ವಿಜಯಪುರ: ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಪರಿಶೀಲನೆಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮಾ. 25ರಂದು ವಿಜಯಪುರಕ್ಕೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವದ ಮುಖ್ಯ ನೋಂದಣಿ ಜವಾಬ್ದಾರಿ ಹೊತ್ತವರು ಹಾಗೂ ಪಕ್ಷದ ವಿವಿಧ ಘಟಕಗಳ ಪ್ರಮುಖರು ಪಾಲ್ಗೊಳ್ಳುವಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರು ಸೂಚಿಸಿದರು.
ನಗರಕ್ಕೆ ಮಾ. 25ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಡಿಜಿಟಲ್ ಸದಸ್ಯತ್ವ ಪರಿಶೀಲನೆ ನಡೆಸಲು ಜಿಲ್ಲೆಗೆ ಆಗಮಿಸುತ್ತಿರುವುದರಿಂದ ಆಶ್ರಮ ರಸ್ತೆ ಸದಾಶಿವ ನಗರದಲ್ಲಿರುವ ಕಿತ್ತೂರ ರಾಣಿ ಚನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸದರಿ ಸಭೆಗೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಪಕ್ಷದ ಪ್ರಮುಖರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಇದಲ್ಲದೇ ಮಾ. 28ರಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಡಾ| ಎಂ.ಬಿ. ಪಾಟೀಲ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಧಿಕಾರ ಸ್ವೀಕಾರದ ಪದಗ್ರಹಣ ಕಾರ್ಯಕ್ರಮ ಜರುಗಲಿದೆ. ಸದರಿ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯಿಂದ 5 ಸಾವಿರ ಜನ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ ಮುಶ್ರೀಫ್, ಬಿ.ಎಸ್. ಪಾಟೀಲ (ಯಾಳಗಿ), ಮಾಜಿ ಶಾಸಕರಾದ ವಿಠಲ ಕಟಕಧೋಂಡ, ಡಿಜಿಟಲ್ ಸದಸ್ಯತ್ವ ನೋಂದಣಿ ವೀಕ್ಷಕಿ ಕಾಂತಾ ನಾಯಕ, ಹಾಸಿಂಪೀರ ವಾಲಿಕಾರ, ವೈಜನಾಥ ಕಪೂìರಮಠ, ಮಹಾದೇವಿ ಗೋಕಾಕ, ವಿದ್ಯಾರಾಣಿ ತುಂಗಳ, ಶ್ರೀಕಾಂತ ಛಾಯಾಗೋಳ, ಗಂಗಾಧರ ಸಂಬಣ್ಣಿ ಮಾತನಾಡಿದರು. ಜಿ.ಪಂ. ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಮುಖಂಡರಾದ ಚಾಂದಸಾಬ ಗಡಗಲಾವ, ಆಜಾದ ಪಟೇಲ, ಸುಭಾಷ ಛಾಯಾಗೋಳ, ಸುರೇಶಗೌಡ ಪಾಟೀಲ, ರಾಮನಗೌಡ ಬಗಲಿ, ವಿಶ್ವನಾಥ ಮಠ, ವಿದ್ಯಾವತಿ ಅಂಕಲಗಿ, ಜಮೀರ ಬಕ್ಷಿ, ಬಾಳನಗೌಡ ಪಾಟೀಲ, ಆರತಿ ಶಹಾಪೂರ, ಸಿದ್ದು ಗೌಡನ್ನವರ, ಗುರುನಾಥ ತಾರನಾಳ, ಬಶೀರ ಅಹ್ಮದ ಕಸಾಬ, ಸುನೀಲ ಉಕ್ಕಲಿ ಸೇರಿದಂತೆ ಇತರರು ಇದ್ದರು.