Advertisement

ಕಾಡಿದ ಬಡತನ: ಅಂದು ಭಾರತದ ಪರವಾಗಿ ಫುಟ್ಬಾಲ್‌ ಆಡಿದ ತಾರೆ; ಇಂದು ಫುಡ್‌ ಡೆಲಿವೆರಿ ಮಾಡುವ ಏಜೆಂಟ್

04:53 PM Jan 12, 2023 | Team Udayavani |

ಕೋಲ್ಕತ್ತಾ: ಜೀವನದಲ್ಲಿ ಎಲ್ಲರಿಗೂ ಏನಾದರೂ ಸಾಧಿಸಲು ಗೆಲುವು ಹಾಗೂ ಸೋಲು ಎನ್ನುವ ಎರಡು ಅವಕಾಶಗಳು ಬಂದೇ ಬರುತ್ತದೆ. ಅಂದರೆ ಯಶಸ್ವಿ ಹಾಗೂ ವೈಫಲ್ಯ. ಈ ಎರಡೂ ಒಮ್ಮೆಗೆ ಬರುವುದಿಲ್ಲ. ಕೆಲವರಿಗೆ ಯಶಸ್ವಿ ಮೊದಲು ಪ್ರಾಪ್ತಿಯಾದರೆ, ಇನ್ನು ಕೆಲವರಿಗೆ ವೈಫ್ಯಲ್ಯ ಮೊದಲು ಪ್ರಾಪ್ತಿಯಾಗುತ್ತದೆ.

Advertisement

ಈ ಎರಡು ಪರಿಸ್ಥಿತಿಗಳಲ್ಲಿ ನಾವು ಒಂದನ್ನು ನಂಬಿಕೊಂಡು ಇರಬೇಕು ಅದು ಭರವಸೆ ಎಂಬ ಆಶಭಾವವನ್ನು. ಈ ಮಾತು ಒಂದು ಕಾಲದಲ್ಲಿ ಭಾರತದ ಪರವಾಗಿ ಅಂತಾರಾಷ್ಟ್ರೀಯ ಫುಟ್‌ ಬಾಲ್‌ ಪಂದ್ಯಗಳನ್ನಾಡಿ ಇಂದು ಫುಡ್‌ ಡೆಲಿವೆರಿ ಮಾಡಿಕೊಂಡು ಜೀವನವನ್ನು ಸಾಗಿಸುತ್ತಿರುವ ಕೋಲ್ಕತ್ತಾ ಮೂಲದ ಪೌಲಮಿ ಅಧಿಕಾರಿ ಎಂಬ ಮಹಿಳಾ ಆಟಗಾರ್ತಿಯ ಬದುಕಿಗೆ ಉದಾಹರಣೆಯಾಗಿ ನಿಲ್ಲುತ್ತದೆ.

ಬಡತನದ ಹಿನ್ನೆಲೆಯಲ್ಲಿ ಹುಟ್ಟಿದ ಪೌಲಮಿ ಬಾಲ್ಯದಲ್ಲೇ ಅಮ್ಮನೆಂಬ ಪ್ರೀತಿಸುವ ಜೀವವನ್ನು ಕಳೆದುಕೊಂಡು ಸಂಬಂಧಿಕರ ಮನೆಯಲ್ಲಿ ಬೆಳೆದವರು. ಪಾಠಕ್ಕಿಂತ ಆಟದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಪೌಲಮಿಗೆ ಹೆಚ್ಚು ಇಷ್ಟವಾಗುತ್ತಿದ್ದದ್ದು, ಫುಟ್‌ ಬಾಲ್‌ ಆಟ ಮಾತ್ರ. ಪ್ರತಿನಿತ್ಯ ಫುಟ್ಬಾಲ್‌ ಆಡುತ್ತಾ ಬಂದ ಪೌಲಮಿ, ವಯಸ್ಸು ಕಳೆಯುತ್ತಿದ್ದಂತೆ ಫುಟ್ಬಾಲ್‌ ನಲ್ಲಿ ಹೆಚ್ಚು ಭಾಗವಹಿಸಿ, ಜಿಲ್ಲಾಮಟ್ಟ,ತಾಲೂಕು ಮಟ್ಟಕ್ಕೆ ತಲುಪಿ, 14ನೇ ವಯಸ್ಸಿನಲ್ಲಿ ನುರಿತ ತರಬೇತಿಗಾರರಿಂದ ಟ್ರೈನಿಂಗ್‌ ಪಡೆದುಕೊಂಡು 2013 ರಲ್ಲಿ ಮಹಿಳಾ ಜೂನಿಯರ್ ರಾಷ್ಟ್ರೀಯ ಅಂಡರ್-16 ಮಾದರಿಯಲ್ಲಿ ಏಷ್ಯನ್ ಫುಟ್ಬಾಲ್ ಕಾನ್ಫೆಡರೇಶನ್ ನ ಅರ್ಹತಾ ಪಂದ್ಯವನ್ನು ಕೊಲಂಬೊದಲ್ಲಿ ಆಡಿ ಭಾರತದಲ್ಲಿ ಆಡುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ. 16 ಮಾದರಿಯಲ್ಲಿ ಅಮೆರಿಕಾ, ಜರ್ಮನಿಯಲ್ಲೂ ಭಾರತದ ಪರವಾಗಿ ಆಟವನ್ನಾಡುತ್ತಾರೆ.

ಇದಾದ ಬಳಿಕ ಭಾರತದ ಪರವಾಗಿ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಹೋಮ್‌ ಲೆಸ್ ವಿಶ್ವಕಪ್ ಫುಟ್ಬಾಲ್‌ ನಲ್ಲೂ ತನ್ನ ಕಾಲ್ಚೆಂಡಿನ ಕೌಶಲ್ಯವನ್ನು ತೋರಿಸಿ ಮಿಂಚುತ್ತಾರೆ.

