Advertisement
ಬಿಸಿ ಬಿಸಿ, ಗರಿಗರಿ ಮಸಾಲೆ ದೋಸೆಯ ಪರಿಮಳ ದಾರಿ ಹೋಕರ ಮೂಗಿಗೆ ಸೋಕಿದೊಡನೆ ಬಾಯಲ್ಲಿ ನೀರೂರಿ ಹೋಟೆಲ್ ಕಡೆಗೆ ದಾರಿ ತೋರುತ್ತದೆ. ಆ ವೇಳೆಗೆ ಹೊಟ್ಟೆ ಚುರುಕುಗೊಂಡು ಮೆದುಳಿಗೆ ಬುದ್ದಿ ಹೇಳಿ ಬೇಗ ನಡೆ ಚನ್ನಗಿರಿ ಹೋಟೆಲ್‌ಗೆ ಎಂದು ಸೂಚನೆ ನೀಡುತ್ತದೆ. ಹೋಟೆಲ್ ನ ಯಾವುದೋ ಒಂದು ಕೋಣೆಯಲ್ಲಿ ದೋಸೆಯ ಘಮ ಮೂಗಿಗೆ ಬಡಿಯುತ್ತಿರುತ್ತದೆ. ಹೋಟೆಲ್ ಗೆ ಕಾಲಿಡುವ ಪ್ರತಿಯೊಬ್ಬರೂ ಹಿಂದೆ ಮುಂದೆ ಯೋಚಿಸದೆ ಒಂದು ಮಸಾಲೆ ದೋಸೆ ಅರ್ಡರ್ ಮಾಡಿ ಇಪ್ಪತ್ತು ನಿಮಿಷದ ನಂತರ ಸಂತೃಪ್ತಿಯಿಂದ ತಿಂದು ಹೊಟ್ಟೆ ಸವರಿಕೊಂಡು ಹೊರ ನಡೆಯುತ್ತಾರೆ. ಇದು ಕಳೆದ 65 ವರ್ಷಗಳಿಂದ ಇದು ನಡೆದುಕೊಂಡು ಬಂದಿರುವ ಪರಿ.
Related Articles
Advertisement
ಹೋಟೆಲ್ ಮಾಲೀಕರು ಕುಂದಾಪುರದವರು. ಅಲ್ಲಿಂದ ಚನ್ನಗಿರಿ ಮಾರ್ಗವಾಗಿ ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದರು. ಆಗ ಇಲ್ಲಿನವರಿಗೆ ಕುಂದಾಪುರ ಎನ್ನುವ ಹೆಸರಿನ ಉಚ್ಚಾರ ಕಷ್ಟವಾಗುತ್ತಿದ್ದರಿಂದ ಹೋಟೆಲ್ ಮಾಲಿಕರು ಚನ್ನಗಿರಿ ಮಾರ್ಗವಾಗಿ ಬರುತ್ತಿದ್ದುದರಿಂದ ಅದನ್ನು ಚನ್ನಗಿರಿ ಹೋಟೆಲ್ ಎಂದು ಕರೆದರು. ಮುಂದೆ ಆ ಹೆಸರೇ ಕಾಯಂ ಆಯಿತು. ಆ ಹೋಟೆಲ್‌ನ ಮೂಲ ಹೆಸರು ಶ್ರೀಕೃಷ್ಣ ಭವನ.
ಆನಂದರಾವ್ ಮುಳ್ಳೂರು ಈ ಹೋಟೆಲಿನ ಮೂಲ ಮಾಲೀಕರು. ಇವರು 1952ರಲ್ಲಿ ಚಿತ್ರದುರ್ಗಕ್ಕೆ ಆಗಮಿಸಿ 60*25 ಅಳತೆಯ ಕಟ್ಟಡ ಬಾಡಿಗೆ ಪಡೆದು ಶ್ರೀಕೃಷ್ಣ ಭವನ ಆರಂಭಿಸಿದರು. ಇವರ ನಂತರ ಇವರ ಬಂಧುಗಳಾದ ಕೃಷ್ಣಮೂರ್ತಿ ಐತಾಳ್ ನಿರ್ವಹಿಸಿದರು. ಇವರ ನಂತರ ಇವರ ಬಂಧು ಯು.ಪರಮೇಶ್ವರ್ ಅವರು ಈಗ ಈ ಹೋಟೆಲ್ ನೆಡೆಸುತ್ತಿದ್ದಾರೆ. ಕಳೆದ 42 ವರ್ಷಗಳಿಂದ ಇದೇ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡು ಪರಮೇಶ್ವರ್‌ಗೆ ಒಮ್ಮೆ ಒಂದು ದಿನ ಕೃಷ್ಣಮೂರ್ತಿ ಐತಾಳ್ ಅವರು ಈ ಹೋಟೆಲ್ ಅನ್ನುವಹಿಸಿಕೊಟ್ಟರು. ಅಲ್ಲಿಂದ ಇವರು ಈ ಹೋಟೆಲ್ ನಡೆಸುತ್ತಿದ್ದಾರೆ.
ಹರಿಯಬ್ಬೆ ಹೆಂಜಾರಪ್ಪ