Advertisement

ದೆಹಲಿಗೆ ಹೋದ ವ್ಯಕ್ತಿಗೆ ನೆಗೆಟಿವ್, ಆತನ ಸಂಪರ್ಕಕ್ಕೆ ಬಂದ ವ್ಯಕ್ತಿಗೆ ಸೋಂಕು ಪಾಸಿಟಿವ್ !

09:14 AM Apr 11, 2020 | keerthan |

ಕಲಬುರಗಿ: ಕೋವಿಡ್-19 ಸೋಂಕಿನಿಂದ ಇಬ್ಬರು ಸಾವನ್ನಪ್ಪಿರುವ ಕಲಬುರಗಿಯಲ್ಲಿ‌ ಮತ್ತೊಂದು ಹೊಸ ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಪೀಡಿತರ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ.

Advertisement

ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲಿಘಿ ಎ- ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ವ್ಯಕ್ತಿಯ ಸಂಪರ್ಕದಲ್ಲಿದ್ದ 55 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಅಚ್ಚರಿ ಎಂದರೆ ದೆಹಲಿಗೆ ಹೋಗಿದ್ದ ವ್ಯಕ್ತಿಗೆ ಕೋವಿಡ್-19 ನೆಗೆಟಿವ್ ಇದೆ.

ದೆಹಲಿಯ ಮಸೀದಿಗೆ ಹೋದವರ ಸಂಪರ್ಕಕ್ಕೆ ಬಂದಿದ್ದ ಈ ವ್ಯಕ್ತಿ ತನಗೆ ಜ್ವರ, ಕೆಮ್ಮು ಬಂದ ಹಿನ್ನೆಲೆಯಲ್ಲಿ ಸ್ವತಃ ತಾನೇ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಿದ್ದ ಎಂದು ವರದಿಯಾಗಿದೆ.

ಶಹಾಬಾದ್ ಮಾದರಿ: ಜಿಲ್ಲೆಯಿಂದ ಇದುವರೆಗೂ ದೆಹಲಿಯ ಮಸೀದಿಗೆ 26 ಜನರು ಹೋಗಿದ್ದವರನ್ನು ಪತ್ತೆ ಹಚ್ಚಲಾಗಿದೆ. ಯಾರಿಗೂ ಸೋಂಕಿಲ್ಲ ಎಂದು ದೃಢಪಟ್ಟಿದೆ.

ಈ ಪೈಕಿ ಶಹಾಬಾದ್ ಪಟ್ಟಣದ ವ್ಯಕ್ತಿ ಸಹ ಸೇರಿದ್ದು, ಆತನಿಗೂ ಕೋವಿಡ್-19 ನೆಗೆಟಿವ್ ಇದೆ ಎಂದು ವರದಿ ಬಂದಿದೆ. ಆದರೆ, ಆತನ ಸಂಪರ್ಕದಲ್ಲಿದ್ದ ಪತ್ನಿ ಮತ್ತು ಸೊಸೆಗೆ ಸೋಂಕು ಖಚಿತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಈಗ ಇದೇ ಮಾದರಿಯಲ್ಲಿ ದೆಹಲಿಗೆ ಹೋದ ವ್ಯಕ್ತಿ ಬದಲಿಗೆ ಆತನ ಸಂಪರ್ಕಕ್ಕೆ ಬಂದ ವ್ಯಕ್ತಿಗೆ ಮಹಾಮಾರಿ ರೋಗ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.‌ ಇನ್ನು, ಸೋಂಕಿತ ವ್ಯಕ್ತಿ ಕಲಬುರಗಿ ನಗರದ ನಿವಾಸಿ ಎಂದು ಹೇಳಲಾಗುತ್ತಿದ್ದು, ಸದ್ಯ ಇಎಸ್ಐ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಇಂದು ಇನ್ನೂ ಏಳು ಜನ ಶಂಕಿತರ ರಕ್ತ ಮತ್ತು ಗಂಟಲು ದ್ರಾವಣ ಮಾದರಿಯನ್ನು ಸಂಗ್ರಹಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next