Advertisement

Bengaluru:ವಿಮಾನ ನಿಲ್ದಾಣದಲ್ಲಿ CM ಪ್ರಧಾನಿಯನ್ನು ಸ್ವಾಗತಿಸಿಲ್ಲವೇಕೆ…ಮೋದಿ ಹೇಳಿದ್ದೇನು?

12:09 PM Aug 26, 2023 | Team Udayavani |

ಬೆಂಗಳೂರು: ಚಂದ್ರಯಾನ-3 ಯೋಜನೆಯನ್ನು ಯಶಸ್ವಿಗೊಳಿಸಿದ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಆಗಸ್ಟ್‌ 26) ಮುಂಜಾನೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ಶಿಷ್ಟಾಚಾರದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಲಿ ಅಥವಾ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸ್ವಾಗತಿಸಲು ಆಗಮಿಸಿಲ್ಲ ಯಾಕೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.

Advertisement

ಕಾಂಗ್ರೆಸ್‌ ಆರೋಪವೇನು?

ಪ್ರಧಾನಿ ಮೋದಿ ಅವರು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮನ್ನು ಸ್ವಾಗತಿಸದಂತೆ ನಿರ್ಬಂಧಿಸಿದ್ದಾರೆ ಎಂದು ಕಾಂಗ್ರೆಸ್‌ ದೂರಿದ್ದು, ಇದೊಂದು ಶಿಷ್ಟಾಚಾರದ ದೊಡ್ಡ ಉಲ್ಲಂಘನೆಯಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ:Chain Theft: ಕಷ್ಟ ನಿವಾರಿಸುವೆ ಎಂದು ಮಾಂಗಲ್ಯ ಸರ ಕದ್ದ ಕಳ್ಳ ಸ್ವಾಮೀಜಿ!

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ತಮಗಿಂತ ಮೊದಲು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರು ಅಸಮಧಾನಗೊಂಡಿದ್ದು, ಇದರಿಂದಾಗಿ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಸ್ವಾಗತಿಸದಂತೆ ಸಿಎಂ ಸಿದ್ದರಾಮಯ್ಯನವರನ್ನು ನಿರ್ಬಂಧಿಸಿದ್ದಾರೆ. ಇದೊಂದು ಕೀಳು ಮಟ್ಟದ ರಾಜಕೀಯವಾಗಿದೆ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಜೈರಾಂ ರಮೇಶ್‌ x (ಹಿಂದಿನ ಟ್ವೀಟರ್)ನಲ್ಲಿ ಪೋಸ್ಟ್‌ ಮಾಡಿದ್ದಾರೆ.

Advertisement

ಡಾ.ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಚಂದ್ರಯಾನ-1 ಯಶಸ್ವಿ ಉಡಾವಣೆ ಬಳಿಕ 2008ರ ಅಕ್ಟೋಬರ್‌ 22ರಂದು ಅಹಮ್ಮದಾಬಾದ್‌ ನ ಬಾಹ್ಯಾಕಾಶ ಕೇಂದ್ರಕ್ಕೆ ಮುಖ್ಯಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿರುವುದನ್ನು ಪ್ರಧಾನಿಯವರು ಮರೆತಿರಬಹುದೇ ಎಂದು ಜೈರಾಂ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಆರೋಪಕ್ಕೆ ಪ್ರಧಾನಿ ಮೋದಿ ಹೇಳಿದ್ದೇನು?

ಶನಿವಾರ ಮುಂಜಾನೆ ಬೆಂಗಳೂರಿನ ಎಚ್‌ ಎಎಲ್‌ ವಿಮಾನ ನಿಲ್ದಾಣದ ಹೊರಗೆ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಶಿಷ್ಟಾಚಾರದಂತೆ ಪ್ರಧಾನಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಲು ಬಂದಿಲ್ಲವೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿಗೆ ಮುಂಜಾನೆಯೇ ಆಗಮಿಸುತ್ತಿದ್ದುದರಿಂದ ಮುಖ್ಯಮಂತ್ರಿ, ಸಚಿವರಿಗೆ ತೊಂದರೆ ಕೊಡೋದು ಬೇಡ ಅಂತ ಹೇಳಿದ್ದೆ.

ನಾನು ಬೆಂಗಳೂರಿಗೆ ಯಾವ ಸಮಯದಲ್ಲಿ ತಲುಪುತ್ತೇನೆ ಎಂದು ಗೊತ್ತಿರಲಿಲ್ಲವಾಗಿತ್ತು. ಹಾಗಾಗಿ ನಾನು ಮುಖ್ಯಮಂತ್ರಿ (ಸಿದ್ದರಾಮಯ್ಯ), ಡಿಸಿಎಂ (ಡಿಕೆಶಿ) ಮತ್ತು ಗವರ್ನರ್‌ (ಗೆಹ್ಲೋಟ್)‌ ಅವರಲ್ಲಿ ಮುಂಜಾನೆ ಎದ್ದು ಬಂದು ನನ್ನ ಸ್ವಾಗತಿಸುವ ತೊಂದರೆ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದೇನೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ಕೂಡಲೇ ನಾನು ಹೊರಡಬೇಕಾಗಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಮತ್ತು ಗವರ್ನರ್‌ ಶಿಷ್ಟಾಚಾರದಂತೆ ವಿಮಾನ ನಿಲ್ದಾಣದಲ್ಲಿ ನನ್ನ ಸ್ವಾಗತಿಸಲು ಬರುವುದು ಬೇಡ ಎಂದು ತಿಳಿಸಿರುವುದಾಗಿ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next