Advertisement

100 ರೂ. ಹಣ ಡ್ರಾ ಮಾಡಿದ ಕಾರ್ಮಿಕನಿಗೆ ಬಂದಿದ್ದು 2,700 ಕೋಟಿ ರೂ. ಎಸ್ ಎಮ್ ಎಸ್ !

04:24 PM Aug 05, 2022 | Team Udayavani |

ನವದೆಹಲಿ: ಕೆಲವು ಬಾರಿ ನಮಗೆ ಅರಿವಿಲ್ಲದೆ ಕೆಲವೊಂದು ಅಚ್ಚರಿಗಳು ಸಂಭವಿಸುತ್ತದೆ. ಅದಕ್ಕೊಂದು ಹೊಸ ಸೇರ್ಪಡೆ ಎಂಬಂತೆ ಕಾರ್ಮಿಕನೊಬ್ಬ ಬ್ಯಾಂಕ್ ಖಾತೆಯಿಂದ ನೂರು ರೂಪಾಯಿ ಹಣ ಡ್ರಾ ಮಾಡಿದ್ದ..ಆದರೆ ಆತನ ಮೊಬೈಲ್ ಗೆ ಬಂದ ಎಸ್ ಎಂಎಸ್ ಕಂಡು ಆಘಾತಕ್ಕೊಳಗಾಗಿಬಿಟ್ಟಿದ್ದ…ಯಾಕೆಂದರೆ ಆತನ ಬ್ಯಾಂಕ್ ಖಾತೆಯಲ್ಲಿ 2,700 ಕೋಟಿ ರೂಪಾಯಿ ಬ್ಯಾಲೆನ್ಸ್ ಇದೆ ಎಂಬ ಎಸ್ ಎಂಎಸ್ ಬಂದಿರುವುದು!

Advertisement

ಇದನ್ನೂ ಓದಿ:ಕೌಟುಂಬಿಕ ಕಲಹ: ಪತ್ನಿ-ಪುತ್ರನ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನ

ಉತ್ತರಪ್ರದೇಶದ ಛಿಬ್ರಾಮೌ ಕೋವಾಲಿ ಪೊಲೀಸ್ ಠಾಣಾ ಪ್ರದೇಶದ ಕಮಲಾಪುರ್ ಗ್ರಾಮದ ನಿವಾಸಿ ಬಿಹಾರಿ ಲಾಲ್ ರಾಜಸ್ಥಾನದಲ್ಲಿ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುವ ಕಾರ್ಮಿಕ. ಮಳೆಗಾಲದಿಂದಾಗಿ ಫ್ಯಾಕ್ಟರಿ ಕೆಲಸ ಬಂದ್ ಆಗಿದ್ದು, ಲಾಲ್ ರಾಜಸ್ಥಾನದಿಂದ ಉತ್ತರಪ್ರದೇಶಕ್ಕೆ ವಾಪಸ್ ಆಗಲು ಸಿದ್ಧತೆ ನಡೆಸಿದ್ದ.

ಈ ಸಂದರ್ಭದಲ್ಲಿ ತನ್ನ ಜನ್ ಧನ್ ಖಾತೆಯಿಂದ 100 ರೂಪಾಯಿ ವಿತ್ ಡ್ರಾ ಮಾಡಿದ್ದ. ಹಣ ಪಡೆದ ನಂತರ, ಬ್ಯಾಲೆನ್ಸ್ ಹಣ ಎಷ್ಟಿದೆ ಎಂಬ ಎಸ್ ಎಂಎಸ್ ಬಂತಿತ್ತು. ಆದರೆ ತನ್ನ ಖಾತೆಯಲ್ಲಿ 2,700 ಕೋಟಿ ಇದೆ ಎಂಬ ಎಸ್ ಎಂಎಸ್ ಕಂಡು ಲಾಲ್ ನಂಬಲು ಕೂಡಾ ಸಿದ್ಧನಿಲ್ಲ. ಕೂಡಲೇ ಬ್ಯಾಂಕ್ ಮ್ಯಾನೇಜರ್ ಬಳಿ ತೆರೆಳಿದ್ದ, ಅವರು ಲಾಲ್ ಖಾತೆಯಲ್ಲಿ 27,07,85,13,985 ಕೋಟಿ ರೂಪಾಯಿ ಇದ್ದಿರುವುದಾಗಿ ತಿಳಿಸಿದ್ದರು.

ನಾನು ಮೂರು ಬಾರಿ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಿದ್ದು, ಪ್ರತಿ ಬಾರಿಯೂ 2,700 ಕಕೋಟಿ  ರೂಪಾಯಿ ಅಂತ ನಮೂದಾಗಿತ್ತು ಎಂದು ಬ್ಯಾಂಕ್ ಮ್ಯಾನೇಜರ್ ಗೆ ಮಾಹಿತಿ ನೀಡಿದ್ದ. ಆದರೆ ಈ ಆಘಾತ, ನಂಬಿಕೆ ಹೆಚ್ಚು ಸಮಯ ಉಳಿದಿರಲಿಲ್ಲವಾಗಿತ್ತು, ಯಾಕೆಂದರೆ ಲಾಲ್ ಸಮೀಪದ ಮತ್ತೊಂದು ಬ್ರ್ಯಾಂಚ್ ಗೆ ಹೋಗಿ ತನ್ನ ಖಾತೆಯ ಬ್ಯಾಲೆನ್ಸ್ ಪರಿಶಿಲಿಸಿದಾಗ ಕೇವಲ 126! ರೂಪಾಯಿ ಇದ್ದಿರುವುದಾಗಿ ನಮೂದಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next