Advertisement

ಪೌಲಮಿ ಖುಷಿಯ ಉತ್ತುಂಗದಲ್ಲಿರುವಾಗಲೇ ಅವರ ಜೀವನದಲ್ಲಿ ಒಂದಾದ ಮೇಲೆ ಒಂದಾರಂತೆ ಸವಾಲುಗಳು ಎದುರಾಗುತ್ತವೆ.

2018 ರ ಮಧ್ಯದಲ್ಲಿ ಅಭ್ಯಾಸದ ವೇಳೆ ಪೌಲಮಿ ಅವರಿಗೆ ಅಸ್ಥಿರಜ್ಜು ಮತ್ತು ಮೊಣಕಾಲಿನ ಕಾರ್ಟಿಲೆಜ್ ಗಾಯಗಳು ಉಂಟಾಗುತ್ತದೆ. ಇದೇ ಕೊನೆ ಆ ಬಳಿಕ ಮತ್ತೆಂದು ಪೌಲಮಿ ಫುಟ್ಬಾಲ್‌ ಆಟದ ಮೈದಾನದಲ್ಲಿ ಭಾರತದ ಪರವಾಗಿ ಆಡಲೇ ಇಲ್ಲ. ಸತತ ಶಸ್ತ್ರ ಚಿಕಿತ್ಸೆ ನಡೆದರೂ ಪೌಲಮಿ ಕಾಲ್ಚೆಂಡಿನ ಆಟಕ್ಕೆ ಮರಳಲಿಲ್ಲ.

ಇತ್ತೀಚೆಗೆ ಟ್ವಿಟರ್‌ ಬಳಕೆದಾರರೊಬ್ಬರು ಸೋಶಿಯಲ್‌ ಮೀಡಿಯಾದಲ್ಲಿ ಫುಡ್‌ ಡೆಲಿವೆರಿ ಮಾಡುತ್ತಿರುವ ಪೌಲಮಿ ಅವರ ಪ್ರಸ್ತುತ ಸ್ಥಿತಿಯನ್ನು ತೋರಿಸಿ ಹಂಚಿಕೊಂಡಿದ್ದರು. ಒಂದು ಕಾಲದಲ್ಲಿ ಭಾರತದ ಪರವಾಗಿ ಆಡುತ್ತಿದ್ದ ಪೌಲಮಿ ಇಂದು ಬಡತನದಿಂದ ತನ್ನ ಕುಟುಂಬವನ್ನು ಸಾಗಿಸಲು ದಿನಕ್ಕೆ 400 -500 ರೂ. ದುಡಿಯುತ್ತಾ ಫುಡ್‌ ಡೆಲಿವೆರಿಯನ್ನು ತನ್ನ ಅಂಕಲ್‌ ನ ಸೈಕಲ್‌ ಬಳಸಿಕೊಂಡು ಮಾಡುತ್ತಿದ್ದಾರೆ.

ಇದನ್ನೂ ಓದಿ: ಕೋಲ್ಕತ್ತಾದಲ್ಲಿ ಕುಲದೀಪ್-ಸಿರಾಜ್ ಬಿಗುದಾಳಿ: 215ಕ್ಕೆ ಗಂಟುಮೂಟೆ ಕಟ್ಟಿದ ಲಂಕಾ

24 ವರ್ಷದ ಪೌಲಮಿ ದಿನಕ್ಕೆ  12 ಗಂಟೆ ಫುಡ್‌ ಡೆಲಿವೆರಿ ಕೆಲಸವನ್ನು ಮಾಡುತ್ತಾರೆ. ಈ ನಡುವೆ ಅಂತಿಮ ವರ್ಷದ ಬಿ.ಎ ಪದವಿಯನ್ನು ಮಾಡುತ್ತಿದ್ದಾರೆ. ತನ್ನ ತಂದೆ ಪಾರ್ಟ್‌ ಟೈಮ್‌ ಆಗಿ ಕ್ಯಾಬ್‌ ಡ್ರೈವರ್‌ ಕೆಲಸವನ್ನು ಮಾಡುತ್ತಿದ್ದಾರೆ. ನಾನು ಕುಟುಂಬವನ್ನು ನಿಭಾಯಿಸುವ ಸಲುವಾಗಿ ಈ ಕೆಲಸವನ್ನು ಮಾಡುತ್ತಿದ್ದೇನೆ. ಸಂಜೆ ಒಂದು 2 ಗಂಟೆ ಫುಟ್ಬಾಲ್‌ ಆಡುತ್ತೇನೆ. ಮುಂದೆ ಎಂದಾದರೂ ಮತ್ತೆ ಭಾರತದ ಜೆರ್ಸಿಯನ್ನು ತೊಟ್ಟು ಮೈದಾನಕ್ಕೆ ಇಳಿಯಬಹುದೆಂದೆನ್ನು ಆಸೆ ವ್ಯಕ್ತಪಡಿಸುತ್ತಾರೆ ಪೌಲಮಿ.

ಸೋಶಿಯಲ್‌ ಮೀಡಿಯಾದಲ್ಲಿ ಪೌಲಮಿ ಫುಡ್‌ ಡೆಲಿವೆರಿ ಮಾಡುತ್ತಿರುವ ವಿಡಿಯೋ ವೈರಲ್‌ ಆಗಿದ್ದು, ಇದಾದ ಬಳಿಕ ಭಾರತೀಯ ಫುಟ್ಬಾಲ್ ಸಂಸ್ಥೆ (ಐಎಫ್‌ಎ) ಮಂಗಳವಾರ ಆಕೆಯನ್ನು ಸಂಪರ್ಕಿಸಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next