Advertisement

ಇಂದು ಪ್ರಧಾನಿ ಮೋದಿ ನೇಪಾಲಕ್ಕೆ; ಬುದ್ಧನ ಜನ್ಮಸ್ಥಳದಲ್ಲೇ ಬುದ್ಧ ಪೂರ್ಣಿಮೆ ಆಚರಣೆ

02:38 AM May 16, 2022 | Team Udayavani |

ಬುದ್ಧಪೂರ್ಣಿಮೆಯ ದಿನವಾದ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಲಕ್ಕೆ ಭೇಟಿ ನೀಡಲಿದ್ದಾರೆ. ಬುದ್ಧನ ಜನ್ಮಸ್ಥಳವಾದ ಲುಂಬಿನಿಯಲ್ಲಿ ಬುದ್ಧ ಪೂರ್ಣಿಮೆ ಆಚರಿಸಿ, ನೇಪಾಲ ಪ್ರಧಾನಿ ಶೇರ್‌ ಬಹಾದ್ದೂರ್‌ ದೇಬಾ ಜತೆಗೆ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ. 2014ರ ಬಳಿಕ ಮೋದಿ ಅವರ 5ನೇ ನೇಪಾಲ ಭೇಟಿ ಇದಾಗಿದೆ.

Advertisement

ಕಾರ್ಯಸೂಚಿಗಳೇನು?
– ನೇಪಾಲ ಪ್ರಧಾನಿ ಶೇರ್‌ ಬಹಾದ್ದೂರ್‌ ದೇಬಾ ಜತೆ ದ್ವಿಪಕ್ಷೀಯ ಮಾತುಕತೆ.
– ಮಾಯಾದೇವಿ ದೇಗುಲದಲ್ಲಿ ಪೂಜೆ.
– ಲುಂಬಿನಿಯಲ್ಲಿ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಗೆ ಸಂಬಂಧಿಸಿದ ಭಾರತೀಯ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಶಿಲಾನ್ಯಾಸ.
– ವಿವಿಧ ಒಪ್ಪಂದಗಳಿಗೆ ಸಹಿ.
– ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಭಾಗಿ. ನೇಪಾಲ ಮತ್ತು ಭಾರತೀಯ ನಾಗರಿಕರನ್ನು ಉದ್ದೇಶಿಸಿ ಭಾಷಣ.

ಭೇಟಿಯ ಉದ್ದೇಶ
– ಭಾರತ-ನೇಪಾಲ ಬಾಂಧವ್ಯ ವೃದ್ಧಿಯ ಮೂಲಕ ಚೀನದ ಪ್ರಾಬಲ್ಯ ತಡೆಗೆ ಯತ್ನಿಸುವುದು.
-ಉಭಯ ದೇಶಗಳ ನಡುವೆ ವ್ಯಾಪಾರ ಮತ್ತು ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವುದು.
– ಮೂಲ ಸೌಕರ್ಯಗಳನ್ನು ಹೆಚ್ಚಿಸುವ ಮೂಲಕ ಗಡಿ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮಾಡುವುದು.
– ಬುದ್ಧಿಸಂ ನೊಂದಿಗೆ ಭಾರತದ ಜಾಗತಿಕ ಸಂಬಂಧವನ್ನು ಪುನಃಶ್ಚೇತನ ಗೊಳಿಸುವುದು.

ಚೀನ ಪ್ರಾಬಲ್ಯ ತಗ್ಗಿಸುವ ಯತ್ನ
ನೇಪಾಲದಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಚೀನವು “ಸಾಫ್ಟ್ ಬುದ್ಧಿಸಂ’ ಧೋರಣೆ ಅನುಸರಿ ಸುತ್ತಿದೆ. ಈಗಾಗಲೇ ಆ ದೇಶದಲ್ಲಿ ಚೀನ ಭಾರೀ ಪ್ರಮಾಣದ ಹೂಡಿಕೆಯನ್ನೂ ಮಾಡಿದೆ. ಹೀಗಾಗಿ ಮಾಜಿ ಪ್ರಧಾನಿ ಓಲಿ ಅವಧಿಯಲ್ಲಿ ಹದಗೆಟ್ಟಿದ್ದ ಭಾರತ-ನೇಪಾಲ ಸಂಬಂಧವನ್ನು ಮತ್ತೆ ಗಟ್ಟಿಗೊಳಿಸಿ ಚೀನದ ಪ್ರಾಬಲ್ಯವನ್ನು ತಗ್ಗಿಸುವುದು ಭಾರತದ ಉದ್ದೇಶವಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next