Advertisement

ರೇ 100ನೇ ಜನ್ಮದಿನಾಚರಣೆ; ಭಾರತೀಯ ಚಿತ್ರರಂಗದ ಶ್ರೇಷ್ಠ ನಿರ್ದೇಶಕ ಸತ್ಯಜಿತ್ ರೇ ನೆನಪು

02:45 PM May 02, 2021 | Team Udayavani |

ಮಣಿಪಾಲ: ಭಾರತೀಯ ಚಿತ್ರರಂಗದ ಮೇರು ವ್ಯಕ್ತಿತ್ವದ, ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಅವರ 100ನೇ ಹುಟ್ಟು ಹಬ್ಬದ (ಮೇ 2, 1921) ದಿನವಾಗಿದೆ. ಜಾಗತಿಕ ಸಿನಿಮಾ ಇತಿಹಾಸದಲ್ಲಿ ಬೆಂಗಾಲಿ ನಿರ್ದೇಶಕ ರೇ ಖ್ಯಾತರಾಗಿದ್ದರು ಎಂಬುದಕ್ಕೆ ಖ್ಯಾತ ಜಪಾನಿ ನಿರ್ದೇಶಕ ಅಕಿರಾ ಕುರೊಸವಾ ಅವರ ಹೊಗಳಿಕೆಯೇ ಸಾಕ್ಷಿಯಾಗಿದೆ. ಸತ್ಯಜಿತ್ ರೇ ಅವರ ಸಿನಿಮಾ ಅಂದಿನ ಸಮಾಜದ ಪ್ರತಿಬಿಂಬದ ರೂಪಕವಾಗಿದ್ದವು. ಅದ್ಭುತ ಚಮತ್ಕಾರದ ಮೂಲಕ ಬೆಳ್ಳಿತೆರೆಗೆ ಚಿತ್ರಗಳನ್ನು ತಂದ ಹೆಗ್ಗಳಿಕೆ ರೇ ಅವರದ್ದಾಗಿದೆ.

Advertisement

ಸತ್ಯಜಿತ್ ರೇ ಅವರದ್ದು ಬರಹಗಾರ ಮತ್ತು ಕಲಾವಿದರ ಕುಟುಂಬವಾಗಿತ್ತು. ರೇ ಅವರ ತಂದೆ ಸುಕುಮಾರ್ ರೇ, ತಾಯಿ ಸುಪ್ರಭಾ ರೇ ಸಾಹಿತ್ಯಾಸಕ್ತರಾಗಿದ್ದರು. ಹೀಗೆ ಸತ್ಯಜಿತ್ ರೇ ಅವರು ಸಿನಿಮಾರಂಗಕ್ಕೆ ಪದಾರ್ಪಣೆ ಮಾಡುವ ಮುನ್ನ ಜಾಹೀರಾತು ಏಜೆನ್ಸಿಯಲ್ಲಿ, ಪುಸ್ತಕ ಪ್ರಕಾಶನದ ಅಂಗಡಿಯಲ್ಲಿ ಪುಸ್ತಕಗಳ ಡಿಸೈನಿಂಗ್ ಕೆಲಸ ಮಾಡಿಕೊಂಡಿದ್ದರು.

28 ವರ್ಷದ ಯುವಕ ಸತ್ಯಜಿತ್ ರೇ ಬದುಕಿನ ಹಾದಿ ತಿರುವು ಪಡೆದುಕೊಂಡಿದ್ದು ಫ್ರೆಂಚ್ ನಿರ್ದೇಶಕ ಜೀನ್ ರೆನೊಯಿರ್ ಅವರು ಕೋಲ್ಕತಾಕ್ಕೆ ಭೇಟಿ ನೀಡಿದ್ದ ವೇಳೆ ಆಕಸ್ಮಿಕವಾಗಿ ಪರಿಚಯವಾಗಿ ಮಾತುಕತೆ ನಡೆಸಿದ್ದರು. ಬಳಿಕ ಇಟಾಲಿಯನ್ ನಿಯೋ ರಿಯಲಿಸ್ಟ್ ಸಿನಿಮಾ “ಬೈಸಿಕಲ್ ಥೀವ್ಸ್” ಸಿನಿಮಾವನ್ನು ವೀಕ್ಷಿಸಿದ್ದರು. ಅದಕ್ಕಿಂತ ಮೊದಲೇ ರೇ ತಲೆಯೊಳಗೆ “ಪಥೇರ್ ಪಾಂಚಾಲಿ” ಕಥೆ ಮೊಳಕೆಯೊಡೆದಿತ್ತು. 1948ರಲ್ಲಿ ಬೈಸಿಕಲ್ ಥೀವ್ಸ್ ತೆರೆಕಂಡಿತ್ತು.

