Advertisement

ಭಾರತದ ಈ ನಗರದಲ್ಲಿ ‘100 ರೂ. ದಾಟಿದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ .?’

01:25 PM Jan 27, 2021 | Team Udayavani |

ನವ ದೆಹಲಿ : ತೈಲ ಮಾರುಕಟ್ಟೆ ದರಗಳನ್ನು ಮತ್ತೆ ಏರಿಕೆ ಮಾಡಿದ ಕಾರಣದಿಂದಾಗಿ  ಬುಧವಾರ(ಜ. 27) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ. ಆಶ್ಚರ್ಯಕರವಾದ ವಿಷಯವೇನೆಂದರೇ, ಭಾರತದ ಒಂದು ನಗರದಲ್ಲಿ ಪ್ರತಿ ಲೀಟರ್‌ ಗೆ 100 ರೂ ಪೆಟ್ರೋಲ್ ದರ ಏರಿಕೆ ಮಾಡಿದೆ.

Advertisement

ಓದಿ : ‘ಪಾಕಿಸ್ತಾನ್ ಜಿಂದಾಬಾದ್’ ಎಂದವರು ರೈತ ಹೋರಾಟದಲ್ಲಿ ಭಾಗಿಯಾಗಿದ್ದಾರೆ: ಶೋಭಾ ಕರಂದ್ಲಾಜೆ

ಹೌದು, ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಬುಧವಾರ(ಜ.27) ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 101 ರೂಗೆ ಹೆಚ್ಚಳವಾಗಿದೆ ಎಂದು ವರದಿಯಾಗಿದೆ.

ದೇಶದ ನಾಲ್ಕು ಮಹಾ ನಗರಗಳಲ್ಲಿನ ಇಂದಿನ(ಜ.27) ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ವ್ಯತ್ಯಾಸವನ್ನು ಗಮನಿಸುವುದಾದರೇ, :

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ ನ ಬೆಲೆ  86.30 ರೂ ಇದ್ದರೇ, ಡೀಸೆಲ್ ಪ್ರತಿ ಲೀಟರ್ ನ ಬೆಲೆ 76.48 ರೂಗೆ ಏರಿಕೆಯಾಗಿದೆ.

Advertisement

ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 92.86 ರೂ ಗೆ ಮಾರಾಟವಾಗುತ್ತಿದ್ದರೇ, ಡೀಸೆಲ್ ಪ್ರತಿ ಲೀಟರ್ ಗೆ 83.30 ರೂ ಗೆ ಮಾರಾಟವಾಗುತ್ತಿದೆ.

ಚೆನ್ನೈನಲ್ಲಿ 88.82ರೂ ಪ್ರತಿ ಲೀಟರ್ ಪೆಟ್ರೋಲ್ ಗೆ ಇದ್ದರೇ, 81.71ರೂ ಡೀಸೆಲ್ ನ ಪ್ರತಿ ಲೀಟರ್ ನ ಬೆಲೆಯಾಗಿದೆ.

ಇನ್ನು, ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 87.69 ರೂ ಆದರೇ, ಡೀಸೆಲ್ ಪ್ರತಿ ಲೀಟರ್ ಬೆಲೆ 80.08ರೂ ಇದೆ.

ಓದಿ : FAU-G ಭಾರತದಲ್ಲಿ ಬಿಡುಗಡೆಯಾಗಿದೆ. ಭಾರತದಲ್ಲಿ PUBGಯ ಭವಿಷ್ಯ..?

 

Advertisement

Udayavani is now on Telegram. Click here to join our channel and stay updated with the latest news.

Next