Advertisement

ತ್ರಿವಳಿ ತಲಾಕ್‌ ನಿಲ್ಲಿಸಬೇಕೆಂಬ ಮನವಿಗೆ 10ಲಕ್ಷ ಮುಸ್ಲಿಮರ ಸಹಿ

11:22 AM Mar 18, 2017 | udayavani editorial |

ಹೊಸದಿಲ್ಲಿ : ಮಹತ್ತರ ಬೆಳವಣಿಗೆಯೊಂದರಲ್ಲಿ  ದೇಶಾದ್ಯಂತದ 10 ಲಕ್ಷಕ್ಕೂ ಅಧಿಕ ಮುಸ್ಲಿಮರು ವಿವಾದಾತ್ಮಕ ತ್ರಿವಳಿ ತಲಾಕ್‌ ಕ್ರಮವನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. 

Advertisement

ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್‌ಎಸ್‌ಎಸ್‌) ಸಂಯೋಜಿತವಾಗಿರುವ ಮುಸ್ಲಿಂ ರಾಷ್ಟ್ರೀಯ ಮಂಚ (ಎಂಆರ್‌ಎಂ) ಎಂಬ ಇಸ್ಲಾಮಿಕ್‌ ಸಂಘಟನೆಯು ತ್ರಿವಳಿ ತಲಾಕ್‌ ಕೊನೆಗೊಳಿಸಬೇಕೆಂದು ಆಗ್ರಹಿಸಿ ಸಿದ್ಧಪಡಿಸಿರುವ ಮನವಿಗೆ ದೇಶಾದ್ಯಂತದ ಹತ್ತು ಲಕ್ಷಕ್ಕೂ ಅಧಿಕ ಮುಸ್ಲಿಮರು ಸಹಿ ಹಾಕಿದ್ದಾರೆ. ಇವರಲ್ಲಿ ಮುಸ್ಲಿಂ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ. 

ತ್ರಿವಳಿ ತಲಾಕ್‌ ಕ್ರಮವನ್ನು ರದ್ದು ಮಾಡುವಂತೆ ಕೋರಿ ಈಗಾಗಲೇ ಅನೇಕ ಮುಸ್ಲಿಂ ಮಹಿಳೆಯರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. 

ತ್ರಿವಳಿ ತಲಾಕ್‌ ನಿಷೇಧಕ್ಕೆ ಕರೆ ನೀಡಿರುವ ಕೇಂದ್ರ ಸಚಿವ ರವಿ ಶಂಕರ್‌ಪ್ರಸಾದ್‌ ಅವರು,”ತ್ರಿವಳಿ ತಲಾಕ್‌ ಒಂದು ಅತ್ಯಂತ ಕೆಟ್ಟ ಸಾಮಾಜಿಕ ಪದ್ಧತಿಯಗಿದ್ದು ಆನೇಕ ಇಸ್ಲಾಮಿಕ್‌ ದೇಶಗಳಲ್ಲಿ ಇದನ್ನು ಈಗಾಗಲೇ ನಿಷೇಧಿಸಲಾಗಿದೆ ಇಲ್ಲವೇ ನಿರ್ಬಂಧಿಸಲಾಗಿದೆ’ ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next