Advertisement

ಒಮಿಕ್ರಾನ್ ಆತಂಕ: ಅಂತಾರಾಷ್ಟ್ರೀಯ ವಿಮಾನ ಸಂಚಾರ ಪುನರಾರಂಭ ಮುಂದೂಡಿಕೆ: ಕೇಂದ್ರ

04:10 PM Dec 01, 2021 | Team Udayavani |

ನವದೆಹಲಿ:ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ನ ಹೊಸ ರೂಪಾಂತರಿ ವೈರಸ್  ಒಮಿಕ್ರಾನ್ ಪತ್ತೆಯಾದ ನಂತರ ಜಗತ್ತಿನಾದ್ಯಂತ ಒಮಿಕ್ರಾನ್ ಹರಡುವ ಭೀತಿಯಲ್ಲಿದ್ದು, ಏತನ್ಮಧ್ಯೆ ಭಾರತವೂ ಕೂಡಾ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಯಾನ ಸಂಚಾರದ ಪುನರಾರಂಭವನ್ನು ಮುಂಡೂಡುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಬೆಂಕಿ ಬಿದ್ದರೂ ಭೂರಿ ಭೋಜನ ಬಿಡಲಿಲ್ಲ; ವೈರಲ್ ಆದ ವಿಡಿಯೋ

ಈ ಮೊದಲು ಡಿಸೆಂಬರ್ 15ರಿಂದ ಅಂತಾಷ್ಟ್ರೀಯ ವಾಣಿಜ್ಯ ವಿಮಾನ ಸಂಚಾರ ಪುನರಾರಂಭಿಸಲಾಗುವುದು ಎಂದು ನಿಗದಿಯಾಗಿತ್ತು. ಅಂತಾರಾಷ್ಟ್ರೀಯ ವಿಮಾನ ಸಂಚಾರದ ಪುನರಾರಂಭವನ್ನು ಮುಂದೂಡಲಾಗಿದೆ ಎಂದು ಡಿಜಿಸಿಎ(ಡೈರೆಕ್ಟೋರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ತಿಳಿಸಿದೆ.

ಡಿಜಿಸಿಎ ಬಿಡುಗಡೆಗೊಳಿಸಿರುವ ಪ್ರಕಟಣೆ ಪ್ರಕಾರ, ಕೋವಿಡ್ ನ ರೂಪಾಂತರಿ ಒಮಿಕ್ರಾನ್ ಜಾಗತಿಕವಾಗಿ ಭಯ ಹುಟ್ಟಿಸಿದ್ದು, ಸ್ಥಿತಿಗತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರ ಪುನರಾರಂಭಿಸುವ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಿವರಿಸಿದೆ.

ಒಮಿಕ್ರಾನ್ ಸೋಂಕು ಜಗತ್ತಿನ 13 ದೇಶಗಳಲ್ಲಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಾಗತಿಕವಾಗಿ ವಿಮಾನ ಸಂಚಾರದ ಮೇಲೆ ನಿರ್ಬಂಧ ಜಾರಿಯಾಗತೊಡಗಿದೆ. ಭಾರತದಲ್ಲಿಯೂ ಒಮಿಕ್ರಾನ್ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next