ಇದ್ದು, ಸರಕಾರದ ಬಳಿ 112 ಮತಗಳಿವೆ. ಲೋಕಸಭೆಯಲ್ಲಿ 364 ಮತಗಳ ಬದಲಿಗೆ 292 ಮತಗಳನ್ನು ಸರಕಾರ ಹೊಂದಿದೆ. ಹೀಗಾಗಿ ಮೈತ್ರಿಕೂಟದಲ್ಲಿಲ್ಲದ ವಿಪಕ್ಷಗಳ ಸಂಸದರ ಮನವೊಲಿಸಲು ಕೇಂದ್ರ ಸರಕಾರ ಮುಂದಾಗಿದೆ ಎನ್ನಲಾಗಿದೆ.
Related Articles
ಒಂದು ವೇಳೆ ಪ್ರಸ್ತುತ ನಡೆಯುತ್ತಿರುವ ಸದನದಲ್ಲಿ ಈ ಮಸೂದೆಯನ್ನು ಮಂಡಿಸಲು ಸಾಧ್ಯವಾಗದಿದ್ದರೆ, ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ. “ಒಂದು ದೇಶ ಒಂದು ಚುನಾವಣೆ’ ಜಾರಿ ಮಾಡಲು ಕೇಂದ್ರ ಸರಕಾರ ಸಾಕಷ್ಟು ಮುತುವರ್ಜಿ ತೋರಿಸುತ್ತಿದ್ದು, ಇದಕ್ಕಾಗಿ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ ಎನ್ನಲಾಗಿದೆ.
Advertisement
ವಿಪಕ್ಷಗಳದ್ದೇ ಚಿಂತೆ“ಒಂದು ದೇಶ, ಒಂದು ಚುನಾವಣೆ’ ಘೋಷಣೆಯಾದಾಗಿನಿಂದ ವಿಪಕ್ಷ ನಾಯಕರು ಅದನ್ನು ವಿರೋಧಿಸುತ್ತಲೇ ಇದ್ದಾರೆ. ಅಲ್ಲದೆ ಈ ಬಾರಿ ಐಎನ್‌ಡಿಐಎ ಮೈತ್ರಿಕೂಟವು ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆದ್ದಿರುವುದು ಆಡಳಿತ ಪಕ್ಷದ ತಲೆನೋವನ್ನು ಹೆಚ್ಚಿಸಿದೆ.