Advertisement

ದಕ್ಷಿಣ ಕನ್ನಡ ಮತ್ತೂಂದು ಪಾಸಿಟಿವ್‌ ; ಕಾಸರಗೋಡು 12 ಪ್ರಕರಣ ದೃಢ

12:23 AM Apr 02, 2020 | Hari Prasad |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಮತ್ತೂಂದು ಕೋವಿಡ್ 19 ವೈರಸ್ ಪ್ರಕರಣ ದೃಢವಾಗಿದೆ. ಸೋಂಕು ದೃಢಪಟ್ಟಿರುವ ವ್ಯಕ್ತಿ ಪುತ್ತೂರಿನವರಾಗಿದ್ದು, ದುಬಾೖಯಿಂದ ಹಿಂದಿರುಗಿದ್ದರು. ಅವರ ಗಂಟಲು ದ್ರವ ಪರೀಕ್ಷೆಯ ಫ‌ಲಿತಾಂಶ ಬುಧವಾರ ಬಂದಿದ್ದು, ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ. ಬುಧವಾರ 27 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ದ.ಕ.ದಿಂದ 21 ಮಂದಿ ಭಾಗಿ
ದಿಲ್ಲಿಯ ನಿಜಾಮುದ್ದೀನ್‌ ಧಾರ್ಮಿಕ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 21 ಮಂದಿ ಭಾಗವಹಿಸಿದ್ದಾರೆ. ಅವರನ್ನೆಲ್ಲ ತಪಾಸಣೆಗೆ ಒಳಪಡಿಸಲಾಗಿದ್ದು, ಆಸ್ಪತ್ರೆ ನಿಗಾದಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಬುಧವಾರ 13 ಮಂದಿ ಶಂಕಿತ ರೋಗ ಲಕ್ಷಣಗಳುಳ್ಳವರು ಆಸ್ಪತ್ರೆಗೆ ದಾಖಲಾಗಿದ್ದು, ಹೊಸ ಪ್ರಕರಣ ದೃಢ ಪಟ್ಟಿಲ್ಲ. ನಿಜಾಮುದ್ದೀನ್‌ ಸಮಾವೇಶದಲ್ಲಿ ಉಡುಪಿ ಜಿಲ್ಲೆಯಿಂದ ಯಾರೂ ಭಾಗವಹಿಸಿಲ್ಲ ಎಂದು ಡಿಸಿ ಜಿ. ಜಗದೀಶ್‌ ಹೇಳಿದ್ದಾರೆ.

ಪಡಿತರ ವಿತರಣೆ ಆರಂಭ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಎಪ್ರಿಲ್‌-ಮೇ ತಿಂಗಳ ಪಡಿತರ ವಿತರಣೆ ಬುಧವಾರ ಆರಂಭವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆವಶ್ಯಕ ವಸ್ತು ಖರೀದಿಗೆ ಬೆಳಗ್ಗೆ 7ರಿಂದ 12ರವರೆಗೆ ಅವಕಾಶ ನೀಡಲಾಗಿದ್ದು, ನಿಯಮ ಪಾಲಿಸಿ ಖರೀದಿ ನಡೆದಿದೆ. ಗುರುವಾರವೂ ಇದು ಮುಂದುವರಿಯಲಿದೆ.

ಕಾಸರಗೋಡು 12 ಪ್ರಕರಣ ದೃಢ
ಜಿಲ್ಲೆಯಲ್ಲಿ ಬುಧವಾರ 12 ಮಂದಿಗೆ ಕೋವಿಡ್ 19 ವೈರಸ್ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕು ಪೀಡಿತರ ಸಂಖ್ಯೆ 120ಕ್ಕೆ ಏರಿದೆ. ಒಟ್ಟಾರೆಯಾಗಿ ಕೇರಳದಲ್ಲಿ ಬುಧವಾರ 24 ಹೊಸ ಪ್ರಕರಣಗಳು ದೃಢವಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next