Advertisement

ಹೊಸಬರ ‘ಒಂದು ಸನ್ನೆ ಒಂದು ಮಾತು’

03:26 PM Mar 10, 2023 | Team Udayavani |

“ಒಂದು ಸನ್ನೆ ಒಂದು ಮಾತು’ ಎಂಬ ಚಿತ್ರ ವೊಂದು ಸದ್ದಿಲ್ಲದೇ ಚಿತ್ರೀ ಕರಣ ಮುಗಿಸಿದೆ. ಅಮೋಘ್ ಸಿದ್ದಾರ್ಥ್ ಈ ಚಿತ್ರದ ನಾಯಕ. ಇತ್ತೀಚೆಗೆ ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆ ಮಾಡಿದೆ ಚಿತ್ರ ತಂಡ.

Advertisement

“ಒಂದು ಸನ್ನೆ ಒಂದು ಮಾತು’ ಚಿತ್ರವನ್ನು ಸಂತೋಷ್‌ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಂಗಭೂಮಿ ಕಲಾವಿದ ಅಮೋಘ್ ಸಿದ್ದಾರ್ಥ್ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಕಳೆದ ಏಳು ವರ್ಷಗಳಿಂದ ಅಮೋಘ್ ಸಿದ್ದಾರ್ಥ್ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ಮಂಡ್ಯ ರಮೇಶ್‌ ಅವರ ನಟನ ರಂಗಭೂಮಿ ತಂಡದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಇದೀಗ “ಒಂದು ಸನ್ನೆ ಒಂದು ಮಾತು’ ಮೂಲಕ ನಾಯಕ ನಟನಾಗಿ ಪರಿಚಿತರಾಗುತ್ತಿದ್ದಾರೆ. ನಾಯಕಿಯಾಗಿ ಯಶಸ್ವಿನಿ ನಾಚಪ್ಪ ನಟಿಸುತ್ತಿದ್ದಾರೆ.

“ಮುಗುಳು ನಗೆ’ ಸಿನಿಮಾಗೆ ಸಹಾಯಕ ನಿರ್ದೇಶಕಿಯಾಗಿ ಯೋಗರಾಜ್‌ ಭಟ್‌ ಜೊತೆ ಕೆಲಸ ಮಾಡಿದ ಅನುಭವ ಇವರಿಗಿದೆ. ಕಳೆದ ಐದು ವರ್ಷದಿಂದ ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಇವರಿಗೆ ನಾಯಕಿಯಾಗಿ ಇದು ಮೊದಲ ಸಿನಿಮಾ. ಉಳಿದಂತೆ ದಯಾನಂದ್‌ ನೀನಾಸಂ, ವೆಂಕಣ್ಣ ಜಾಲಿಮನೆ, ಮುರುಳಿ ಶೃಂಗೇರಿ ಸೇರಿದಂತೆ ಹಲವು ರಂಗಭೂಮಿ ಕಲಾವಿದರ ಸಮಾಗಮ ಈ ಚಿತ್ರದಲ್ಲಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next