ಬೆಂಗಳೂರು: ಹದಿನೈದು ದಿನಗಳಿಂದ ಕೊರೊನಾ ಪ್ರಕರಣಗಳ ಹಂತ ಹಂತವಾಗಿ ಏರಿಕೆ ಕಾಣುತ್ತಿದ್ದು, ಜೂ. 2ರಿಂದ 9ವರೆಗೆ ಜೀನೋಮ್ ಸಿಕ್ವೇನ್ಸಿಂಗ್‌ಗೆ ಕಳುಹಿಸಲಾದ 44 ಮಾದರಿಗಳಲ್ಲಿ ಒಮಿಕ್ರಾನ್ ಬಿಎ3, ಬಿಎ4, ಬಿಎ5 ಉಪತಳಿ ವರದಿಯಾಗಿದೆ ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಕಳೆದೊಂದು ತಿಂಗಳಿನಲ್ಲಿ ಜೀನೋಮ್ ಸಿಕ್ವೇನ್ಸಿಂಗ್ ಕಳುಹಿಸಿದ ಮಾದರಿಯಲ್ಲಿ ಶೇ. 99.20ರಷ್ಟು ಪ್ರಕರಣಗಳಲ್ಲಿ ಒಮಿಕ್ರಾನ್ ದೃಢವಾಗಿದೆ.
2022ರ ಜೂ. 22ರ ವರೆಗೆ 2,215 ಕೊರೊನಾ ಪಾಸಿಟಿವ್ ಮಾದರಿಗಳನ್ನು ಜಿನೋಮ್ ಪರೀಕ್ಷೆಗೆ ಒಳಪಡಿಸಿದ್ದು, ಈ ವೇಳೆ ಶೇ. 99.20 ಮಾದರಿಗಳಲ್ಲಿ ಒಮಿಕ್ರಾನ್ ಹಾಗೂ ಉಪತಳಿಗಳು ವರದಿಯಾಗಿದೆ.
ಒಮಿಕ್ರಾನ್ ಬಿಎ2 ಉಪತಳಿಗೆ ಸಂಬಂಧಿಸಿದಂತೆ ಶೇ. 89.40ರಷ್ಟು ಪ್ರಕರಣ ದಾಖಲಾಗಿದೆ. ಡೆಲ್ಟಾ ಹಾಗೂ ಆಲ್ಫ ರೂಪಾಂತರಿ ಪ್ರಕರಣಗಳು ಇಳಿಕೆಯಾಗಿದೆ ಎಂದು ಹೇಳಿದ್ದಾರೆ.