Advertisement

ಕಾಮೋತ್ತೇಜನ ಔಷಧಕ್ಕಾಗಿ ಅಕ್ರಮ ಸಾಗಾಟ: 295 ಆಮೆಗಳ ಸಹಿತ ಓರ್ವನ ಬಂಧನ

09:20 PM Aug 07, 2022 | Team Udayavani |

ಲಕ್ನೋ : ಕಾಮೋತ್ತೇಜಕಗಳನ್ನು ತಯಾರಿಸಲು ಅಕ್ರಮವಾಗಿ ಸಾಗಿಸಲಾಗುತ್ತಿದ್ದ 295 ಸಿಹಿನೀರಿನ ಆಮೆಗಳನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಭಾನುವಾರ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಭಾನುವಾರ ಈ ಜಿಲ್ಲೆಯ ಬಂಥಾರ ಪ್ರದೇಶದಲ್ಲಿ WCCB (ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ) ಮತ್ತು ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ಸಂರಕ್ಷಿತ ಪ್ರಾಣಿಗಳ ಕಳ್ಳಸಾಗಣೆಯಲ್ಲಿ ತೊಡಗಿರುವ ಗ್ಯಾಂಗ್‌ನ ಸದಸ್ಯನೆಂದು ಹೇಳಲಾದ ವ್ಯಕ್ತಿಯನ್ನು ಬಾಂತಾರ ಪ್ರದೇಶದಲ್ಲಿ ಬಂಧಿಸಲಾಗಿದೆ.

ಸಂರಕ್ಷಿತ ಪ್ರಾಣಿಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ವಾಸಿಂ ಎಂಬಾತನನ್ನು ಎಸ್‌ಟಿಎಫ್ ಬಂಧಿಸಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

“ಒಟ್ಟು 295 ಸಿಹಿನೀರಿನ ಆಮೆಗಳನ್ನು ಕಳ್ಳಸಾಗಣೆದಾರರಿಂದ ವಶಪಡಿಸಿಕೊಳ್ಳಲಾಗಿದೆ” ಎಂದು ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ರವಿ ಸಿಂಗ್ ಹೇಳಿದ್ದಾರೆ.ಪ್ರಾಣಿಗಳನ್ನು ಆಹಾರವಾಗಿ ಬಳಸಲು ಅಥವಾ ಸಾಕುಪ್ರಾಣಿಗಳಾಗಿ ಸಾಕಲು ಸರಬರಾಜು ಮಾಡುವುದಾಗಿ ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳ ಪ್ರಕಾರ ಆಮೆಗಳ ದೇಹದ ಭಾಗಗಳನ್ನು ಕಾಮೋತ್ತೇಜಕ ಔಷಧವನ್ನು ತಯಾರಿಸಲು ಬಳಸಲಾಗುತ್ತಿತ್ತು.

ಎಸ್‌ಟಿಎಫ್ ನೀಡಿದ ಪತ್ರಿಕಾ ಹೇಳಿಕೆಯ ಪ್ರಕಾರ, ಜಿಲ್ಲೆಯ ತೇರೈ ಪ್ರದೇಶದಲ್ಲಿನ ಜೌಗು ಪ್ರದೇಶದ ನದಿಗಳಿಂದ ಆಮೆಗಳನ್ನು ಹಿಡಿಯಲಾಗಿದೆ. ಆಮೆಗಳನ್ನು ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಮೂಲಕ ಕಳ್ಳಸಾಗಣೆದಾರರು ಆಗ್ನೇಯ ಏಷ್ಯಾದ ದೇಶಗಳಿಗೆ ಕಳ್ಳಸಾಗಣೆ ಮಾಡುವವರಿದ್ದರು.ಪತ್ತೆಯಾದ ಆಮೆಗಳನ್ನು ಅರಣ್ಯ ಇಲಾಖೆಯ ರಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next