ಉಡುಪಿ: ಎಂಜಿಎಂ ಕಾಲೇಜಿನಲ್ಲಿ ಟಿ. ಮೋಹನದಾಸ್ ಪೈ ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ಉದ್ಘಾಟನೆ ಮತ್ತು ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷ ಟಿ. ಸತೀಶ್ ಯು. ಪೈ ಅವರಿಗೆ ಸಮ್ಮಾನ ಸಮಾರಂಭ ಜ. 13ರಂದು ಬೆಳಗ್ಗೆ 11ಕ್ಕೆ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಲಿದೆ.
ಇದನ್ನೂ ಓದಿ:ಜ. 15, 16: ನಿತ್ಯಾನಂದ ಮಂದಿರ ಮಠ ಜೀರ್ಣೋದ್ಧಾರ, ನೂತನ ಬಿಂಬ ಪ್ರತಿಷ್ಠೆ
ಟಿ. ಸತೀಶ್ ಯು.ಪೈ ಅವರು ಕೌಶಲ ಅಭಿವೃದ್ಧಿ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಅಕಾಡೆಮಿ ಆಫ್ ಜನರಲ್ ಎಜುಕೇಶನ್ ರಿಜಿಸ್ಟ್ರಾರ್ ಡಾ| ರಂಜನ್ ಆರ್. ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮೂಡುಬಿದಿರೆ ಆಳ್ವಾಸ್ ಫೌಂಡೇಶನ್ ಚೇರ್ಮನ್ ಡಾ| ಮೋಹನ ಆಳ್ವ ಅಭಿನಂದನೆ ಭಾಷಣ ಮಾಡುವರು. ಆಕಾಡೆಮಿ ಜನರಲ್ ಎಜುಕೇಶನ್ ಅಧ್ಯಕ್ಷ ಡಾ| ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸುವರು. ಎಂಜಿಎಂ ಕಾಲೇಜು ಟ್ರಸ್ಟ್ ಸದಸ್ಯರಾದ ಟಿ. ಅಶೋಕ್ ಪೈ, ವಸಂತಿ ಆರ್ ಪೈ, ಅಕಾಡೆಮಿ ಕಾರ್ಯದರ್ಶಿ ಬಿ.ಪಿ. ವರದರಾಯ ಪೈ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.