Advertisement

ಯುವತಿಯ ಕಿವಿಯೊಳಗೆ ಹಾವು ? ನಂಬಲು ಅಸಾಧ್ಯ.. ಆದರೂ ಸತ್ಯ !

09:02 AM Sep 08, 2022 | Team Udayavani |

ಕೆಲವೊಂದು ಸಂಗತಿಗಳು ನಮ್ಮ ಮನಸ್ಸಿನ ಆಲೋಚನೆಗಿಂತಲೂ ಭಿನ್ನವಾಗಿರುತ್ತವೆ, ಇನ್ನು ಕೆಲವು ನಂಬಲೂ ಅಸಾಧ್ಯವಾಗಿರುತ್ತವೆ ಅಂತದ್ದೇ ಒಂದು ಸನ್ನಿವೇಶವೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ತಲ್ಲಣ ಸೃಷ್ಟಿಸಿದೆ.

Advertisement

ವ್ಯಕ್ತಿಯ ಕಿವಿಗೆ ಒಂದು ಸಣ್ಣ ಇರುವೆ ಹೋದರೂ ಕಿರಿಕಿರಿಯಾಗುತ್ತದೆ ಅಂತದರಲ್ಲಿ ಹಾವು ಹೋದರೆ?

ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಕಿವಿಯೊಳಗೆ ಹಾವೊಂದು ಹೊಕ್ಕಿರುವುದು ಆ ಹಾವನ್ನು ಹೊರತೆಗೆಯಲು ವೈದ್ಯರು ಹರಸಾಹಸ ಪಡುತ್ತಿರುವುದು ಕಾಣಬಹುದು ಇದನ್ನು ನೋಡಿದರೆ ನಿಜಕ್ಕೂ ಇದು ಹೌದೋ ಅಥವಾ ಸುಳ್ಳೋ ಎಂಬ ಭಾವನೆ ಬರುತ್ತದೆ ಆದರೆ ವಿಡಿಯೋ ನೋಡಿದವಾಗ ಇದು ಹೌದು ಎನ್ನುವಂತಿದೆ.

ಯುವತಿಯ ಕಿವಿಯೊಳಗೆ ಹಾವು ಯಾವಾಗ ಹೋಗಿದೆಯೋ ಗೊತ್ತಿಲ್ಲ ಆದರೆ ಕಿವಿಯೊಳಗೆ ಅದೇನೋ ಹೊಕ್ಕಿರುವುದು ಆಕೆಗೆ ಅನುಭವವಾಗಿದೆ ಇದರಿಂದ ಆಕೆಗೆ ಕಿರಿಕಿರಿಯಾಗಿದ್ದು ವೈದ್ಯರ ಬಳಿಗೆ ಹೋಗಿದ್ದಾಳೆ ಈ ವೇಳೆ ವೈದ್ಯರು ಕಿವಿಗೆ ಬೆಳಕು ಹಾಕಿ ನೋಡಿದಾಗ ವೈದ್ಯರೇ ದಂಗಾಗಿದ್ದಾರೆ, ಕಾರಣ ಕಿವಿಯೊಳಗೆ ಸಣ್ಣ ಹಾವು ಅವಿತಿರುವುದು ಗೊತ್ತಾಗಿದೆ, ಬಳಿಕ ವೈದ್ಯರು ಹಾವನ್ನು ಕಿವಿಯಿಂದ ಹೊರತೆಗೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ ಕೆಲವು ಗಂಟೆಗಳ ಸತತ ಪರಿಶ್ರಮದಿಂದ ಹಾವನ್ನು ಹೊರತೆಗೆದಿದ್ದಾರೆ ಅಲ್ಲದೆ ವೈದ್ಯರು ಹಾವನ್ನು ಹೊರತೆಗೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ, ಅಲ್ಲದೆ ಈ ರೀತಿಯೂ ನಡೆಯುತ್ತದೆಯೇ ಎಂದು ಜನ ತಮ್ಮನ್ನು ತಾವೇ ಪ್ರಶ್ನೆ ಮಾಡುವಂತಾಗಿದೆ.

ಅಂದಹಾಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಲಾದ ವಿಡಿಯೋ ಎಲ್ಲಿ ನಡೆದದ್ದು ಎಂಬುದು ಮಾತ್ರ ಸ್ಪಷ್ಟವಾಗಿಲ್ಲ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next