Advertisement

ಫ್ಯಾಕ್ಟರಿ ಫ‌ರ್ನೇಸ್‌ ಬ್ಲಾಸ್ಟ್‌; ಓರ್ವನ ಸಾವು, ಹಲವರಿಗೆ ಗಾಯ

09:54 AM May 30, 2019 | Team Udayavani |

ಫ‌ತೇಗಢ ಸಾಹಿಬ್‌, ಪಂಜಾಬ್‌ : ಪಂಜಾಬಿನ ಫ‌ತೇಗಢ ಸಾಹಿಬ್‌ ಜಿಲ್ಲೆಯಲ್ಲಿ ಫ್ಯಾಕ್ಟರಿ ಫ‌ರ್ನೇಸ್‌ ಸ್ಫೋಟಗೊಂಡ ಪರಿಣಾಮವಾಗಿ ಒಬ್ಬ ವ್ಯಕ್ತಿ ಮೃತಪಟ್ಟು ಇತರ ಕನಿಷ್ಠ ನಾಲ್ವರು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಸಿರ್‌ಹಿಂದ್‌ ಸಮೀಪದ ಖರೋಡಿ ಎಂಬಲ್ಲಿ ಈ ಘಟನೆ ನಿನ್ನೆ ಮಂಗಳವಾರ ತಡರಾತ್ರಿ ನಡೆದಿದ್ದು ಮೃತ ವ್ಯಕ್ತಿಯನ್ನು ರಶೀದ್‌ ಎಂದು ಗುರುತಿಸಲಾಗಿದೆ.

ಸ್ಫೋಟ ನಡೆದ ಹೊತ್ತಿನಲ್ಲಿ ಸುಮಾರು 8 – 9 ಜನರು ಫ‌ರ್ನೇಸ್‌ ಸಮೀಪ ಕೆಲಸ ಮಾಡಿಕೊಂಡಿದ್ದರು. ಸ್ಫೋಟದಲ್ಲಿ ಹಲವಾರು ಕಾರ್ಮಿಕರು ಗಾಯಗೊಂಡರು ಎಂದು ಫ‌ತೇಗಢ ಸಾಹಿಬ್‌ ಡಿವೈಎಸ್‌ಪಿ ಜಸ್‌ವೀಂದರ್‌ ಸಿಂಗ್‌ ತಿಳಿಸಿದರು.

ಫ‌ರ್ನೇಸ್‌ ಬ್ಲಾಸ್ಟ್‌ನ ಕಾರಣ ಗೊತ್ತಾಗಿಲ್ಲ; ಆ ಬಗ್ಗೆ ಪೊಲೀಸ್‌ ತನಿಖೆ ನಡೆಯುತ್ತಿದೆ ಎಂದು ಸಿಂಗ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next