ಜಾರ್ಖಂಡ್: ಖಾಸಗಿ ಲಘು ವಿಮಾನವೊಂದು ಮನೆಯೊಂದರ ಮೇಲೆ ಬಿದ್ದ ಘಟನೆ ಜಾರ್ಖಂಡ್ ನ ಧನ್ಬಾದ್ ನಲ್ಲಿ ನಡೆದಿದ್ದು, ಈ ಆಕಸ್ಮಿಕ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೆಲಿಕಾಪ್ಟರ್ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ.
ಇದನ್ನೂ ಓದಿ:‘ಪ್ರಣಯಂ’ ಹಾಡು ಬಂತು; ಸೋನು ನಿಗಂ ಕಂಠಸಿರಿಯಲ್ಲಿ ‘ಮಳೆಗಾಲ ಬಂತು ಸನಿಹ’
ಈ ಘಟನೆ ಗುರುವಾರ ಬಿರ್ಸಾ ಮುಂಡಾ ಪಾರ್ಕ್ ಸಮೀಪ ಸಂಭವಿಸಿತ್ತು. ಲಘು ವಿಮಾನದಲ್ಲಿದ್ದ ಕ್ಯಾಮರಾದಲ್ಲಿ ಘಟನೆ ಸೆರೆಯಾಗಿದೆ. ಹೆಲಿಕಾಪ್ಟರ್ ನಲ್ಲಿದ್ದ ಪೈಲಟ್ ಮತ್ತು ಬಾಲಕ ಸೇರಿ ಇಬ್ಬರು ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿ ಪಿಟಿಐ ನ್ಯೂಸ ಏಜೆನ್ಸಿಗೆ ತಿಳಿಸಿದ್ದಾರೆ.
ವರದಿಯ ಪ್ರಕಾರ, ಲಘು ವಿಮಾನ ನಿಯಂತ್ರಣ ತಪ್ಪಿ ನಿಲೇಶ್ ಕುಮಾರ್ ಎಂಬವರ ಮನೆ ಮೇಲೆ ಬಿದ್ದಿದ್ದು, ಈ ಸಂದರ್ಭದಲ್ಲಿ ಅವರ ಇಬ್ಬರು ಮಕ್ಕಳು ಆಟವಾಡುತ್ತಿದ್ದು ಪವಾಡ ಸದೃಶವೆಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
14 ವರ್ಷದ ಕುಶ್ ಸಿಂಗ್ ಎಂಬ ಬಾಲಕ ಪಾಟ್ನಾದಿಂದ ಧನ್ಬಾದ್ ನಲ್ಲಿರುವ ತನ್ನ ಚಿಕ್ಕಪ್ಪ ಪವನ್ ಸಿಂಗ್ ಮನೆಗೆ ಬಂದಿದ್ದ. ಈ ಸಂದರ್ಭದಲ್ಲಿ ಖಾಸಗಿ ಏಜೆನ್ಸಿಯನ್ನು ಸಂಪರ್ಕಿಸಿ, ಲಘು ವಿಮಾನದಲ್ಲಿ ಜಾಲಿ ರೈಡ್ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪೈಲಟ್ ಮತ್ತು ಕುಶ್ ಸಿಂಗ್ ನನ್ನು ಜಾರ್ಖಂಡ್ ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.