ಹೊಸದಿಲ್ಲಿ: “ಒಮಿಕ್ರಾನ್ ರೂಪಾಂತರಿ ಸೈಲೆಂಟ್ ಕಿಲ್ಲರ್. ನಾನಿನ್ನೂ ಅದರಿಂದ ಚೇತರಿಸಿಕೊಂಡಿಲ್ಲ’ ಹೀಗೆ ಹೇಳಿದ್ದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಎನ್.ವಿ.ರಮಣ.
ಸೋಂಕಿನ ತೀವ್ರತೆ ತಗ್ಗಿರುವ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಭೌತಿಕ ವಿಚಾರಣೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಹಿರಿಯ ನ್ಯಾಯವಾದಿ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷ ವಿಕಾಸ್ ಸಿಂಗ್ ಮನವಿ ಮಾಡಿದರು.
ಅದಕ್ಕೆ ಉತ್ತರಿಸಿದ ಮುಖ್ಯ ನ್ಯಾಯ ಮೂರ್ತಿ ಎನ್.ವಿ.ರಮಣ “ಕೊರೊನಾದ ಮೊದಲ ಅಲೆಯಲ್ಲಿ ಸೋಂಕು ತಗಲಿ ನಾಲ್ಕೇ ದಿನದಲ್ಲಿ ಚೇತರಿಸಿ ಕೊಂಡಿದ್ದೆ.
ಇದನ್ನೂ ಓದಿ:ಲೋಕೋಪಯೋಗಿ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಸಿ.ಸಿ. ಪಾಟೀಲ್
ಆದರೆ ಈ ಬಾರಿ ಒಮಿಕ್ರಾನ್ ತಗಲಿ 25 ದಿನಗಳು ಕಳೆದರೂ ಚೇತರಿಸಿಕೊಂಡಿಲ್ಲ’ ಎಂದರು. ಅದಕ್ಕೆ ಒಮಿಕ್ರಾನ್ ತೀವ್ರತೆ ಕಮ್ಮಿ. ಜನರು ಗುಣಮುಖರಾಗುತ್ತಿದ್ದಾರೆ’ ಎಂದರು ಸಿಂಗ್. ಅದನ್ನು ಕೇಳಿದ ಮುಖ್ಯ ನ್ಯಾಯಮೂರ್ತಿ “ನೋಡೋಣ’ ಎಂದಷ್ಟೇ ನುಡಿದರು.