ನವದೆಹಲಿ: ಭಾರತದ ಅವಿಚ್ಛಿನ್ನ ನೆಲದ ಮೇಲೆ ಕೃತ್ರಿಮತೆಯಿಂದ ಕಾಲಿಟ್ಟ ಪಾಕಿಸ್ತಾನವನ್ನು ಅಟ್ಟಾಡಿಸಿ ಓಡಿಸಿದ ಭಾರತದ ವಿಜಯದುಂಧುಬಿ ಹಾರಿಸಿ ಇಂದಿಗೆ 20 ವರ್ಷ. ಈ ಹಿನ್ನೆಲೆಯಲ್ಲಿ 1999ರಲ್ಲಿ ಕಾರ್ಗಿಲ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿನ ಕೆಲವು ಅಪರೂಪದ ಫೋಟೋಗಳನ್ನು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.
ಕಾರ್ಗಿಲ್ ವಿಜಯ್ ದಿವಸ್ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ, 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ನನಗೂ ಕಾರ್ಗಿಲ್ ಗೆ ತೆರಳುವ ಅವಕಾಶ ಸಿಕ್ಕಿದ್ದು, ಅಂದು ನಮ್ಮ ಹೆಮ್ಮೆಯ ಸೈನಿಕರು ತೋರಿದ ಒಗ್ಗಟ್ಟು ಹೆಮ್ಮೆಯ ವಿಚಾರವಾಗಿದೆ.
ಈ ಸಮಯದಲ್ಲಿ ನಾನು ನಮ್ಮ ಪಕ್ಷದ ಪರವಾಗಿ ಜಮ್ಮು-ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸಿದ್ದೆ. ಅಲ್ಲದೇ ಕಾರ್ಗಿಲ್ ಗೆ ಭೇಟಿ ನೀಡಿ ಸೈನಿಕರ ಜೊತೆ ನಡೆಸಿದ ಮಾತುಕತೆ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ಸೇನೆಯನ್ನು ಬಗ್ಗುಬಡಿದ ಆಪರೇಶನ್ ವಿಜಯದ ಯಶಸ್ವಿ ಕಾರ್ಯಾಚರಣೆಯ 20ನೇ ವರ್ಷಚಾರಣೆಯ ಸಂಭ್ರಮದಲ್ಲಿದ್ದೇವೆ. ಈ ವೇಳೆ ಪ್ರಧಾನಿ ಮೋದಿ ಅವರು ಕೆಲವು ಅಪರೂಪದ ಫೋಟೋವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.