Advertisement

ವಿಶ್ವಕಪ್‌ ಶೂಟಿಂಗ್‌ ತಂಡಕ್ಕೆ ಮರಳಿದ ವಿಜಯ್‌ ಕುಮಾರ್‌

11:31 PM Sep 02, 2022 | Team Udayavani |

ಹೊಸದಿಲ್ಲಿ: ಒಲಿಂಪಿಕ್‌ ಬೆಳ್ಳಿ ವಿಜೇತ ವಿಜಯ್‌ ಕುಮಾರ್‌ ಮುಂಬರುವ ಐಎಸ್‌ಎಸ್‌ಎಫ್ ವಿಶ್ವಕಪ್‌ ಶೂಟಿಂಗ್‌ ಕೂಟಕ್ಕೆ ಆಯ್ಕೆಯಾದ 48 ಸದಸ್ಯರ ಭಾರತೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಲಂಡನ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಬಳಿಕ ವಿಜಯ್‌ ಭಾಗವಹಿಸುತ್ತಿರುವ ಅತೀ ದೊಡ್ಡ ಕೂಟ ಇದಾಗಿದೆ.

Advertisement

ಈಜಿಪ್ಟ್ನ ಕೈರೋದಲ್ಲಿ ಅ. 12ರಿಂದ 25ರ ವರೆಗೆ ನಡೆಯಲಿರುವ ಈ ಕೂಟ ನಡೆಯಲಿದೆ. ಭಾರತೀಯ ರೈಫ‌ಲ್‌ ಮತ್ತು ಪಿಸ್ತೂಲ್‌ ತಂಡದಲ್ಲಿ 48 ಸ್ಪರ್ಧಿಗಳನ್ನು ಭಾರತೀಯ ರೈಫ‌ಲ್‌ ಅಸೋಸಿಯೇಶನ್‌ ಆಯ್ಕೆ ಮಾಡಿದೆ.

2012ರ ಒಲಿಂಪಿಕ್ಸ್‌ನ 25 ಮೀ. ರ್ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದ ವಿಜಯ್‌ ಆಬಳಿಕ ತೀವ್ರ ತರದ ಭುಜದ ನೋವಿನಿಂದಾಗಿ ದೀರ್ಘ‌ ಸಮಯ ವಿಶ್ರಾಂತಿ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next