Advertisement
ಮಳೆ ಬರೋದಿಲ್ವಾ? ವರ್ಷವಿಡೀ ಬರವೇ? ಇಲ್ಲವೇ ಈ ವರ್ಷ ಜೋರು ಮಳೆಯಾಗಿ, ಜಲಪ್ರವಾಹ ಉಂಟಾಗುತ್ತದೆಯೇ?- ಈ ಎಲ್ಲ ಮುನ್ಸೂಚನೆಗಳನ್ನು ಬಲ್ಲ ದೇವನೊಬ್ಬ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಅಂಬಲಗೆರೆ ಗ್ರಾಮದಲ್ಲಿ ಪ್ರತಿಷ್ಠಾಪಿತನಾಗಿದ್ದಾನೆ. ಆತನೇ ಗರುಡಮೂರ್ತಿ! ಇವನು ಕಂಬದ ಮೇಲಿನ ಕಲ್ಲಿನ ಮೂರ್ತಿಯೇ ಆದರೂ, ಕಾಲ ಕಾಲಕ್ಕೆ ತನ್ನ ಚಲನೆಗಳ ಮೂಲಕ ಭವಿಷ್ಯ ನುಡಿಯುತ್ತಾನೆಂಬುದು ಈ ಊರಿನವರ ನಂಬಿಕೆ.ಅಂಬಲಗೆರೆಯ ರಂಗನಾಥ ದೇಗುಲದ ಮುಂದೆ ಸ್ಥಾಪಿತವಾಗಿರುವ ಗರುಡಮೂರ್ತಿಯ ಶಕುನ, ಈ ದಿನಗಳವರೆಗೂ ನಿಜವಾಗುತ್ತಾ ಬಂದಿದೆಯಂತೆ. 30 ಅಡಿ ಎತ್ತರದ ಕಂಬದ ಮೇಲೆ ನೆಲೆನಿಂತ ಗರುಡ, ತನ್ನ ಭಂಗಿಯ ವಾಲುವಿಕೆಗಳಿಂದ ಬರ, ಪ್ರಕೃತಿ ವಿಕೋಪ, ಮಳೆ ಸೂಚನೆ, ಸಮೃದ್ಧಿ ಬೆಳೆ, ದೇಶದಲ್ಲಿ ನಡೆಯುವ ಮುಖ್ಯ ಘಟನಾವಳಿಗಳ ಕುರಿತು ಶಕುನ ತಿಳಿಸುತ್ತಾ ಬಂದಿದ್ದಾನೆ ಎನ್ನುವ ಬಲವಾದ ನಂಬಿಕೆ ಇಲ್ಲಿನ ಭಕ್ತಾದಿಗಳಲ್ಲಿ ಬೇರೂರಿದೆ.
Related Articles
– ಬಿ.ಆರ್. ರಂಗಸ್ವಾಮಿ, ಅಂಬಲಗೆರೆ ವಾಸಿ
Advertisement
ಗರುಡ ಶಕುನ ಹೀಗಿರುತ್ತೆ…ಗರುಡನ ಮುಖದ ನೋಟ ನೇರವಾಗಿದ್ದರೆ ಉತ್ತಮ ಮಳೆಯಾಗಿ ಸಮೃದ್ಧಿ ಬೆಳೆಯಾಗಲಿದೆ. ಮೂರ್ತಿ ಬಾಗಿದ್ದರೆ ತೀವ್ರ ಬರಗಾಲವೆಂದು, ಹಿಂದಕ್ಕೆ ವಾಲಿದ್ದರೆ ಪ್ರಕೃತಿ ವಿಕೋಪ, ಬರ ಸಂಭವಿಸಲಿದೆ ಎನ್ನುವ ಶಕುನಗಳು ಇಂದಿಗೂ ನಿಜವಾಗಿವೆ. – ಹರಿಯಬ್ಬೆ ಹೆಂಜಾರಪ್ಪ