ಪಣಜಿ: ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಮಹಾದಾಯಿ ವಿವಾದದ ಕುರಿತು ಚರ್ಚೆಗೆ ಅವಕಾಶ ಕಲ್ಪಿಸುವಂತೆ ಕೋರಿ ಸ್ಪೀಕರ್ ರಮೇಶ್ ತವಾಡ್ಕರ್‌ರಿಗೆ ಪತ್ರ ಬರೆಯುವುದಾಗಿ ಗೋವಾ ವಿಪಕ್ಷ ನಾಯಕ ಯುರಿ ಅಲೆಮಾವೋ ಹೇಳಿದ್ದಾರೆ.
ಜ.16ರಿಂದ 19ರವರೆಗೆ ಗೋವಾದ ವಿಧಾನಸಭೆ ಅಧಿವೇಶನ ನಡೆಯಲಿದೆ. ಕಳಸಾ-ಬಂಡೂರಿ ಅಣೆಕಟ್ಟು ಯೋಜನೆ ಕುರಿತು ಚರ್ಚಿಸಲು ಒಂದು ದಿನದ ಕಲಾಪವನ್ನು ಮೀಸಲಿಡಬೇಕೆಂದು ಕೋರಲಾದ ಪತ್ರವನ್ನು ಸೋಮವಾರವೇ ಸ್ಪೀಕರ್‌ಗೆ ಸಲ್ಲಿಸುತ್ತೇನೆ ಎಂದು ಅಲೆಮಾವೋ ಹೇಳಿದ್ದಾರೆ.
ಅಧಿವೇಶನದಲ್ಲಿ ವಿಪಕ್ಷಗಳಿಂದ ಕನಿಷ್ಠ ಏಳಾ ದರೂ ಗಮನ ಸೆಳೆಯುವ ನಿರ್ಣಯಗಳನ್ನು ಸ್ವೀಕರಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ. ವಿಧಾನಸಭೆಯ ಕಾರ್ಯ ಕಲಾಪಗಳ ಸಲಾಹ ಸಮಿತಿ ಸೋಮವಾರ ಸಭೆ ಸೇರಲಿದೆ.