ಕೊನೆಗೆ ರೇ 1955ರಲ್ಲಿ ಪಥೇರ್ ಪಾಂಚಾಲಿ ಎಂಬ ಸಿನಿಮಾವನ್ನು ನಿರ್ದೇಶಿಸುವ ಮೂಲಕ ಸಿನಿಮಾಲೋಕಕ್ಕೆ ಕಾಲಿಟ್ಟಿದ್ದರು. ಜತೆಗೆ ತಮ್ಮ ಮೊತ್ತ ಮೊದಲ ಸಿನಿಮಾದ ಮೂಲಕ ಸಂಪ್ರದಾಯದ ಕಟ್ಟುಪಾಡುಗಳನ್ನು ತೊಡೆದು ಹಾಕಿ ಹೊಸ ಬುನಾದಿ ಹಾಕಿಕೊಟ್ಟಿದ್ದರು. 1956ರಲ್ಲಿ ಅಪಾರಾಜಿತೋ, 1958ರಲ್ಲಿ ಪರಾಶ್ ಪಥಾರ್, ಜಲ್ ಸಾಗರ್, 1959ರಲ್ಲಿ ಅಪೂರ್ವ ಸಾಗರ್, ದೇವಿ, ತೀನ್ ಕನ್ಯಾ, ದ ಪೋಸ್ಟ್ ಮಾಸ್ಟರ್ ಸೇರಿದಂತೆ 36 ಸಿನಿಮಾಗಳನ್ನು ನಿರ್ದೇಶಿಸಿದ್ದರು. ಪಥೇರ್ ಪಾಂಚಾಲಿ ಸಿನಿಮಾ ಬರೋಬ್ಬರಿ 11 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡೊತ್ತು.

ಭಾರತೀಯ ಹಾಗೂ ಅಂತಾರಾಷ್ಟ್ರೀಯ ಸಿನಿಮಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಸತ್ಯಜಿತ್ ರೇ ಅವರು 32 ಭಾರತೀಯ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗೆ ಭಾಜನರಾಗಿದ್ದರು. ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿಯೂ ಪ್ರಶಸ್ತಿಗಳನ್ನು ಪಡೆದಿದ್ದರು. 1992ರಲ್ಲಿ ಭಾರತ ಸರ್ಕಾರ ಸತ್ಯಜಿತ್ ರೇ ಅವರಿಗೆ ದೇಶದ ಪ್ರತಿಸ್ಠಿತ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು. 1992ರ ಏಪ್ರಿಲ್ 23ರಂದು ರೇ ಇಹಲೋಕ ತ್ಯಜಿಸಿದ್ದರು.

Advertisement

ರೇ ನಿರ್ದೇಶಿಸಿದ ಪ್ರಮುಖ ಸಿನಿಮಾ:

1955 Pather Panchali

1956 Aparajito

1958 Parash Pathar, Jalsaghar

1959 Apur Sansar

1960 Devi

1961 Teen Kanya

 • The Postmaster

 • Monihara

 • Samapti

1961 Rabindranath Tagore

1962 Kanchenjungha, Abhijan

1963 Mahanagar

1964 Charulata, Two

1965 Kapurush-O-Mahapurush

1966 Nayak

1967 Chiriyakhana

1969 Goopy Gyne Bagha Byne

1970 Aranyer Din Ratri

1970 Pratidwandi

1971 Seemabaddha, Sikkim 

Advertisement

Udayavani is now on Telegram. Click here to join our channel and stay updated with the latest news.

Next