Advertisement
ಪ್ಯಾರಿಸ್ನಲ್ಲಿ ಕಂಚು ಗೆದ್ದು ತವರಿಗೆ ಆಗಮಿಸಿದ ಹಾಕಿ ತಂಡದ ದ್ವಿತೀಯ ಬ್ಯಾಚ್ನ ಸದಸ್ಯರನ್ನು ಮಂಗಳವಾರ ಸಮ್ಮಾನಿಸಿದ ಸಂದರ್ಭದಲ್ಲಿ ಕ್ರೀಡಾ ಸಚಿವರು ತಮ್ಮ ಯೋಜನೆ ಕುರಿತು ಹೇಳಿದರು. ಸಮ್ಮಾನಿತರಲ್ಲಿ ಗೋಲ್ಕೀಪರ್ ಶ್ರೀಜೇಶ್ ಕೂಡ ಸೇರಿದ್ದರು.
“ಪ್ಯಾರಿಸ್ನಲ್ಲಿ ನಮ್ಮವರ ಸಾಧನೆ ಬಗ್ಗೆ ತೃಪ್ತಿ ಇದೆ. ಟೋಕಿಯೊದಲ್ಲಿ ನಾವು 7 ಪದಕ ಜಯಿಸಿದ್ದೆವು, ಪ್ಯಾರಿಸ್ನಲ್ಲಿ ಲಭಿಸಿದ್ದು ಆರೇ ಪದಕ. ಆದರೆ 4ನೇ ಸ್ಥಾನಕ್ಕೆ ಇಳಿದು 7 ಪದಕಗಳನ್ನು ಕಳೆದುಕೊಳ್ಳಬೇಕಾಯಿತು. ಒಟ್ಟಾರೆಯಾಗಿ ಇದೊಂದು ಉತ್ತಮ ಸಾಧನೆ’ ಎಂದರು.
Related Articles
Advertisement
ಕೆಂಪುಕೋಟೆಯಲ್ಲಿ ಒಲಿಂಪಿಕ್ಸ್ ಕ್ರೀಡಾಳುಗಳುಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ ಭಾರತದ ಕ್ರೀಡಾಪಟುಗಳೆಲ್ಲ ಈಗಾಗಲೇ ತವರಿಗೆ ವಾಪಸಾಗಿದ್ದಾರೆ. ಒಟ್ಟು 117 ಕ್ರೀಡಾಳುಗಳು ಈ ಬಾರಿಯ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದರು. ಇವರೆಲ್ಲರಿಗೂ ಆ. 15ರ ಸ್ವಾತಂತ್ರ್ಯ ದಿನದಂದು ಹೊಸದಿಲ್ಲಿಯ ಕೆಂಪುಕೋಟೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅನಂತರ ಇವರೆಲ್ಲರನ್ನೂ ಪ್ರಧಾನಿ ನರೇಂದ್ರ ಮೋದಿಯವರು ಅಪರಾಹ್ನ ಒಂದು ಗಂಟೆಗೆ ಭೇಟಿ ಯಾಗಿ ಮಾತುಕತೆ ನಡೆಸಲಿದ್ದಾರೆ. ಪದಕ ವಿಜೇತ ಕ್ರೀಡಾಪಟುಗಳನ್ನು ಪ್ರಧಾನಿಯವರು ಈ ಮೊದಲೇ ಕರೆ ಮಾಡಿ ಅಭಿನಂದಿಸಿದ್ದರು.
ಭಾರತಕ್ಕೆ ಬೆಳ್ಳಿ ಪದಕ ತಂದಿತ್ತ ನೀರಜ್ ಚೋಪ್ರಾ ಜರ್ಮನಿಗೆ ತೆರಳಿರುವುದರಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ.