ಕೋಲ್ಕತ್ತಾ: ಈ ವರ್ಷದ ಐಪಿಎಲ್ ನಲ್ಲಿ ಮಿಂಚುತ್ತಿರುವ ರಿಂಕು ಸಿಂಗ್ ಅವರು ಶನಿವಾರದ ಪಂದ್ಯದಲ್ಲೂ ಅದ್ಭುತವಾಗಿ ಆಡಿದ್ದರು. ಲಕ್ನೋ ಸೂಪರ್ ಜೈಂಟ್ಸ್ ಗೆ ಸೋಲಿನ ಭೀತಿ ಹುಟ್ಟಿಸಿದ್ದ ಕೆಕೆಆರ್ ಆಟಗಾರ ರಿಂಕು ಗಮನಾರ್ಹ ಬ್ಯಾಟಿಂಗ್ ಮೂಲಕ ಸೀಸನ್ ಅಂತ್ಯಗೊಳಿಸಿದರು.
ಪಂದ್ಯದ ಅಂತ್ಯದ ನಂತರ ರಿಂಕು ತಮ್ಮ ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ಮಹತ್ವಾಕಾಂಕ್ಷೆಗಳ ಬಗ್ಗೆ ಮಾತನಾಡಿದರು. ಆದರೆ ಸದ್ಯಕ್ಕೆ ನಾನು ಪ್ರಾಕ್ಟೀಸ್ ಮಾಡಬೇಕಿದೆ. ಆಯ್ಕೆಯ ಬಗ್ಗೆ ಯೋಚಿಸುತ್ತಿಲ್ಲ, ಅದರ ಮೇಲೆ ನನಗೆ ನಿಯಂತ್ರಣವಿಲ್ಲ ಎಂದಿದ್ದಾರೆ.
“ಇಂತಹ ಋತುವನ್ನು ಹೊಂದುವುದು ಒಳ್ಳೆಯದು. ನಾನು ಭಾರತೀಯ ತಂಡದ ಆಯ್ಕೆಯ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಈಗ ನಾನು ಮನೆಗೆ ಹೋದಾಗ, ನಾನು ನನ್ನ ನಿತ್ಯದ ಅಭ್ಯಾಸ, ಜಿಮ್‌ಗೆ ಹಿಂತಿರುಗುತ್ತೇನೆ. ನಾನು ನನ್ನ ಕೆಲಸವನ್ನು ಮಾಡುತ್ತಲೇ ಇರುತ್ತೇನೆ,” ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ರಿಂಕು ಹೇಳಿದ್ದಾರೆ.
“ನನ್ನ ಕುಟುಂಬವು ತುಂಬಾ ಸಂತೋಷವಾಗಿದೆ. ಜನರು ನಾನು ಆಡಿದ ಕೊನೆಯ ಕೆಲವು ಹೊಡೆತಗಳಿಂದ ಜನರು ನನ್ನ ಬಗ್ಗೆ ತಿಳಿದುಕೊಳ್ಳಲು ಪ್ರಾರಂಭಿಸಿದರು. ಆದರೆ ಗುಜರಾತ್ ವಿರುದ್ಧದ ಪಂದ್ಯದಲ್ಲಿ ನಾನು ಆ ಐದು ಸಿಕ್ಸರ್‌ಗಳನ್ನು ಹೊಡೆದಾಗಿನಿಂದ ನಾನು ಬಹಳಷ್ಟು ಅಭಿಮನಿಗಳನ್ನು ಗಳಿಸಲು ಪ್ರಾರಂಭಿಸಿದೆ. ಹೆಚ್ಚು ಗೌರವ ಸಿಗುತ್ತಿದೆ, ಇನ್ನೂ ಅನೇಕರು ನನ್ನನ್ನು ಗುರುತಿಸಲು ಪ್ರಾರಂಭಿಸಿದ್ದಾರೆ” ಎಂದು ರಿಂಕು ಹೇಳಿದರು.