Advertisement

ಒಂದು ಕೋಮು ಸಿದ್ದುಗೆ ಅನ್ಯಾಯ ಮಾಡಿದೆ..ಇದರಿಂದಾಗಿಯೇ ಜಲಪ್ರಳಯ!

08:09 AM Feb 09, 2019 | Sharanya Alva |

ಮೈಸೂರು:ಎಲ್ಲ ರೀತಿಯ ಭಾಗ್ಯಗಳನ್ನು ನೀಡಿ, ಉತ್ತಮ ಆಡಳಿತ ಕೊಟ್ಟಿದ್ದ ಸಿದ್ದರಾಮಯ್ಯ ಅವರನ್ನು ಮೈಸೂರಿನಲ್ಲಿ ಒಂದು ಕೋಮುವಿನಿಂದಾಗಿ ಸೋಲುವಂತಾಗಿದೆ. ಹೀಗಾಗಿ ಸಿದ್ದರಾಮಯ್ಯನವರಿಗೆ ಅನ್ಯಾಯ ಮಾಡಿದ್ದಕ್ಕೆ ಕೊಡಗಿನಲ್ಲಿ ಜಲಪ್ರಳಯ ಆಯಿತು ಎಂದು ಕನಕ ಪೀಠದ ನಿರಂಜನಾನಂದಪುರಿ ಶ್ರೀ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Advertisement

ಮೈಸೂರಿನಲ್ಲಿ ಕನಕ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿಯೇ ಕಾಗಿನೆಲೆ ಶ್ರೀಗಳು ಈ ವಾಗ್ದಾಳಿ ನಡೆಸಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಸಿದ್ದರಾಮಯ್ಯನವರು ಒಳ್ಳೆಯ ಆಡಳಿತ ಕೊಟ್ಟಿದ್ದರು. ಒಂದು ಕೋಮಿನವರು(ಒಕ್ಕಲಿಗ) ಉದ್ದೇಶಪೂರ್ವಕವಾಗಿ ಸೋಲಿಸಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯನವರು ಜಿದ್ದು ಇಟ್ಟುಕೊಂಡಿದ್ದರೆ, ಇವತ್ತು ರಾಜ್ಯ ಸರ್ಕಾರವನ್ನು ಹಿಸುಕಿ ಹಾಕಬಹುದಿತ್ತು ಎಂದು ಹೇಳಿದರು.

ಸಿದ್ದರಾಮಯ್ಯ ಹಾಲುಮತ ಜನಾಂಗದಲ್ಲಿ ಹುಟ್ಟಿದವರು, ನೀರು ಕೇಳಿದವರಿಗೆ ಹಾಲು ಕೊಡುವ ಜನಾಂಗ ನಮ್ಮದು. ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರಿಗೆ ಅನ್ಯಾಯ ಮಾಡಿದ್ದಕ್ಕೆ ಕೊಡಗಿನಲ್ಲಿ ಜಲಪ್ರಳಯ ಆಗುವಂತಾಗಿದೆ. ಈ ಹಿಂದೆ ಉಡುಪಿಯಲ್ಲಿಯೂ ಕನಕದಾಸರಿಗೆ ಶ್ರೀಕೃಷ್ಣನ ದರ್ಶನ ಮಾಡಲು ಬಿಡದಿದ್ದಾಗ, ಅಂದು ಭೂಕಂಪನವಾಗಿತ್ತು. ಹಾಲುಮತದವರನ್ನು ಸೋಲಿಸಿದರೆ ಪ್ರಕೃತಿ ಕೂಡಾ ಸಹಿಸಲ್ಲ ಎಂದು ಕಾಗಿನೆಲೆಶ್ರೀಗಳು ವಾಗ್ದಾಳಿ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next