Advertisement

ಮುಖಗವಸಿನ ನೂರು ಅವತಾರ

02:57 AM May 24, 2020 | Sriram |

ಚೆನ್ನೈ: ಮಾಸ್ಕ್ ಜೀವನಶೈಲಿಯ ಭಾಗವಾದ ಬಳಿಕ ಮನುಷ್ಯನ ರೂಪಗಳೇ ಬದ ಲಾಗಿವೆ. ಪರಿಚಿತರೇ ಎದುರಾದರೂ ಸುಲಭವಾಗಿ ಗುರುತಾಗದು. ಆದರೆ ಈ ಮಾಸ್ಕ್ ಹಾಗಲ್ಲ; ನಿಮ್ಮ ಮುಖವನ್ನು ಯಥಾವತ್ತಾಗಿ ತೋರಿಸುತ್ತದೆ!

Advertisement

ಹೌದು, ಇದು ನೈಜ ಮಾಸ್ಕ್ ಕಥೆ. ಇದನ್ನು ಧರಿಸಿದರೆ ಮಾಸ್ಕ್ ಹಾಕಿರುವುದು ಎದುರಿನವರಿಗೆ ಗೊತ್ತಾಗುವುದಿಲ್ಲ. ಇಂಥ ವಿನೂತನ ಮಾಸ್ಕ್ ರೂಪಿಸುವಲ್ಲಿ ಕೇರಳ, ಚೆನ್ನೈಯ ಎರಡು ಫೋಟೋ ಸ್ಟುಡಿಯೋಗಳು ಯಶಸ್ವಿಯಾಗಿವೆ. ಯುವ ಸಮುದಾಯದ ನಡುವೆ ಇದೇ ಈಗಿನ ಟ್ರೆಂಡ್‌.

ಏನಿದರ ವಿಶೇಷ?
ಲಾಕ್‌ಡೌನ್‌ ವೇಳೆ ಪಲ್ಲವರಂ ಸ್ಟುಡಿಯೋದ ವರಿಗೂ ದುಡಿಮೆ ಇರಲಿಲ್ಲ. ಆದರೆ ಚಿಂತೆ ಗೀಡಾಗಲಿಲ್ಲ. ವ್ಯಕ್ತಿಗಳ ಅರ್ಧ ಮೂಗಿನಿಂದ ಗಲ್ಲದ ವರೆಗೆ ಫೋಟೊ ತೆಗೆದರು. ಅದನ್ನು ಬಟ್ಟೆ ಮೇಲೆ ಪ್ರಿಂಟ್‌ ಹಾಕಿ, ಮಾಸ್ಕ್ ತಯಾರಿಸಿದರು.

ಸುರಕ್ಷಿತವೇ?
“ಶೇ.100ರಷ್ಟು ಸುರಕ್ಷಿತ. ನಮ್ಮ ಮಾಸ್ಕ್ ಗಳಲ್ಲಿ ದಪ್ಪ ಹತ್ತಿ ಬಟ್ಟೆ ಬಳಸಲಾಗಿದ್ದು, ತೊಳೆದು ಸ್ವತ್ಛಗೊಳಿಸಬಹುದು. ವೈದ್ಯರು, ದಾದಿಯರು ಇದನ್ನು ಬಳಸುತ್ತಿದ್ದಾರೆ’ ಎನ್ನುತ್ತಾರೆ ಪಲ್ಲ ವರಂ ಫೋಟೊಗ್ರಾಫ‌ರ್‌ಗಳು.

