Advertisement

ಒಲಿಂಪಿಕ್ಸ್‌ ರಿಲೇ ಮೊಟಕು

11:30 PM Mar 13, 2020 | Team Udayavani |

ಏಥೆನ್ಸ್‌ : ಕೊರೊನಾ ಪರಿಣಾಮವಾಗಿ ಒಲಿಂಪಿಕ್ಸ್‌ ಟಾರ್ಚ್‌ ರಿಲೇ ಒಂದೇ ದಿನದಲ್ಲಿ ಮೊಟಕುಗೊಂಡಿದೆ. ಗುರುವಾರವಷ್ಟೇ ಗ್ರೀಸ್‌ನ ಒಲಿಂಪಿಯಾದಲ್ಲಿ ಒಲಿಂಪಿಕ್ಸ್‌ ಜ್ಯೋತಿಯನ್ನು ಬೆಳಗಿಸಿ ರಿಲೇ ಆರಂಭಿಸಲಾಗಿತ್ತು. ಇದೀಗ ಶುಕ್ರವಾರ ಅರ್ಧದಲ್ಲೇ ನಿಂತಿದೆ.

Advertisement

ಕೊರೊನಾ ವೈರಸ್‌ ಎಚ್ಚರಿಕೆ ಇರುವ ಹೊರತಾಗಿಯೂ ಭಾರೀ ಸಂಖ್ಯೆಯಲ್ಲಿ ಇದನ್ನು ವೀಕ್ಷಿಸಲು ಜನ ಸೇರುತ್ತಿದ್ದಾರೆ. ಇದರಿಂದಾಗಿ ಓಟವನ್ನೇ ರದ್ದುಪಡಿಸಲು ಗ್ರೀಸ್‌ ಒಲಿಂಪಿಕ್ಸ್‌ ಸಮಿತಿ ತೀರ್ಮಾನಿಸಿದೆ.

ಗ್ರೀಕ್‌ನಲ್ಲಿ ಉಳಿದಿರುವ ಓಟದ ಭಾಗವನ್ನು ರದ್ದುಪಡಿಸಲಾಗಿದೆ. ಆದರೆ ಮಾ. 19ರಂದು ನಿಗದಿಯಾಗಿರುವಂತೆ ಒಲಿಂಪಿಕ್ಸ್‌ ಜ್ಯೋತಿಯನ್ನು ಟೋಕಿಯೊ ಒಲಿಂಪಿಕ್ಸ್‌ ಆಯೋಜಕರಿಗೆ ಹಸ್ತಾಂತರಿಸಲಾಗುವುದು. ಆದರೆ ಇದಕ್ಕೆ ಪ್ರೇಕ್ಷಕರು ಇರುವುದಿಲ್ಲ ಎಂದು ಒಲಿಂಪಿಕ್ಸ್‌ ಸಮಿತಿ ಹೇಳಿದೆ.

ಒಲಿಂಪಿಕ್ಸ್‌ ಟಾರ್ಚ್‌ ರಿಲೇ ಸಂದರ್ಭದಲ್ಲಿ ಜನ ಸೇರಬಾರದು ಎಂದು ಪದೇ ಪದೇ ವಿನಂತಿಸಿದರೂ ಪ್ರಯೋಜನವಾಗಿಲ್ಲ. ಓಟವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಸಾವಿರಾರು ಜನರು ಸೇರುತ್ತಿದ್ದಾರೆ. ಇದರಿಂದಾಗಿ ಕೊರೊನಾ ವೈರಸ್‌ ಹರಡುವ ಭೀತಿ ಎದುರಾಗಿದ್ದು, ಹೀಗಾಗಿ ಓಟವನ್ನು ಮೊಟಕುಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಗ್ರೀಕ್‌ನಾದ್ಯಂತ ಕಟ್ಟೆಚ್ಚೆರ
ಗ್ರೀಸ್‌ನಲ್ಲಿ 117 ಮಂದಿ ಕೊರೊನಾ ಸೋಂಕಿಗೊಳಗಾಗಿರುವುದು ದೃಢಪಟ್ಟಿದೆ. ಇವರಲ್ಲೊಬ್ಬರು 10 ದಿನ ಚಿಕಿತ್ಸೆ ಪಡೆದರೂ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ. ಹೀಗಾಗಿ ಗ್ರೀಕ್‌ನಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ.

Advertisement

ಸ್ಪಾರ್ಟ ನಗರದಲ್ಲಿ ಹಾಲಿವುಡ್‌ ನಟ ಗೆರಾರ್ಡ್‌ ಬಟ್ಲರ್‌ ಒಲಿಂಪಿಕ್ಸ್‌ ಜ್ಯೋತಿಯನ್ನು ಬೆಳಗಿಸಿದ್ದಾರೆ. ಗ್ರೀಸ್‌ನ ಪ್ರಾಚೀನ ನಗರ ಹಾಗೂ ಒಲಿಂಪಿಕ್ಸ್‌ ಹುಟ್ಟಿದ ಒಲಿಂಪಿಯಾದಲ್ಲಿ ಗುರುವಾರ ಜ್ಯೋತಿಯನ್ನು ಬೆಳಗಿಸುವ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಇರಲಿಲ್ಲ. ಆದರೆ ಜ್ಯೋತಿಯ ಓಟದ ದಾರಿಯಲ್ಲಿ ಸಿಗುವ ನಿಲುಗಡೆಗಳಲ್ಲಿ ಜ್ಯೋತಿಯನ್ನು ವೀಕ್ಷಿಸಲು ಜನ ಸೇರುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next