Advertisement

ಜುಲೈಯಲ್ಲೇ ಒಲಿಂಪಿಕ್ಸ್‌: ಜಪಾನ್‌ ಪ್ರಧಾನಿ ಅಬೆ ವಿಶ್ವಾಸ

10:10 AM Mar 15, 2020 | Sriram |

ಟೋಕಿಯೊ: ಕೊರೊನಾ ವೈರಸ್‌ ಭೀತಿಯ ಹೊರ ತಾಗಿಯೂ ಟೋಕಿಯೊ ಒಲಿಂಪಿಕ್ಸ್‌ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದಾಗಿ ಜಪಾನ್‌ ಪ್ರಧಾನಿ ಶಿಂಜೊ ಅಬೆ ಸ್ಪಷ್ಟಪಡಿಸಿದ್ದಾರೆ.

Advertisement

ಒಲಿಂಪಿಕ್ಸ್‌ ಕ್ರೀಡಾ ಕೂಟವನ್ನು ಒಂದು ವರ್ಷದ ಮಟ್ಟಿಗೆ ಮುಂದೂಡುವುದು ಒಳ್ಳೆಯದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೂಚಿಸಿದ ಬಳಿಕ, ಶನಿವಾರ ಶಿಂಜೊ ಅಬೆ ಈ ಹೇಳಿಕೆ ನೀಡಿದರು.

“ನಾವು ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಕಮಿಟಿ ಸೇರಿದಂತೆ ಎಲ್ಲ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಇರಿಸಿಕೊಂಡಿದ್ದೇವೆ. ಒಲಿಂಪಿಕ್ಸ್‌ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇದನ್ನು ಮುಂದೂಡುವುದಾಗಲೀ, ರದ್ದುಪಡಿ ಸುವುದಾಗಲೀ ಇಲ್ಲ. ಈ ಜಾಗತಿಕ ಕ್ರೀಡಾಕೂಟವನ್ನು ಯಶಸ್ವಿಯಾಗಿ ಸಂಘ ಟಿಸುವುದೇ ನಮ್ಮ ಗುರಿ. ಹಾಗೆಯೇ ಜಪಾನ್‌ನಲ್ಲಿ ಕೊರೊನಾ ತುರ್ತುಸ್ಥಿತಿ ಘೋಷಣೆ ಬಗ್ಗೆ ಸದ್ಯ ಯಾವುದೇ ತೀರ್ಮಾನ ತೆಗೆದುಕೊಳ್ಳಲಾಗಿಲ್ಲ’ ಎಂದು ಶಿಂಜೊ ಅಬೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಪಾನ್‌ನಲ್ಲಿ ಈ ವರೆಗೆ ಸುಮಾರು 700 ಮಂದಿಗೆ ಕೊರೊನಾ ಅಂಟಿಕೊಂಡಿದೆ. ಈಗಾಗಲೇ 21 ಮಂದಿ ಸಾವಿಗೀಡಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next