Advertisement

ಚೆಸ್‌ ಒಲಿಂಪಿಯಾಡ್‌: ಒಲಿಂಪಿಕ್‌ ಶೈಲಿಯಲ್ಲಿ ಜ್ಯೋತಿ ರಿಲೇ

11:23 PM Jun 07, 2022 | Team Udayavani |

ಚೆನ್ನೈ: 44ನೇ ಚೆಸ್‌ ಒಲಿಂಪಿಯಾಡ್‌ ಜುಲೈ-ಆಗಸ್ಟ್‌ನಲ್ಲಿ ಭಾರತದಲ್ಲಿ ನಡೆಯಲಿದೆ. ಈ ಕೂಟದಲ್ಲಿ ಒಲಿಂಪಿಕ್‌ ಶೈಲಿಯಲ್ಲಿ ಜ್ಯೋತಿ ರಿಲೇ ಪರಿಚಯಿಸಲು ನಿರ್ಧರಿಸಲಾಗಿದೆ ಎಂದು ಚೆಸ್‌ ಕ್ರೀಡೆಯ ವಿಶ್ವ ಆಡಳಿತ ಮಂಡಳಿ ಪ್ರಕಟಿಸಿದೆ.

Advertisement

ಈ ರಿಲೇಯು ಚೆಸ್‌ನ ಜನ್ಮಸ್ಥಳವಾದ ಭಾರತದಿಂದ ಆರಂಭವಾಗಲಿದೆ. ಆಬಳಿಕ ಆತಿಥ್ಯ ರಾಷ್ಟ್ರಕ್ಕೆ ತಲಪುವ ಮೊದಲು ಎಲ್ಲ ಖಂಡಗಳಿಗೆ ಸಂಚರಿಸಲಿದೆ. ಆದರೆ ಸಮಯದ ಅಭಾವದಿಂದಾಗಿ ಜ್ಯೋತಿ ರಿಲೇಯು ಈ ಬಾರಿ ಭಾರತದಲ್ಲಿ ಮಾತ್ರ ಸಂಚರಿಸಲಿದೆ. ಚೆಸ್‌ ಲೆಜೆಂಡ್‌ ವಿಶ್ವನಾಥನ್‌ ಆನಂದ್‌ ರಿಲೇಯಲ್ಲಿ ಭಾಗವಹಿಸಲಿರುವ ಚೆಸ್‌ಪಟುಗಳಲ್ಲಿ ಒಬ್ಬರಾಗಿದ್ದಾರೆ.

ಚೆನ್ನೈ ಒಲಿಂಪಿಯಾಡ್‌ ಆರಂಭವಾಗಲು 50 ದಿನಗಳಿವೆ. ವೀಕ್ಷಿಸಿ, ಪ್ರೋತ್ಸಾಹಿಸಿ, ಆನಂದಿಸಿ ಮತ್ತು ಒಲಿಂಪಿಯಾಡ್‌ ಜ್ಯೋತಿ ರಿಲೇಯಲ್ಲಿ ಭಾಗವಹಿಸಿ ಎಂದು ಆನಂದ್‌ ಟ್ವೀಟ್‌ ಮಾಡಿದ್ದಾರೆ.

ಸರಕಾರ, ಫಿಡೆ, ಮತ್ತು ಇತರ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಬಳಿಕ ಜ್ಯೋತಿ ರಿಲೆಯ ಸ್ಥಳ ಮತ್ತು ಮಾರ್ಗವನ್ನು ಪ್ರಕಟಿಸಲಾಗುವುದು ಎಂದು ಒಲಿಂಪಿಯಾಡ್‌ ಕೂಟದ ನಿರ್ದೇಶಕ ಭರಾತ್‌ ಸಿಂಗ್‌ ಚೌಹಾಣ್‌ ತಿಳಿಸಿದ್ದಾರೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next