Advertisement

ಕಾಡಲ್ಲೊಂದು ಒಲವಿನ ಹಾಡು!

07:20 PM Oct 10, 2022 | Team Udayavani |

ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸುತ್ತಿರುವ “ಒಂದಂಕೆ ಕಾಡು’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಇತ್ತೀಚೆಗೆ ಚಿತ್ರತಂಡ “ಒಂದಂಕೆ ಕಾಡು’ ಸಿನಿಮಾದ “ಓ ಒಲವೇ…’ ಎಂಬ ರೊಮ್ಯಾಂಟಿಕ್‌ ಹಾಡನ್ನು ಬಿಡುಗಡೆ ಮಾಡಿದೆ.

Advertisement

ಮಧು ಹೆಗ್ಡೆ ಸಂಗೀತ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ “ಓ ಒಲವೇ…’ ಹಾಡಿಗೆ ಡಾ. ಉಮೇಶ್‌ ಸಾಹಿತ್ಯವಿದ್ದು, ಕಪಿಲ್‌ ನಾಯರ್‌ ಹಾಡಿಗೆ ಧ್ವನಿಯಾಗಿದ್ದಾರೆ. ಸುಮಾರು ಹದಿನೈದು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ, ಈ ಹಿಂದೆ “ಜೊತೆ ಜೊತೆಯಲಿ’, “ಶುಭ ವಿವಾಹ’, “ಮಾನಸ ಸರೋವರ’ ಮೊದಲಾದ ಹಲವು ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶಿಸಿದ ಅನುಭವವಿರುವ ರಾಮಚಂದ್ರ ವೈದ್ಯ “ಒಂದಂಕೆ ಕಾಡು’ ಸಿನಿಮಾಕ್ಕೆ ನಿರ್ದೇಶನ ಮಾಡುವ ಮೂಲಕ ಮೊದಲ ಬಾರಿಗೆ ಕಿರುತೆರೆಯಿಂದ, ಹಿರಿತೆರೆಗೆ ಅಡಿಯಿಡುತ್ತಿದ್ದಾರೆ. ಸಸ್ಪೆನ್ಸ್‌ -ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಒಂದಂಕೆ ಕಾಡು’ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ.

ಸಿನಿಮಾದಲ್ಲಿ ರಥರ್ವ್‌ ಪೊನ್ನಣ್ಣ ನಾಯಕನಾಗಿ ಹಾಗೂ ಸೋನಿ ಮುಲೇವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕಿರಣ್‌ ನಾಯಕ್‌, ಮಧು ಹೆಗಡೆ, ಸುಮಂತ್‌ ಭಟ್‌, ಪ್ರೇರಣಾ ಕಂಬಂ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಒಂದಂಕೆ ಕಾಡು’ ಸಿನಿಮಾಕ್ಕೆ ಶ್ರಾವಣಿ ಶಿವ್‌ ಕಥೆ, ರಾಮಚಂದ್ರ ವೈದ್ಯ ಚಿತ್ರಕಥೆ, ಟಿ. ಜಿ ನಂದೀಶ್‌ ಸಂಭಾಷಣೆ ಬರೆದಿದ್ದಾರೆ.

ಸಿನಿಮಾಕ್ಕೆ ಗಣೇಶ್‌ ಹೆಗ್ಡೆ ಛಾಯಾಗ್ರಹಣ, ಶ್ರೀಕಾಂತ್‌ ಸಂಕಲನವಿದೆ. ಸದ್ಯ ಚಿತ್ರೀಕರಣ ಮುಗಿಸಿರುವ ಸಿನಿಮಾ ತಂಡ ಇದೇ ವರ್ಷ “ಒಂದಂಕೆ ಕಾಡು’ ಸಿನಿಮಾವನ್ನು ಪ್ರೇಕ್ಷಕರೆದುರು ತರುವ ತಯಾರಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next