ಫೋಟೊ ಕಳಿಸಿದರೆ ರೆಡಿ
ಸ್ಥಳೀಯ ಮಟ್ಟದಲ್ಲಿ ಅಲ್ಲಿನ ಛಾಯಾ ಚಿತ್ರಗ್ರಾಹಕರೇ ಫೋಟೊ ಸೆರೆಹಿಡಿದು ಮಾಸ್ಕ್ ಸಿದ್ಧಗೊಳಿಸುತ್ತಾರೆ. ದೂರದ ಗ್ರಾಹಕರಾದರೆ, ಉತ್ತಮ ದರ್ಜೆಯ ಫೋಟೊ ಇಮೈಲ್‌ ಮಾಡಿ, ಕೊರಿಯರ್‌ ಮೂಲಕ ಮಾಸ್ಕ್ ಪಡೆಯಬಹುದಾಗಿದೆ.

Advertisement

ಕೇರದಲ್ಲೂ ಹೊಸ ಬಗೆಯ ಮಾಸ್ಕ್
ಕೇರಳದ ಕೊಟ್ಟಾಯಂನ ಬೀನಾ ಸ್ಟುಡಿಯೋದಲ್ಲೂ ಇದೇ ರೀತಿಯ ಮಾಸ್ಕ್ ಗಳನ್ನು ತಯಾರಿಸಲಾಗುತ್ತಿದೆ. ಇಲ್ಲೂ ಫೋಟೋ ಬಳ ಸಿಕೊಂಡು, ಸಬ್ಲಿ ಮೇಶನ್‌ ಪ್ರಿಂಟಿಂಗ್‌ ತಂತ್ರಜ್ಞಾನ ಬಳಸಿ  ಮಾಸ್ಕ್ ರೂಪಿಸಲಾಗುತ್ತಿದೆ.

ವಾಕ್‌ಶ್ರವಣ
ದೋಷ ಇದ್ದವರಿಗೆ…
ಶ್ರವಣದೋಷ ಇರುವವರು ತುಟಿಯ ಚಲನೆ ಮೂಲಕ ಮಾತುಗಳನ್ನು ಗ್ರಹಿಸುತ್ತಾರೆ. ಇಂಥವರಿಗಾಗಿ ಅಮೆರಿಕದ ಕಂಪೆನಿಯೊಂದು “ಕ್ಲಿಯರ್‌ ಮಾಸ್ಕ್’ ಆವಿಷ್ಕರಿಸಿದೆ. ಪಾರದರ್ಶಕ ಶೀಲ್ಡ್‌ನಿಂದ ಇದು ರಚನೆಗೊಂಡಿದ್ದು, ಉಸಿರಾಟ ಹನಿಗಳನ್ನು ತಡೆಯುತ್ತದೆ. ಆದರೆ ತುಟಿಯ ಚಲನೆ, ಮುಖಭಾವಗಳನ್ನು ಗ್ರಹಿಸಬಹುದು.

ಮೊಬೈಲ್‌ ಲಾಕ್‌
ತೆರೆಯುವ ಮಾಸ್ಕ್
ಅಮೆರಿಕ ಮೂಲದ ಡೇನಿಯಲ್‌ ಬಾಸ್ಕಿನ್‌ ಎಂಬ ಕಲಾವಿದ ಆಯಾ ವ್ಯಕ್ತಿಯ ರೂಪ ಸಾದೃಶ್ಯದ ಮಾಸ್ಕ್ ಸಿದ್ಧಪಡಿಸುತ್ತಿದ್ದಾರೆ. ಅನೇಕರು ತಮ್ಮ ಸ್ಮಾರ್ಟ್‌ಫೋನ್‌ಗೆ ಫೇಸ್‌ ರೆಕಗ್ನಿಶನ್‌ ಪಾಸ್‌ವರ್ಡ್‌ ಹೊಂದಿರುತ್ತಾರೆ. ಮಾಸ್ಕ್ ಧರಿಸಿ, ಫೋನ್‌ ಲಾಕ್‌ ತೆರೆಯುವುದು ಅಸಾಧ್ಯ. ಇಂಥವರಿಗೆ ಈ ಮಾಸ್ಕ್ ಪ್ರಯೋಜನಕಾರಿ.

Advertisement

Udayavani is now on Telegram. Click here to join our channel and stay updated with the latest news.

Next